ಲಜ್ಜಾ ವಿರುದ್ಧದ ಪ್ರತಿಭಟನೆಯನ್ನು ಜಾತ್ಯಾತೀತವಾದಿಗಳೇಕೆ ಪ್ರಶ್ನಿಸಿಲ್ಲ?: ತಸ್ಲಿಮಾ ನಸ್ರಿನ್
ಭಾರತದಲ್ಲಿ ನಿಷೇಧಿಸಲ್ಪಟ್ಟ ತಮ್ಮ ವಿವಾದಿತ ಕೃತಿ "ಲಜ್ಜಾ'ದ ಮಾರಾಟಕ್ಕೆ ಆಕ್ಷೇಪ ಕೋರಿ ತಮ್ಮ ಬಂಧನಕ್ಕೆ...

ನವದೆಹಲಿ: ಭಾರತದಲ್ಲಿ ನಿಷೇಧಿಸಲ್ಪಟ್ಟ ತಮ್ಮ ವಿವಾದಿತ ಕೃತಿ "ಲಜ್ಜಾ'ದ ಮಾರಾಟಕ್ಕೆ ಆಕ್ಷೇಪ ಕೋರಿ ತಮ್ಮ ಬಂಧನಕ್ಕೆ ಆಗ್ರಹಿಸಿ ಹೈದರಾಬಾದಿನ ಕೆಲವು ಮುಸ್ಲಿಂ ಮೂಲಭೂತವಾದಿಗಳು ಪ್ರತಿಭಟನೆ ನಡೆಸಿರುವುದಕ್ಕೆ ತಾವು ಸೆಕ್ಯುಲರ್ ಎಂದು ಹೇಳಿಕೊಂಡು ತಿರುಗುವವರು ಯಾರೂ ಕೂಡ ಆಕ್ಷೇಪ ವ್ಯಕ್ತಪಡಿಸಿಲ್ಲ ಮತ್ತು ಅಸಹಿಷ್ಣುತೆಯ ವಿರುದ್ಧ ಕೂಡ ಧ್ವನಿಯನ್ನು ಎತ್ತಿಲ್ಲ ಎಂದು ಬಾಂಗ್ಲಾದೇಶದ ಖ್ಯಾತ ಲೇಖಕಿ ತಸ್ಲಿಮಾ ನಸ್ರಿನ್ ಅವರು ಆರೋಪಿಸಿದ್ದಾರೆ.
ಹೈದರಾಬಾದಿನ ಸುಂದರ್ಯಾ ವಿಜ್ಞಾನ ಕೇಂದ್ರದಲ್ಲಿ ಶಿಕ್ಷಕರ ಒಕ್ಕೂಟವು ಏರ್ಪಡಿಸಿದ ಪುಸ್ತಕ ಪ್ರದರ್ಶನ - ಮಾರಾಟದಲ್ಲಿ ತಸ್ಲಿಮಾ ಅವರ "ಲಜ್ಜಾ' ಕಾದಂಬರಿಯ ಪ್ರತಿಗಳನ್ನು ಕೂಡ ಇಡಲಾಗಿತ್ತು.
ತಸ್ಲಿಮಾ ಅವರ ಈ ಕೃತಿಗೆ ಭಾರತದಲ್ಲಿ ನಿಷೇಧ ಹೇರಲಾಗಿದೆ ಎಂದು ಭಾವಿಸಿದ್ದ ಮುಸ್ಲಿಂ ಮೂಲಭೂತವಾದಿಗಳು ಲಜ್ಜಾ ಕೃತಿಯ ಮಾರಾಟಕ್ಕೆ ಆಕ್ಷೇಪ ವ್ಯಕ್ತಪಡಿಸಿ ಲೇಖಕಿಯ ಬಂಧನಕ್ಕೆ ಆಗ್ರಹಿಸಿದರು. ಪುಸ್ತಕ ಮಾರಾಟದ ಕೌಂಟರ್ನಲ್ಲಿ ಸಿಬಂದಿಗಳೊಂದಿಗೆ ಮೂಲಭೂತವಾದಿಗಳು ಜಗಳವಾಡಿದರು. ಬಳಿಕ ಪೊಲೀಸರು ಮಧ್ಯಪ್ರವೇಶದಿಂದ ವಿವಾದ ತಣ್ಣಗಾಯಿತು.
ಘಟನೆಯ ಬಗ್ಗೆ ಟ್ವಿಟರ್ನಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಲೇಖಕಿ ತಸ್ಲಿಮಾ, ಅಸಹಿಷ್ಣುತೆ ಭಾರತದಲ್ಲಿ ಇದೆ ಎಂದು ಹೇಳಿಕೊಂಡು ಓಡಾಡುತ್ತಿರುವ ಯಾವುದೇ ಸೆಕ್ಯುಲರ್ ವಾದಿಗಳು ಮುಸ್ಲಿಂ ಮೂಲಭೂತವಾದಿಗಳನ್ನು ಅಸಹಿಷ್ಣುಗಳು ಎಂದು ಕರೆದಿಲ್ಲ. ಭಾರತದಲ್ಲಿನ ಯಾವುದೇ ಸೆಕ್ಯುಲರ್ವಾದಿಗಳು, ಲೇಖಕರು, ಚಿಂತಕರು ಈ ಅವಮಾನಕಾರಿ ಘಟನೆಯನ್ನು ಖಂಡಿಸಿದ್ದಾಗಲೀ, ಅಸಹಿಷ್ಣುತೆಯನ್ನು ದೂರಿಕೊಂಡದ್ದಾಗಲೀ ನನಗೆ ಕೇಳಿ ಬಂದಿಲ್ಲ' ಎಂದು ಹೇಳಿದ್ದಾರೆ. ಅಲ್ಲದೆ ಪುಸ್ತಕ ಮಾರಾಟ ಮಳಿಗೆಯಲ್ಲಿ ಮಾತ್ರವಲ್ಲದೆ ಮುಸ್ಲಿಂ ಮೂಲಭೂತವಾದಿಗಳು ನಡೆಸಿದ ಗಲಾಟೆಯ ವಿಡಿಯೋವನ್ನು ಕೂಡ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


