ಅಮೆರಿಕದ ಶಿವ ದೇವಾಲಯದ ಗೋಡೆ ಮೇಲೆ 'ಗೆಟ್ ಔಟ್'!

ವಾಷಿಂಗ್ಟನ್: ವಾಷಿಂಗ್ಟನ್‘ನಲ್ಲಿ ಮಹಾಶಿವರಾತ್ರಿ ಆಚರಣೆಯ ಸಂಭ್ರಮದಲ್ಲಿದ್ದ ಅನಿವಾಸಿ ಭಾರತೀಯರಿಗೆ ಶಾಕ್ ಆಗಿದೆ. ಅಮೆರಿಕದಲ್ಲಿ ಶಿವ ದೇವಾಲಯದ ಗೋಡೆಯೊಂದರ ಮೇಲೆ ದ್ವೇಷಪೂರಿತ ಹೇಳಿಕೆಯನ್ನು ಬರೆಯಲಾಗಿದ್ದು, ಆತಂಕದ ವಾತಾವರಣ ಸೃಷ್ಟಿಯಾಗಿದೆ.
ವಾಷಿಂಗ್ಟನ್‌ನ ಸಿಯಾಟಲ್ ಮೆಟ್ರೋಪಾಲಿಟನ್‌ನಲ್ಲಿರುವ ದೇವಾಲಯದ ಗೋಡೆ ಮೇಲೆ 'ಗೆಟ್ ಔಟ್'(ಹೊರಟು ಹೋಗಿ) ಎಂದು ಬರೆಯಾಗಿದ್ದು, ಜತೆಗೆ ಸ್ವಸ್ತಿಕ ಚಿಹ್ನೆಯನ್ನು ಪಕ್ಕದಲ್ಲಿ ಚಿತ್ರಿಸಲಾಗಿದೆ. ಈ ಮೂಲಕ ದುಷ್ಕರ್ಮಿಗಳು ಅಮೆರಿಕದಲ್ಲಿರುವ ಹಿಂದೂಗಳಿಗೆ ಆಘಾತದ ಸಂದೇಶವನ್ನು ರವಾನಿಸಿದ್ದಾರೆ. ಈ ಸಂಬಂಧ ಅಮೆರಿಕದಲ್ಲಿ ನೆಲೆಸಿರುವ ಭಾರತೀಯರು ಖಂಡನೆ ವ್ಯಕ್ತಪಡಿಸಿದ್ದಾರೆ.
ವಾಷಿಂಗ್ಟನ್ ವಾಯುವ್ಯ ಭಾಗದಲ್ಲಿರುವ ಅತಿ ದೊಡ್ಡ ಹಿಂದೂಗಳು ದೇವಾಲಯ ಇದಾಗಿದೆ. ದ್ವೇಷಪೂರಿತ ಹೇಳಿಕೆ ಹಿನ್ನೆಲೆಯಲ್ಲಿ ಅಮೆರಿಕ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಅಮೆರಿಕದಲ್ಲಿ ಈ ರೀತಿಯ ಘಟನೆಗಳು ನಡೆಯಬಾರದಿತ್ತು. ಹೊರಟು ಹೋಗುವಂತೆ ಹೇಳಲು ನೀವ್ಯಾರು? ಯುಎಸ್ ವಲಸೆಗಾರರ ರಾಷ್ಟ್ರವಾಗಿದೆ ಎಂದು ಹಿಂದೂ ದೇವಸ್ಥಾನ ಮತ್ತು ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷ ನಿತ್ಯಾ ನಿರಂಜನ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


