ದೇಶ

ಹೈದ್ರಾಬಾದ್ ಹೈದ್ರಾಬಾದ್‌ನವರಿಗಿರುವುದು, ಹೊರಗಿನವರಿಗಲ್ಲ: ಒವೈಸಿ

ಹೈದ್ರಾಬಾದ್ ಹೈದ್ರಾಬಾದ್‌ನವರಿಗಿರುವುದು, ಹೊರಗಿನವರಿಗಲ್ಲ ಎಂದು ಎಂಐಎಂ ಮುಖ್ಯಸ್ಥ ಅಸಾವುದ್ದೀನ್ ಒವೈಸಿ...

ಹೈದ್ರಾಬಾದ್ ಹೈದ್ರಾಬಾದ್‌ನವರಿಗಿರುವುದು, ಹೊರಗಿನವರಿಗಲ್ಲ: ಒವೈಸಿ
ಅಸಾವುದ್ದೀನ್ ಒವೈಸಿ
Published On :
ಹೈದ್ರಾಬಾದ್: ಹೈದ್ರಾಬಾದ್ ಹೈದ್ರಾಬಾದ್‌ನವರಿಗಿರುವುದು, ಹೊರಗಿನವರಿಗಲ್ಲ ಎಂದು ಎಂಐಎಂ ಮುಖ್ಯಸ್ಥ ಅಸಾವುದ್ದೀನ್ ಒವೈಸಿ ಹೇಳಿದ್ದಾರೆ.
ಗ್ರೇಟರ್ ಹೈದ್ರಾಬಾದ್ ಮುನ್ಸಿಪಲ್ ಕಾರ್ಪರೇಷನ್ (ಜಿಹೆಚ್‌ಎಂಸಿ) ಚುನಾವಣೆಯಲ್ಲಿ ಹೊರಗಿನವರು ಸ್ಪರ್ಧಿಸಿದ್ದರೆ, ಅವರನ್ನು ತಿರಸ್ಕರಿಸಿ ಎಂದು ಒವೈಸಿ ಜನತೆಗೆ ಆಹ್ವಾನ ನೀಡಿದ್ದಾರೆ.
ಅದೇ ವೇಳೆ ಮಜಲಿಸ್ ಇ ಇತ್ತೇಹಾದುಲ್ ಮುಸ್ಲಿಮೀನ್ (ಎಂಐಎಂ)  150 ಸೀಟುಗಳಲ್ಲಿ 70-75 ಸೀಟುಗಳಿಗೆ ಸ್ಪರ್ಧಿಸಲಿದೆ ಎಂದು ಅವರು ಹೇಳಿದ್ದಾರೆ.
ಹೈದ್ರಾಬಾದ್‌ನಲ್ಲಿ ಗುರುವಾರ ಸಾರ್ವಜನಿಕ ಸಭೆಯೊಂದನ್ನುದ್ದೇಶಿಸಿ ಮಾತನಾಡಿದ ಒವೈಸಿ, ಈ ಬಾರಿ ಹೈದ್ರಾಬಾದ್ ಮೇಯರ್ ಸ್ಥಾನ ಎಂಐಎಂ ನಾಯಕನಿಗೆ ಒಲಿಯಲಿದೆ ಎಂಬ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.
ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿ ಜಿಹೆಚ್‌ಎಂಸಿ ಅಧಿಕಾರ ಗಿಟ್ಟಿಸಿಕೊಂಡಿದ್ದ ಎಂಐಎಂ ನ ಮಜೀದ್ ಹುಸೈನ್ ಮೇಯರ್ ಆಗಿ ಮೂರು ವರ್ಷ ಪೂರೈಸಿದ್ದು, ಮುಂದಿನ ಮೇಯರ್ ಕೂಡಾ ಎಂಐಎಂ ನಾಯಕರೇ ಆಗುವ ಸಾಧ್ಯತೆ ಇದೆ ಎಂದು ಒವೈಸಿ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.