ದೇಶ

ಅಮಿತ್ ಶಾ ಮಗನ ಮದುವೆ ಮೇಲೂ ಕರಿಛಾಯೆ!

ಚುನಾವಣೆ ಫಲಿತಾಂಶಗಳು ರಾಜಕಾರಣಿಗಳ ಖಾಸಗಿ ಬದುಕಿನ ಮೇಲೆ ಹೇಗೆ ಪ್ರಭಾವ ಬೀರುತ್ತವೆ ಎನ್ನುವುದಕ್ಕೆ ಇದೊಂದು ಉದಾಹರಣೆ...

ಅಮಿತ್ ಶಾ ಮಗನ ಮದುವೆ ಮೇಲೂ ಕರಿಛಾಯೆ!
Published On :

ಚುನಾವಣೆ ಫಲಿತಾಂಶಗಳು ರಾಜಕಾರಣಿಗಳ ಖಾಸಗಿ ಬದುಕಿನ ಮೇಲೆ ಹೇಗೆ ಪ್ರಭಾವ ಬೀರುತ್ತವೆ ಎನ್ನುವುದಕ್ಕೆ ಇದೊಂದು ಉದಾಹರಣೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪುತ್ರ ಜಯ್ ಶಾ ಮದುವೆ ಮಂಗಳವಾರ ಅಹಮದಾಬಾದ್‌ನಲ್ಲಿ ನಡೆಯಿತು.

ಶಾ ಪುತ್ರ ಮದುವೆಯೆಂದರೆ ಕೇಳಬೇಕೇ? ವೈಎಂಐಸಿ ಕ್ಲಬ್‌ನಲ್ಲಿ ಅದ್ಧೂರಿಯಾಗಿ ಎಲ್ಲಾ ತಯಾರಿಗಳು ನಡೆದಿದ್ದವು. ಮದುವೆ ಮನೆಯ ಹೊರಗಡೆ ಪಟಾಕಿ ಸಿಡಿಸಿ ಶಾ ಮನೆಯವರು, ಅಭಿಮಾನಿಗಳು ಸಂಭ್ರಮಿಸುತ್ತಿದ್ದರು.

ದೆಹಲಿ ಫಲಿತಾಂಶ ಈ ಸಂಭ್ರಮದ ಮೇಲೆ ತಣ್ಣೀರೆರೆಚಿತು. ಫಲಿತಾಂಶ ಹೊರಬರುತ್ತಲೇ ಎಲ್ಲ ಸಂಭ್ರಮಕ್ಕೂ ತಣ್ಣೀರೆರಚಿದಂತಾಯ್ತು. ದುಬಾರಿ ಸಂಭಾವನೆ ತೆತ್ತು ಕರೆಸಲಾಗಿದ್ದ ಬ್ಯಾಂಡ್‌ಸೆಟ್ ತಂಡಕ್ಕೂ ಒಂದು ಸ್ವರವನ್ನೂ ನುಡಿಸದಂತೆ ಕಟ್ಟಪ್ಪಣೆ ಹೊರಡಿಸಲಾಯಿತು. ಪಟಾಕಿಗಳು ಅರ್ಧಕ್ಕರ್ಧ ಹಾಗೇ ಉಳಿದವು. ಬೆ.11.30ಕ್ಕೆ ಬಾರಾತ್‌ನೊಂದಿಗೆ ಆಗಮಿಸಿದ ಶಾ, ಯಾವುದೇ ಮಾಧ್ಯಮದವರ ಕೈಗೂ ಸಿಗಲಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.