40 ವರ್ಷ ಬಳಿಕ ಪಾಕ್ನಲ್ಲಿ ಬಿಡುಗಡೆಯಾಗ್ತಿದೆ ಶೋಲೇ
ಭಾರತೀಯ ಸಿನಿಮಾ ಇತಿಹಾಸ ದಲ್ಲಿ ಹೊಸ ದಾಖಲೆಯನ್ನೇ ಸೃಷ್ಟಿಸಿದ್ದ ನಟ ಅಮಿತಾಬ್, ಧರ್ಮೇಂದ್ರ ಅಭಿನಯದ ಚಿತ್ರ...

ನವದೆಹಲಿ: ಭಾರತೀಯ ಸಿನಿಮಾ ಇತಿಹಾಸ ದಲ್ಲಿ ಹೊಸ ದಾಖಲೆಯನ್ನೇ ಸೃಷ್ಟಿಸಿದ್ದ ನಟ ಅಮಿತಾಬ್, ಧರ್ಮೇಂದ್ರ ಅಭಿನಯದ ಚಿತ್ರ `ಶೋಲೇ' ಮುಂದಿನ ತಿಂಗಳು ಪಾಕಿಸ್ತಾನದಲ್ಲಿ ಬಿಡುಗಡೆಯಾಗಲಿದೆ!
ಹೌದು, ಅಚ್ಚರಿಯಾದರೂ ಇದು ನಿಜ. ಭಾರತ ದಲ್ಲಿ ಚಿತ್ರ ಬಿಡುಗಡೆಯಾದ ನಾಲ್ಕು ದಶಕಗಳ ಬಳಿಕ ಪಾಕ್ ಚಿತ್ರಮಂದಿರಗಳಲ್ಲಿ ಈಗ `ಗಬ್ಬರ್ ಸಿಂಗ್' ಅಬ್ಬರಿಸಲು ಸಿದ್ಧ ನಾಗಿದ್ದಾನೆ. ಮಾ .20ರಂದು ಪಾಕ್ನ ಬಹುತೇಕ ಚಿತ್ರಮಂದಿರ ಗಳಲ್ಲಿ `ಶೋಲೆ' ಬಿಡುಗಡೆಯಾಗಲಿದೆ. ಈ ಚಿತ್ರ ಬಿಡುಗಡೆಗೆ ಮೂಲ ಕಾರಣ ಮಂಡಿವಾಲಾ ಎಂಟರ್ಟೈನ್ಮೆಂಟ್ ಕಂಪನಿಯ ನದೀಂ ಮಂಡೀವಾಲ ಅವರ ಆಸಕ್ತಿ. `ಶೋಲೆ'ಯನ್ನು ಪಾಕ್ ಸಿನಿಮಾ ಮಂದಿರಗಳಲ್ಲಿ ಬಿಡುಗಡೆ ಮಾಡ ಬೇಕೆಂಬುದು ನದೀಂ ಅವರ ಬಹುದಿನದ ಕನಸಾಗಿತ್ತಂತೆ. ಅದನ್ನೀಗ ಅವರು ಸಾಕಾರಗೊಳಿಸಲು ಹೊರಟಿದ್ದಾರೆ. ನದೀಂ ಈ ಚಿತ್ರವನ್ನು 20 ಬಾರಿ ವೀಕ್ಷಿಸಿದ್ದಾರಂತೆ. ಕಳೆದ ವರ್ಷ ಶೋಲೆ ಚಿತ್ರ 3ಡಿ ರೂಪದಲ್ಲಿ ಬಿಡುಗಡೆಯಾದಾಗ ನದೀಂ ಆ ಚಿತ್ರದ ಬಿಡುಗಡೆ ಹಕ್ಕು ಕೊಳ್ಳಲು ಪ್ರಯತ್ನಿಸಿದ್ದರು. ಆದರೆ, ಅದು ಯಶಸ್ವಿಯಾಗಿರಲಿಲ್ಲ. ಆದರೆ, ಈಗ ಆ ಸಮಸ್ಯೆ ನಿವಾರಣೆಯಾಗಿದೆ. ಶೋಲೆ ಹಳೆಯ ಚಿತ್ರವಾಗಿರುವುದರಿಂದ
ಈಗಾಗಲೇ ಪಾಕ್ ಮಂದಿ ಈಗಾಗಲೇ ಅದನ್ನು ಡಿವಿಡಿ, ಯೂಟ್ಯೂಬ್ ಮೂಲಕ ನೋಡಿರುವ ಸಾಧ್ಯತೆ ಇದೆ. ಆದರೂ ಜನ ಸಿನಿಮಾ ಮಂದಿರಗಳಿಗೆ ಬರುತ್ತಾರೆ ಎನ್ನುವ ವಿಶ್ವಾಸ ನದೀಂ ಅವರ ದು. 1965ರ ಯುದ್ಧದ ಬಳಿಕ ಪಾಕ್ನಲ್ಲಿ ಭಾರತೀಯ ಚಿತ್ರಗಳ ಪ್ರದರ್ಶನ ಮೇಲೆ ನಿಷೇಧಹೇರಲಾಗಿತ್ತು. ಆದರೆ, 2006ರಲ್ಲಿ ಈ ನಿಷೇಧವ ನ್ನು ಆಗಿನ ಅಧ್ಯಕ್ಷ ಜ. ಪರ್ವೇಜ್ ಮುಷರಫ್ ರದ್ದು ಮಾಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


