ಭಾರತದಿಂದ 7.30 ಲಕ್ಷ ಟನ್ ಮಾಂಸ ರಫ್ತು
ಪ್ರಸಕ್ತ ಹಣಕಾಸು ಸಾಲಿನ ಏಪ್ರಿಲ್-ಅಕ್ಟೋಬರ್ ಅವಧಿಯಲ್ಲಿ ಭಾರತ 2,339.60 ದಶಲಕ್ಷ ಡಾಲರ್ ಮೌಲ್ಯದ 7.30 ಲಕ್ಷ ಟನ್ ಮಾಂಸ ರಫ್ತು ಮಾಡಿದೆ...

Published On :
ನವದೆಹಲಿ: ಪ್ರಸಕ್ತ ಹಣಕಾಸು ಸಾಲಿನ ಏಪ್ರಿಲ್-ಅಕ್ಟೋಬರ್ ಅವಧಿಯಲ್ಲಿ ಭಾರತ 2,339.60 ದಶಲಕ್ಷ ಡಾಲರ್ ಮೌಲ್ಯದ 7.30 ಲಕ್ಷ ಟನ್ ಮಾಂಸ ರಫ್ತು ಮಾಡಿದೆ.
ಈ ಸದ್ಯಕ್ಕೆ ಗೋಮಾಂಸ ರಫ್ತು ನಿಷೇಧಿಸುವ ಉದ್ದೇಶವೂ ಸರ್ಕಾರದ ಮುಂದೆ ಇಲ್ಲ ಎಂದು ಕೇಂದ್ರ ವಾಣಿಜ್ಯ ಸಚಿವರು ರಾಜ್ಯಸಭೆಗೆ ತಿಳಿಸಿದ್ದಾರೆ. ಕಳೆದ ಹಣಕಾಸು ಸಾಲಿನಲ್ಲಿ ಭಾರತ 15 ಲಕ್ಷ ಟನ್ ಮಾಂಸ ರಫ್ತು ಮಾಡಿದ್ದು ಇದರ ಮೌಲ್ಯ 4,919.62 ದಶಲಕ್ಷ ಡಾಲರ್‍ಗಳಾಗಿವೆ.
ಈ ಬಾರಿ ಸರ್ಕಾರ ರಫ್ತು ಗುರಿ ನಿಗದಿ ಮಾಡಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದು, ಬೀಫ್ ಹೊರತಾದ ಮಾಂಸ ಮತ್ತು ಮಾಂಸದ ಉತ್ಪನ್ನಗಳ ರಫ್ತಿಗೆ ಹಣಕಾಸು ನೆರವು ನೀಡಲಾಗುವುದು ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


