ಮಹಿಳೆಯರಲ್ಲಿ ಸ್ಮೋಕಿಂಗ್ ಹೆಚ್ಚಳ: ಅಮೆರಿಕದ ನಂತರದ ಸ್ಥಾನ ಭಾರತಕ್ಕೆ
ದೇಶಾದ್ಯಂತ ಸಿಗರೇಟು ಸೇದುವವರ ಸಂಖ್ಯೆ ಶೇ.10ರಷ್ಟು ಇಳಿಕೆಯಾಗಿದೆ. ಆದರೆ ಮಹಿಳೆಯರಲ್ಲಿ ಧೂಮಪಾನ ಪ್ರಮಾಣ...

Published On :
ನವದೆಹಲಿ: ದೇಶಾದ್ಯಂತ ಸಿಗರೇಟು ಸೇದುವವರ ಸಂಖ್ಯೆ ಶೇ.10ರಷ್ಟು ಇಳಿಕೆಯಾಗಿದೆ. ಆದರೆ ಮಹಿಳೆಯರಲ್ಲಿ ಧೂಮಪಾನ ಪ್ರಮಾಣ ಹೆಚ್ಚಾಗಿದೆ. ಆರೋಗ್ಯಕ್ಕಾಗಿನ ಸಂಸತ್ನ ಸ್ಥಾಯಿ ಸಮಿತಿ ತನ್ನ ವರದಿಯಲ್ಲಿ ಈ ಅಂಶ ಉಲ್ಲೇಖಿಸಿದೆ ಎಂದು `ದ ಟೈಮ್ಸ್ ಆಫ್ ಇಂಡಿಯಾ' ವರದಿ ಮಾಡಿದೆ.
ದೇಶದಲ್ಲಿ ಮಹಿಳೆಯರಲ್ಲಿ ಧೂಮ ಪಾನ ಪ್ರಮಾಣ ಹೆಚ್ಚಿರುವುದರಿಂದ ಅಮೆರಿಕದ ನಂತರದ ಸ್ಥಾನವನ್ನು ಭಾರತ ಪಡೆದುಕೊಂಡಂತಾಗಿದೆ. ವರದಿಯ ಪ್ರಕಾರ 2014-15ನೇ ಸಾಲಿನಲ್ಲಿ 93.2 ಬಿಲಿಯನ್ ಸಿಗರೇಟುಗಳು ಬಳೆಕೆಯಾಗಿವೆ.
ಇದು 2012-13ನೇ ಸಾಲಿಗೆ ಹೋಲಿಕೆ ಮಾಡಿದರೆ 10 ಬಿಲಿಯನ್ ನಷ್ಟು ಕಡಿಮೆಯಾಗಿದೆ. ಇದೇ ಅವಧಿಯಲ್ಲಿ ಸಿಗರೇಟು ಉತ್ಪಾದನೆ 117 ಬಿಲಿಯನ್ ನಿಂದ 105.3ಕ್ಕೆ ಇಳಿದಿದೆ. ದೇಶದಲ್ಲಿ ಮಹಿಳೆಯರಲ್ಲಿ ಸಿಗರೇಟು ಸೇದುವ ಪ್ರಮಾಣ 1980ರಲ್ಲಿ 5.3 ದಶಲಕ್ಷದಿಂದ 2012ರಲ್ಲಿ 12.7 ದಶಲಕ್ಷಗಳಿಗೆ ಏರಿಕೆಯಾಗಿದೆ.
ವಾಷಿಂಗ್ಟನ್ ವಿಶ್ವವಿದ್ಯಾಲಯದ ಇನ್ಸ್ಟಿಟ್ಯೂಟ್ ಫಾರ್ ಹೆಲ್ತ್ ಮೆಟ್ರಿಕ್ಸ್ ಆ್ಯಂಡ್ ಇವಾಲ್ಯುವೇಷನ್ ಸ್ಮೋಕಿಂಗ್ ಪ್ರೆವೆಲೆನ್ಸ್ ಆ್ಯಂಡ್ ಸಿಗರೇಟ್ ಕನ್ಸಾಪ್ಶನ್ ಇನ್ 187 ಕಂಟ್ರೀಸ್ ಎಂಬ ಅಧ್ಯಯನದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಲಾಗಿದೆ.
ವಿಶ್ವದ ಇತರ ಭಾಗಗಳಲ್ಲಿ ಮಹಿಳೆಯರಲ್ಲಿ ಧೂಮಪಾನ ಕ್ರಮ ಇಳಿಕೆಯಾಗುತ್ತಿದ್ದರೆ, ಭಾರತದಲ್ಲಿ ಅದರ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಹೆಚ್ಚುತ್ತಿದೆ ಎಂದು ಅಧ್ಯಯನ ಹೇಳಿಕೊಂಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


