ದೇಶ

ಹರಾಜು ಮೂಲಕ ದಾವೂದ್‌ನ ರೆಸ್ಟೋರೆಂಟ್ ಖರೀದಿಸಿದ ಪತ್ರಕರ್ತ

ಭೂಗತ ಲೋಕದ ದೊರೆ ದಾವೂದ್ ಇಬ್ರಾಹಿಂ ಅವರ ರೆಸ್ಟೋರೆಂಟ್‌ನ್ನು ಹರಾಜು ಮೂಲಕ ಮಾಜಿ ಪತ್ರಕರ್ತ ಎಸ್ ಬಾಲಕೃಷ್ಣನ್ ಖರೀದಿಸಿ...

ಹರಾಜು ಮೂಲಕ ದಾವೂದ್‌ನ ರೆಸ್ಟೋರೆಂಟ್ ಖರೀದಿಸಿದ ಪತ್ರಕರ್ತ
ದಾವೂದ್ ಇಬ್ರಾಹಿಂ
Published On :
ಮುಂಬೈ: ಭೂಗತ ಲೋಕದ ದೊರೆ ದಾವೂದ್ ಇಬ್ರಾಹಿಂ ಅವರ ರೆಸ್ಟೋರೆಂಟ್‌ನ್ನು ಹರಾಜು ಮೂಲಕ ಮಾಜಿ ಪತ್ರಕರ್ತ ಎಸ್ ಬಾಲಕೃಷ್ಣನ್ ಖರೀದಿಸಿದ್ದಾರೆ. ಮುಂಬೈ ಪಾಕ್‌ಮೋಡಿಯಾ ರಸ್ತೆಯಲ್ಲಿರುವ ದೆಹಲಿ ಜೈಕ್ ಎಂಬ ರೆಸ್ಟೋರೆಂಟ್‌ನ್ನು ಬಾಲಕೃಷ್ಣ ಅವರು ತಮ್ಮದಾಗಿಸಿಕೊಂಡಿದ್ದಾರೆ. ಮಹರಾಷ್ಟ್ರ ಸರ್ಕಾರ ನಡೆಸಿದ ಹರಾಜು ಪ್ರಕ್ರಿಯೆಯಲ್ಲಿ ರು. 4.8 ಕೋಟಿಗೆ ಬಾಲಕೃಷ್ಣನ್ ಅವರು ದೆಹಲಿ ಜೆಕ್‌ನ್ನು ಖರೀದಿಸಿದ್ದಾರೆ.ಕೊಲಂಬಿಯಾದ ಹೋಟೆಲ್ ಡಿಪ್ಲೋಮ್ಯಾಟ್ ನಲ್ಲಿ ಹರಾಜು ಪ್ರಕ್ರಿಯೆ ನಡೆದಿತ್ತು.
ಬಾಲಕೃಷ್ಣನ್ ಅವರು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಾರೆ ಎಂಬುದು ಸುದ್ದಿಯಾದೊಡನೆ ಚೋಟಾ ಶಕೀಲ್‌ನಿಂದ ಬಾಲಕೃಷ್ಣನ್‌ಗೆ ಬೆದರಿಕೆ ಬಂದಿತ್ತು. ದೇಶಸೇವಾ ಸಮಿತಿ ಎಂಬ ಎನ್‌ಜಿಒ ಪರವಾಗಿ ತಾನು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದೆ ಎಂದು ಬಾಲಕೃಷ್ಣನ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.