'ಪ್ರಶಸ್ತಿ ವಾಪ್ಸಿ' ಅಪ್ರಬುದ್ಧ ನಡೆ: ಜ್ಞಾನಪೀಠಿ ರಘುವೀರ್ ಜೌಧರಿ
ಕೆಲವು ಖ್ಯಾತ ಸಾಹಿತಿಗಳು ಪ್ರಶಸ್ತಿ ನೀಡುತ್ತಿರುವುದು ಅಪ್ರಬುದ್ಧ ನಿರ್ಧಾರ ಮತ್ತು ಅವರ ಪ್ರತಿಭಟನಾ ರೀತಿ ಸರಿಯಿಲ್ಲ ಎಂದು 2015ನೇ ಸಾಲಿನ ಜ್ಞಾನಪೀಠ ಪ್ರಶಸ್ತಿ

ಅಹಮದಾಬಾದ್: ಕೆಲವು ಖ್ಯಾತ ಸಾಹಿತಿಗಳು ಪ್ರಶಸ್ತಿ ನೀಡುತ್ತಿರುವುದು ಒಂದು ಅಪ್ರಬುದ್ಧ ನಡೆ ಮತ್ತು ಅವರ ಪ್ರತಿಭಟನಾ ರೀತಿ ಸರಿಯಿಲ್ಲ ಎಂದು 2015ನೇ ಸಾಲಿನ ಜ್ಞಾನಪೀಠ ಪ್ರಶಸ್ತಿ ವಿಜೇತ, ಹಿರಿಯ ಗುಜರಾತಿ ಸಾಹಿತಿ ರಘುವೀರ್ ಚೌಧರಿ ಅವರು ಬುಧವಾರ ಹೇಳಿದ್ದಾರೆ.
ಸರ್ಕಾರದ ವಿರುದ್ಧ ಪ್ರತಿಭಟನೆ ಲೇಖಕರು ತಮ್ಮ ಪ್ರಶಸ್ತಿ ವಾಪಸ್ ನೀಡುವು ಬದಲು ಬೇರೆ ಮಾರ್ಗ ಅನುಸರಿಸಲಿ. ಏಕೆಂದರೆ ಈಗ ತುರ್ತು ಪರಿಸ್ಥಿತಿಯಂತಹ ವಾತಾವರಣ ನಿರ್ಮಾಣವಾಗಿಲ್ಲ ಎಂದಿದ್ದಾರೆ.
ಸಾಹಿತಿಗಳು ತಮ್ಮ ಪ್ರಶಸ್ತಿಯನ್ನು ವಾಪಸ್ ನೀಡುತ್ತಿರುವುದು ಒಂದು ಅಪ್ರಬುದ್ಧ ನಡೆ ಅಂತ ನಾನು ಭಾವಿಸಿದ್ದೇನೆ ಎಂದು ಚೌಧರಿ ಹೇಳಿದ್ದಾರೆ.
ದೇಶದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆ ಎಂದು ಆರೋಪಿಸಿ ಇತ್ತೀಚಿಗೆ ಹಲವು ಲೇಖಕರು ಹಾಗೂ ಕಲಾವಿದರು ತಮ್ಮ ಪ್ರಶಸ್ತಿಗಳನ್ನು ವಾಪಸ್ ಮಾಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


