ನಾಪತ್ತೆಯಾಗಿದ್ದ ಭಾರತದ ಪುರಾತನ ಗ್ರಂಥ ಅಮೆರಿಕದ ಮ್ಯೂಸಿಯಂನಲ್ಲಿ ಪತ್ತೆ
17ನೇ ಶತಮಾನದಲ್ಲಿ ರಚಿಸಲಾಗಿದೆ ಎಂದು ಹೇಳಲ್ಪಡುವ ಇಲ್ಲಿಯವರೆಗೆ ನಾಪತ್ತೆಯಾಗಿದ್ದ ಭಾರತೀಯ ಪುರಾತನ ಗ್ರಂಥವೊಂದರ ಹಸ್ತಪ್ರತಿ ಅಮೆರಿಕದ...

Published On :
ನಾಗ್ಪುರ: 17ನೇ ಶತಮಾನದಲ್ಲಿ ರಚಿಸಲಾಗಿದೆ ಎಂದು ಹೇಳಲ್ಪಡುವ ಇಲ್ಲಿಯವರೆಗೆ ನಾಪತ್ತೆಯಾಗಿದ್ದ ಭಾರತೀಯ ಪುರಾತನ ಗ್ರಂಥವೊಂದರ ಹಸ್ತಪ್ರತಿ ಅಮೆರಿಕದ ವೆರ್ಜಿನಿಯಾ ಮ್ಯೂಸಿಯಂನಲ್ಲಿ ಪತ್ತೆಯಾಗಿದೆ. ನಾಗಪುರದಲ್ಲಿ ರಚಿಸಲ್ಪಟ್ಟ ದ್ಯಾನೇಶ್ವರಿ ಎಂಬ ಗ್ರಂಥದ ಹಸ್ತಪ್ರತಿಯಾಗಿದೆ ಇದು. ಈ ಗ್ರಂಥದ ಹಸ್ತಪ್ರತಿ ನಾಪತ್ತೆಯಾಗಿರುವುದು ನಾಗ್ಪುರದ ಸಾಹಿತ್ಯಕಾರರಿಗೂ, ಚಿಂತಕರಿಗೂ ತಿಳಿದಿರಲಿಲ್ಲ.
ಅಮೆರಿಕದ ಅಲಬಾಮಾ ವಿವಿಯ ಅಸೋಸಿಯೇಟ್ ಪ್ರೊಫೆಸರ್ ಕ್ಯಾತ್ಲಿನ್ ಕಮ್ಮಿಂಗ್‌ಸಾನ್ ಎಂಬವರು ಸಂಶೋಧನೆ ಮಾಡುತ್ತಿರುವಾಗ ವರ್ಜೀನಿಯಾ ಮ್ಯೂಸಿಯಂನಲ್ಲಿ ಈ ಪಪುರಾತನ ಹಸ್ತ ಪ್ರತಿಯನ್ನು ಪತ್ತೆ ಹಚ್ಚಿದ್ದಾರೆ. ತಕ್ಷಣ ಅವರು ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಕಾರ್ಪರೇಷನ್‌ನ ಮಾಜಿ ಅಧಿಕಾರಿ ಶೇಷಯನ್ ದೇಶ್‌ಮುಖ್ ಜತೆ ಫೋನಲ್ಲಿ ಮಾತನಾಡಿ ವಿಷಯ ತಿಳಿಸಿದ್ದಾರೆ. ಆಮೇಲೆ ಈ ಗ್ರಂಥದ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಲು ಕ್ಯಾತ್ಲಿನ್ ನಾಗ್ಪುರ್‌ಗೆ ಬಂದಿದ್ದಾರೆ. ಹಸ್ತಪ್ರತಿಯನ್ನು ನೋಡಿದ ಸಂಶೋಧಕು ಇದು ಭಾರತದಲ್ಲೇ ರಚಿಸಲ್ಪಟ್ಟ ಗ್ರಂಥ ಎಂದು ಹೇಳಿದ್ದಾರೆ.
ಕ್ರಿಸ್ತಶಕ 1685ರಲ್ಲಿ ಇದು ರಚಿಸಲ್ಪಟ್ಟಿದ್ದು, 1986ರಲ್ಲಿ ಇದು ನಾಪತ್ತೆಯಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Maharashtraಅಮೆರಿಕಹಸ್ತಪ್ರತಿNagpurDnyaneshwariVirginia museum of fine Artsmanuscriptಪುರಾತನ ಗ್ರಂಥದ್ಯಾನೇಶ್ವರಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


