ದೇಶ

ಸದನದಲ್ಲಿ ಆಕ್ಷೇಪಾರ್ಹ ವಿಡಿಯೋ ವೀಕ್ಷಿಸಿದ ಒಡಿಶಾ ಕಾಂಗ್ರೆಸ್ ಶಾಸಕ ಅಮಾನತು

ಸದನದಲ್ಲಿ ಆಕ್ಷೇಪಾರ್ಹ ದೃಶ್ಯಗಳನ್ನು ವೀಕ್ಷಿಸುತ್ತಿದ್ದ ಒಡಿಶಾ ಕಾಂಗ್ರೆಸ್ ನ ಶಾಸಕನನ್ನು ಅಮಾನತುಗೊಳಿಸಲಾಗಿದೆ.

ಸದನದಲ್ಲಿ ಆಕ್ಷೇಪಾರ್ಹ ವಿಡಿಯೋ ವೀಕ್ಷಿಸಿದ ಒಡಿಶಾ ಕಾಂಗ್ರೆಸ್ ಶಾಸಕ ಅಮಾನತು
ಅಮಾನತುಗೊಂಡ ಕಾಂಗ್ರೆಸ್ ಶಾಸಕ ನಬ ಕಿಶೋರ್ ದಾಸ್(ಸಂಗ್ರಹ ಚಿತ್ರ)
Published On :

ಭುವನೇಶ್ವರ್: ಸದನದಲ್ಲಿ ಆಕ್ಷೇಪಾರ್ಹ ದೃಶ್ಯಗಳನ್ನು ವೀಕ್ಷಿಸುತ್ತಿದ್ದ ಒಡಿಶಾ ಕಾಂಗ್ರೆಸ್ ನ ಶಾಸಕನನ್ನು ಅಮಾನತುಗೊಳಿಸಲಾಗಿದೆ.
ಒಡಿಶಾ ವಿಧಾನಮಂಡಲ ಅಧಿವೇಶನ ನಡೆಯುತ್ತಿದ್ದ ವೇಳೆ ಕಾಂಗ್ರೆಸ್ ಶಾಸಕ ನಬ ಕಿಶೋರ್ ದಾಸ್ ಮೊಬೈಲ್ ನಲ್ಲಿ ಆಕ್ಷೇಪಾರ್ಯ ವಿಡಿಯೋ ವೀಕ್ಷಿಸುತ್ತಿದ್ದದ್ದು ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಸ್ಪೀಕರ್ ನಿರಂಜನ್ ದಾಸ್ ಅವರು  ಕಿರೋಶ್ ಅವರನ್ನು ಒಂದು ವಾರ ಕಾಲ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. 
ಶಾಸಕ ಸದನದಲ್ಲಿ ಆಕ್ಷೇಪಾರ್ಯ ವಿಡಿಯೋ ನೋಡುತ್ತಿದ್ದ ಘಟನೆ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದ ವಿರೋಧ ಪಕ್ಷಗಳು ಶಾಸಕರ ಅಮಾನತಿಗೆ ಆಗ್ರಹಿಸಿದ್ದವು. ಮಂಗಳವಾರ ಅಮಾನತು ಆದೇಶ ಹೊರಡಿಸಿರುವ ಸ್ಪೀಕರ್ ಘಟನೆಯ ತನಿಖೆಯನ್ನು ಶಿಸ್ತುಪಾಲನಾ ಸಮಿತಿಗೆ ವಹಿಸಿದ್ದಾರೆ. ತಮ್ಮ ಮೇಲಿನ ಆರೋಪವನ್ನು ತಳ್ಳಿಹಾಕಿರುವ ಶಾಸಕ ಕಿಶೋರ್, ಮೊಬೈಲ್ ನಲ್ಲಿ ಫೇಸ್ ಬುಕ್ ಪುಟ ನೋಡುತ್ತಿರಬೇಕಾದರೆ, ಅಚಾನಕ್ಕಾಗಿ ಯೂಟ್ಯೂಬ್ ವಿಡಿಯೋ ಚಾಲನೆಗೊಂಡಿತು. ತಕ್ಷಣ ಅದನ್ನು ನಿಲ್ಲಿಸಿದೆ. ನಾನು ಯಾವುದೇ ಅಶ್ಲೀಲ ದೃಶ್ಯವನ್ನು ವೀಕ್ಷಿಸಿಲ್ಲ’ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.