ಹರಾಜು ಮೂಲಕ ಖರೀದಿಸಿದ ದಾವೂದ್‌ನ ಕಾರಿಗೆ ಸಾರ್ವಜನಿಕವಾಗಿ ಅಗ್ನಿಸ್ಪರ್ಶ
ಭೂಗತ ಲೋಕದ ದೊರೆ ದಾವೂದ್ ಇಬ್ರಾಹಿಂ ಅವರ ಕಾರನ್ನು ಹರಾಜು ಮೂಲಕ ಖರೀದಿಸಿದ್ದ ಹಿಂದೂ ಮಹಾಸಭಾ ಆ ಕಾರನ್ನು ಬುಧವಾರ...

Published On :
ಮುಂಬೈ: ಭೂಗತ ಲೋಕದ ದೊರೆ ದಾವೂದ್ ಇಬ್ರಾಹಿಂ ಅವರ ಕಾರನ್ನು ಹರಾಜು ಮೂಲಕ ಖರೀದಿಸಿದ್ದ ಹಿಂದೂ ಮಹಾಸಭಾ ಆ ಕಾರನ್ನು ಬುಧವಾರ ಮಧ್ಯಾಹ್ನ 1 ಗಂಟೆಗೆ ಸುಡಲಿದೆ .ಗಾಜಿಯಾಬಾದ್‌ನ ಇಂದರಾಪುರದಲ್ಲಿ ಸಾರ್ವಜನಿಕವಾಗಿ ಕಾರನ್ನು ಸುಡಲು ತೀರ್ಮಾನಿಸಿರುವುದಾಗಿ ಸ್ವಾಮಿ ಚಕ್ರಪಾಣಿ ತಿಳಿಸಿದ್ದಾರೆ.
ದಾವೂದ್ ಇಬ್ರಾಹಿಂ ಮತ್ತು ಆತನ ಸಹಚರರು ದೇಶದಲ್ಲಿ ನಡೆಸಿದ ಭಯೋತ್ಪಾದನಾ ಕೃತ್ಯಗಳಿಗೆ ಅಂತ್ಯಕರ್ಮ ಮಾಡುವ ಸಂಕೇತವಾಗಿ ಈ ಕಾರನ್ನು ಸುಡಲಾಗುತ್ತಿದೆ. ಈ ಹಿಂದೆ ಆ ಕಾರನ್ನು ಆ್ಯಂಬುಲೆನ್ಸ್ ಮಾಡುವ ಬಗ್ಗೆ ಯೋಚಿಸಲಾಗಿತ್ತು. ಆದಾಗ್ಯೂ, ಈ ಕಾರು ಖರೀದಿಸಿದರೆ ಅದರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಡಿ ಕಂಪನಿ ಬೆದರಿಕೆಯನಿನು ಒಡ್ಡಿತ್ತು. ಇದೀಗ ಅವರಿಗೆ ತಕ್ಕ ಉತ್ತರ ನೀಡುವುದಕ್ಕಾಗಿಯೇ ಕಾರನ್ನು ಭಸ್ಮಗೊಳಿಸಲಾಗುತ್ತದೆ ಎಂದು ಚಕ್ರಪಾಣಿ ಹೇಳಿದ್ದಾರೆ.
ರು. 15,700 ಮೂಲ ಬೆಲೆಯಿದ್ದ ಕಾರನ್ನು ರು. 3.2 ಲಕ್ಷ ಬೆಲೆ ತೆತ್ತು ಹಿಂದೂ ಮಹಾಸಭಾ ಖರೀದಿಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


