2020ಕ್ಕೆ ಭಾರತದ ಮೇಲೆ ದಾಳಿಗೆ ಇಸ್ಲಾಮಿಕ್ ಸ್ಟೇಟ್ ಸಂಚು
ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯ ಪ್ರಚಾರದ ಪ್ರಭಾವಕ್ಕೆ ಸಿಕ್ಕಿ ಸಿರಿಯಾಗೆ ಹೋಗಲು ಯೋಜನೆ ಹೂಡಿದ್ದ ಪುಣೆಯ 16ರ ಹರೆಯದ ಮುಸ್ಲಿಂ ಹುಡುಗಿಯನ್ನು...

ಪುಣೆ: ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯ ಪ್ರಚಾರದ ಪ್ರಭಾವಕ್ಕೆ ಸಿಕ್ಕಿ ಸಿರಿಯಾಗೆ ಹೋಗಲು ಯೋಜನೆ ಹೂಡಿದ್ದ ಪುಣೆಯ 16ರ ಹರೆಯದ ಮುಸ್ಲಿಂ ಹುಡುಗಿಯನ್ನು ಮಹಾರಾಷ್ಟ್ರ ಭಯೋತ್ಪಾದಕ ನಿಗ್ರಹ ದಳದ ಅಧಿಕಾರಿಗಳು ತೀವ್ರ ವಿಚಾರಣೆಗೊಳಪಡಿಸಿದ ವೇಳೆ ಬಾಲಕಿ ಆಘಾತಕಾರಿ ವಿಷಯಗಳನ್ನು ಬಾಯ್ಬಿಟ್ಟಿದ್ದು, 2020ರ ವೇಳೆ ಭಾರತದ ಮೇಲೆ ದಾಳಿಗೆ ಇಸಿಸ್ ಸಂಚು ರೂಪಿಸಿದೆ ಎಂದು ಹೇಳಿದ್ದಾಳೆ.
ಸಿರಿಯಾ ಮತ್ತು ಇರಾಕ್‌ನಾಚೆ ವ್ಯಾಪ್ತಿ ವಿಸ್ತರಿಸಿಕೊಳ್ಳಲು ಇಸಿಸ್ ಸಿದ್ಧತೆ ನಡೆಸುತ್ತಿದೆ. 2020ರ ವೇಳೆಗೆ ಭಾರತದ ಮೇಲೆ ದಾಳಿ ನಡೆಸುವ ಇರಾದೆ ಇಸಿಸ್ ಗಿದೆ' ಎಂದು ಆಕೆ ಹೇಳಿದ್ದಾಳೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಭಾರತ ತೊರೆದು ಮುಂದಿನ ವರ್ಷ ಸಿರಿಯಾಗೆ ಹೋಗಲು ಈಕೆ ಚಿಂತನೆ ನಡೆಸಿದ್ದಳು ಭಯೋತ್ಪಾದಕ ನಿಗ್ರಹ ದಳ ಅಧಿಕಾರಿಗಳು ತಿಳಿಸಿದ್ದಾರೆ. ಈ ವೇಳೆ ಆಕೆ ಸಂಪರ್ಕದಲ್ಲಿರುವ 20 ಮಂದಿಯ ಹೆಸರನ್ನು ಬಾಯ್ಬಿಟ್ಟಿದ್ದಾಳೆ. ಇಸಿಸ್ ಈಕೆಯನ್ನು ಆತ್ಮಾಹುತಿ ಬಾಂಬರ್ ಮಾಡಲು ಯೋಚಿಸಿತ್ತು ಎಂದು ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


