ದೇಶ

ರಾಹುಲ್, ಸೋನಿಯಾ ಹಸ್ತಕ್ಷೇಪ ಮಾಡಿಲ್ಲ

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅಥವಾ ಉಪಾಧ್ಯಕ್ಷ ರಾಹುಲ್ ಗಾಂಧಿ ಯಾವತ್ತೂ ಪರಿಸರ ಸಚಿವಾಲಯದ ಕೆಲಸ ಕಾರ್ಯದಲ್ಲಿ...

ರಾಹುಲ್, ಸೋನಿಯಾ ಹಸ್ತಕ್ಷೇಪ ಮಾಡಿಲ್ಲ
ಜೈರಾಂ ರಮೇಶ್
Published On :

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅಥವಾ ಉಪಾಧ್ಯಕ್ಷ ರಾಹುಲ್ ಗಾಂಧಿ ಯಾವತ್ತೂ ಪರಿಸರ ಸಚಿವಾಲಯದ ಕೆಲಸ ಕಾರ್ಯದಲ್ಲಿ ಹಸ್ತಕ್ಷೇಪ ಮಾಡಿಲ್ಲ ಎಂದು ಕೇಂದ್ರದ ಮಾಜಿ ಸಚಿವ ಜೈರಾಂ ರಮೇಶ್ ಹೇಳಿದ್ದಾರೆ.

ರಾಹುಲ್ ಗಾಂಧಿ ಪರಿಸರ ಸಚಿವಾಲಯದ ಕೆಲಸದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದರು ಎಂದು ಮಾಜಿ ಸಚಿವೆ ಜಯಂತಿ ನಟರಾಜನ್ ಇತ್ತೀಚೆಗೆ ಆರೋಪಮಾಡಿದ್ದರು. ಅದಕ್ಕೆ ರಮೇಶ್ ಈ ಪ್ರತಿಕ್ರಿಯೆ ನೀಡಿದ್ದಾರೆ.

2009ರಿಂದ 11ರ ವರೆ-ಗೆ ಪರಿಸರ ಸಚಿವರಾಗಿದ್ದ ಅವಧಿಯನ್ನು ಮುಖ್ಯವಾಗಿಟ್ಟುಕೊಂಡು ತಾವು ಬರೆದ `ಗ್ರೀನ್ ಸಿಗ್ನಲ್ಸ್' ಕೃತಿ ಬಿಡುಗಡೆಗೂ ಮುನ್ನ ಜೈರಾಂ ಈ ಹೇಳಿಕೆ ನೀಡಿದ್ದಾರೆ. ಜೈರಾಂ ಅವರು ಜಯಂತಿ ನಟರಾಜನ್ ಅವರಿಗಿಂತ ಮೊದಲು ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವರಾಗಿದ್ದರು. ಮೆಗಾ ಯೋಜನೆಗಳಿಗೆ ಸಂಬಂಧಿಸಿ ರಾಹುಲ್ ಕೆಲವು ನಿರ್ದೇಶನ ನೀಡುತ್ತಿದ್ದರು.

ಈ ಯೋಜನೆಗಳು ಅನುಷ್ಠಾನವಾಗದ್ದಕ್ಕೆ ಕೊನೆಗೆ ತನ್ನನ್ನೇ ಹರಕೆಯ ಕುರಿ ಮಾಡಿದರು ಎಂದು ಜಯಂತಿ ಆರೋಪಿಸಿದ್ದರು. ಜಯಂತಿ ಆರೋಪದ ಕುರಿತು ಯಾವುದೇ ಹೇಳಿಕೆ ನೀಡಲು ನಿರಾಕರಿಸಿರುವ ಜೈರಾಂ, ಆ ಕುರಿತು ಅವರನ್ನೇ ಕೇಳಿ ಎಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.