ಮಗಳಿಗೆ ನ್ಯಾಯ ಒದಗಿಸಲು ನಾವು ಸೋತಿದ್ದೇವೆ: ನಿರ್ಭಯಾ ತಂದೆ
ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಇಂದಿಗೆ ಮೂರು ವರ್ಷ. ಮಗಳಿಗೆ ನ್ಯಾಯ ಕೊಡಿಸುವಲ್ಲಿ ನಾವು ಸೋತಿದ್ದೇವೆ....

ನವದೆಹಲಿ: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಇಂದಿಗೆ ಮೂರು ವರ್ಷ. ಮಗಳಿಗೆ ನ್ಯಾಯ ಕೊಡಿಸುವಲ್ಲಿ ನಾವು ಸೋತಿದ್ದೇವೆ, ನ್ಯಾಯ ಸಿಗುತ್ತದೆ ಎಂಬ ನಂಬಿಕೆ ಕಳೆದುಕೊಂಡಿದ್ದೇವೆ ಎಂದು ನಿರ್ಭಯಾ ತಂದೆ ನೊಂದು ನುಡಿದಿದ್ದಾರೆ.
ನಿರ್ಭಯಾ ಅತ್ಯಾಚಾರ ಪ್ರಕರಣದಲ್ಲಿ ಭಾಗಿಯಾಗಿದ್ದ ಬಾಲಾಪರಾಧಿಯನ್ನು ಬಿಡುಗಡೆ ಮಾಡದಂತೆ ಮನವಿ ಸಲ್ಲಿಸಿರುವುದಾಗಿ ಅವರು ಹೇಳಿದ್ದಾರೆ.
ಪ್ರತಿ ದಿನ ನಿರ್ಭಯಾ ನೆನಪು ನಮ್ಮನ್ನು ಕಾಡುತ್ತದೆ. ಅವಳ ನೆನಪಿನೊಂದಿಗೆ ಬದುಕುತ್ತಿದ್ದೇವೆ. ನಿರ್ಭಯಾ ಸಾವಿಗೆ ನಮ್ಮಿಂದ ಸೂಕ್ತ ನ್ಯಾಯ ಒದಗಿಸಲಿಲ್ಲವೆಂಬ ನೋವು ಕಾಡುತ್ತಿದೆ ಎಂದು 50 ವರ್ಷದ ನಿರ್ಭಯಾ ತಂದೆ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಪ್ರಕರಣ ನಡೆದು ಮೂರು ವರ್ಷಗಳಾದರೂ ನಾಲ್ಕು ಅಪರಾಧಿಗಳನ್ನು ಗಲ್ಲಿಗೇರಿಸಿಲ್ಲ, ಆರು ಜನ ಅಪರಾಧಿಗಳಲ್ಲಿಯೇ ಬಾಲಾಪರಾಧಿ ಅತ್ಯಂತ ಕ್ರೂರಿಯಾಗಿದ್ದೂ, ಆತನನ್ನು ಡಿಸೆಂಬರ್ 20 ರಂದು ಆತನನ್ನು ಬಿಡುಗಡೆ ಗೊಳಿಸಲು ನ್ಯಾಯಾಲಯ ಆದೇಶಿಸಿದೆ. ಆತನನ್ನು ಬಿಡುಗಡೆ ಮಾಡಬಾರದು ಆತ ಸಮಾಜಕ್ಕೆ ಕಂಟಕ ಎಂದು ನಿರ್ಭಯಾ ತಂದೆ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


