ದೇಶ

ಸುನಂದಾ ಸಾವು: ಮಾಧ್ಯಮಗಳ ವಿರುದ್ಧ ಹರಿಹಾಯ್ದ ತರೂರ್

ಸುನಂದಾ ಸಾವು ಪ್ರಕರಣ ಸಂಬಂಧಿಸಿದಂತೆ ಮಾಧ್ಮಮಗಳ ವರದಿಗಳು ಆಧಾರ ರಹಿತವಾಗಿದೆ...

ಸುನಂದಾ ಸಾವು: ಮಾಧ್ಯಮಗಳ ವಿರುದ್ಧ ಹರಿಹಾಯ್ದ ತರೂರ್
ಮಾಜಿ ಕೇಂದ್ರ ಸಚಿವ ಶಶಿ ತರೂರ್
Published On :

ನವದೆಹಲಿ: ಸುನಂದಾ ಸಾವು ಪ್ರಕರಣ ಸಂಬಂಧಿಸಿದಂತೆ ಮಾಧ್ಮಮಗಳ ವರದಿಗಳು ಆಧಾರ ರಹಿತವಾಗಿದೆ ಎಂದಿರುವ ಕೇಂದ್ರ ಮಾಜಿ ಸಚಿವ ಶಶಿ ತರೂರ್ ಮಾಧ್ಯಮಗಳ ವಿರುದ್ಧ ಹರಿಹಾಯ್ದಿದ್ದಾರೆ.

ಈ ಕುರಿತಂತೆ ಇಂದು ತಮ್ಮ ಟ್ವಿಟರ್ ಮೂಲಕ ಪ್ರತಿಕ್ರಿಯೆ ನೀಡಿರುವ ಶಶಿ ತರೂರ್, ಸುನಂದಾ ಸಾವು ಕುರಿತಂತೆ ಮಾಧ್ಯಮಗಳು ನನ್ನ ವಿರುದ್ಧ ಸುಳ್ಳು ವರದಿ ಪ್ರಸಾರ ಮಾಡುತ್ತಿದ್ದು, ಈ ವರದಿಗಳು ಆಧಾರ ರಹಿತ ಕಥೆಗಳಾಗಿವೆ ಆರೋಪ ವ್ಯಕ್ತಪಡಿಸಿದ್ದಾರೆ.

ನಮ್ಮ ದೇಶಕ್ಕೆ ಉತ್ತಮ ಹಾಗೂ ಪ್ರಮಾಣಿಕ ಪತ್ರಿಕೋದ್ಯಮ ಅವಶ್ಯಕತೆಯಿದ್ದು, ಟಿಆರ್‌ಪಿ ಹೆಚ್ಚಿಸುಕೊಳ್ಳುವ ಸಲುವಾಗಿ ಇಲ್ಲ ಸಲ್ಲದ ಸುಳ್ಳು ವರದಿಗಳನ್ನು ಮಾಧ್ಯಮಗಳು ಪ್ರಸಾರ ಮಾಡುತ್ತಿವೆ ಎಂದು ಹೇಳಿದ್ದಾರೆ.

ಸುನಂದಾ ಅವರ ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ದೆಹಲಿಯ ಎಸ್‌ಐಟಿ ಪೊಲೀಸರು ಸುನಂದಾ ಪುಷ್ಕರ್ ಅವರ ಪತಿ ಹಾಗೂ ಕೇಂದ್ರ ಮಾಜಿ ಸಚಿವ ಶಶಿ ತರೂರ್ ಅವರನ್ನು ಈವರೆಗೂ 3 ಬಾರಿ ವಿಚಾರಣೆಗೊಳಪಡಿಸಿತ್ತು. ವಿಚಾರಣೆ ವೇಳೆ ಶಶಿ ತರೂರ್ ಅವರ ಆಪ್ತರಾದ ಸಂಜಯ್ ದಿವನ್, ಡ್ರೈವರ್ ಬಜರಂಗಿ ಹಾಗೂ ನಾರಾಯಣ್ ಅವರನ್ನೂ ತನಿಖೆಗೊಳಪಡಿಸಲಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.