ಖ್ಯಾತ ಮರಾಠಿ ಲೇಖಕ ಮಂಗೇಶ್ ಪಡ್ನಾಂವ್ಕರ್ ನಿಧನ
ಖ್ಯಾತ ಮಾರಾಠಿ ಲೇಖಕ, ಪದ್ಮ ಭೂಷಣ ಪುರಸ್ಕೃತ ಮಂಗೇಶ್ ಕೇಶವ್ ಪಂಡ್ನಾಂವ್ಕರ್ ಅವರು ಬುಧವಾರ ನಿಧನರಾಗಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು...

ಮುಂಬೈ: ಖ್ಯಾತ ಮಾರಾಠಿ ಲೇಖಕ, ಪದ್ಮ ಭೂಷಣ ಪುರಸ್ಕೃತ ಮಂಗೇಶ್ ಕೇಶವ್ ಪಂಡ್ನಾಂವ್ಕರ್ ಅವರು ಬುಧವಾರ ನಿಧನರಾಗಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು.
ದೀರ್ಘಕಾಲಿಕ ಅನಾರೋಗ್ಯದಿಂದ ಬಳಲುತ್ತಿದ್ದ ಮಂಗೇಶ್ ಪಡ್ನಾಂವ್ಕರ್ ಅವರು ಇಂದು ಮುಂಬೈನಲ್ಲಿ ನಿಧನರಾಗಿದ್ದಾರೆ. ಮಂಗೇಶ್ ಪಡ್ನಾಂವ್ಕರ್ ಅವರು 1929 ಮಾರ್ಚ್ 10ರಂದು ಮಹಾರಾಷ್ಟ್ರದ ಸಿಂದೂದುರ್ಗ ಜಿಲ್ಲೆಯ ವೆಂಗುರ್ಲಾದಲ್ಲಿ ಜನಿಸಿದ್ದರು. ಕಾಲೇಜು ದಿನಗಳಿಂದಲೇ ಸಾಹಿತ್ಯ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದ ಮಂಗೇಶ್ ಅವರು, ಬಾಂಬೇ ವಿಶ್ವವಿದ್ಯಾಲಯದಿಂದ ಮರಾಠಿ ಮತ್ತು ಸಂಸ್ಕೃತ ವಿಷಯದಲ್ಲಿ ಮಾಸ್ಟರ್ ಆಫ್ ಡಿಗ್ರಿ ಪದವಿ ಪಡೆದಿದ್ದರು.
2012ರಲ್ಲಿ ಪಡ್ನಾಂವ್ಕರ್ ಅವರಿಗೆ ಪುಣೆ ವಿಶ್ವವಿದ್ಯಾಲಯ ಜೀವನ್ ಸಾಧನಾ ಪುರಸ್ಕಾರ ನೀಡಿ ಗೌರವಿಸಿತ್ತು. ಶೋಧ್ ಕವಿತೇಚಾ ದಂತಹ ಹಲವು ಕೃತಿಗಳನ್ನು ರಚಿಸಿದ್ದಾರೆ. ಮಂಗೇಶ್ ಪಡ್ನಾಂವ್ಕರ್ ಅವರ ನಿಧನಕ್ಕೆ ಬಾಲಿವುಡ್ ನ ಗಣ್ಯರು ಸೇರಿದಂತೆ ಸಾಹಿತ್ಯ ವಲಯದ ಪ್ರಮುಖರು ಕಂಬನಿ ಮಿಡಿದಿದ್ದಾರೆ.
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಪಡ್ನಾಂವ್ಕರ್ ನಿಧನಕ್ಕೆ ಕಂಬನಿ ಮಿಡಿದಿದ್ದು, ಅವರ ಸಾಹಿತ್ಯ ಮತ್ತು ಕೃತಿಗಳು ಹಲವರ ಮೇಲೆ ಪ್ರಭಾವ ಬೀರಿತ್ತು. ಅವರ ನಿಧನದಿಂದ ಸಾಹಿತ್ಯ ಲೋಕದ ಒಂದು ಮುತ್ತು ಕಳಚಿದೆ ಎಂದು ಟ್ವೀಟ್ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


