ದೇಶ

ದೆಹಲಿ ಶಾಸಕರಿಗೆ ಪ್ರಧಾನಿ ಮೋದಿಯವರಿಗಿಂತಲೂ ಹೆಚ್ಚು ಸಂಬಳ!

ದೆಹಲಿ ಶಾಸಕರ ಸಂಬಳ ಹೆಚ್ಚಳ ಮಾಡಿದಾಗ ಅದು ಪ್ರಧಾನಿ ಮೋದಿಯವರ ಸಂಬಳದಿಂದಲೂ ಅಧಿಕವಾಗುವುದಾದರೆ, ಪ್ರಧಾನಿಯರ ಸಂಬಳವನ್ನು ಹೆಚ್ಚಳ...

ದೆಹಲಿ ಶಾಸಕರಿಗೆ ಪ್ರಧಾನಿ ಮೋದಿಯವರಿಗಿಂತಲೂ ಹೆಚ್ಚು ಸಂಬಳ!
ಅರವಿಂದ ಕೇಜ್ರಿವಾಲ್ -ನರೇಂದ್ರ ಮೋದಿ
Published On :
ನವದೆಹಲಿ: ದೆಹಲಿ ಶಾಸಕರ ಸಂಬಳ ಹೆಚ್ಚಳ ಮಾಡಿದಾಗ ಅದು ಪ್ರಧಾನಿ ನರೇಂದ್ರ ಮೋದಿಯವರ ಸಂಬಳದಿಂದಲೂ ಅಧಿಕವಾಗುವುದಾದರೆ, ಪ್ರಧಾನಿಯರ ಸಂಬಳವನ್ನು ಹೆಚ್ಚಳ ಮಾಡಿಸಬೇಕು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.
ದೆಹಲಿ ಶಾಸಕರ ಸಂಬಳವನ್ನು ನಾಲ್ಕು ಪಟ್ಟು ಹೆಚ್ಚಿಸುವ ದೆಹಲಿ ಸರ್ಕಾರದ ನಿರ್ಧಾರಕ್ಕೆ ಹಲವಾರು ಟೀಕೆಗಳು ವ್ಯಕ್ತವಾಗಿದ್ದವು. ಈ ಟೀಕೆಗಳಿಗೆ ಉತ್ತರಿಸಿದ ಕೇಜ್ರಿವಾಲ್ ಶಾಸಕರ ಸಂಬಳ ಪ್ರಧಾನಿಗಿಂತ ಅಧಿಕವಾಗಿದ್ದರೆ, ಪ್ರಧಾನಿ ಸಂಬಳ  ಹೆಚ್ಚಳ ಮಾಡಲಿ ಎಂದಿದ್ದಾರೆ. 
67 ಎಎಪಿ ಶಾಸಕರಿರುವ 70 ಸದಸ್ಯರ ದೆಹಲಿ ವಿಧಾನಸಭೆಯಲ್ಲಿ ಶಾಸಕರ ಮತ್ತು ಸಚಿವರ ಸಂಬಳ ವರ್ಧನೆಗೆ ಸಂಬಂಧಿಸಿದ ಮಸೂದೆಗೆ ಗುರುವಾರ ಅಂಗೀಕಾರ ಲಭಿಸಿತ್ತು. ಈ ಮಸೂದೆ ಪ್ರಕಾರ ರು. 12,000 ಸಂಬಳ ಪಡೆಯುತ್ತಿದ್ದ ಶಾಸಕರ ಸಂಬಳ ರು. 50,000 ಆಗಿ ಹೆಚ್ಚಳವಾಗಲಿದೆ. ಅಂದರೆ ವಾರ್ಷಿಕ ವರಮಾನ ರು. 88,000 ಇದ್ದದ್ದು ರು. 2.1 ಲಕ್ಷ ಆಗಲಿದೆ. 
ಆದಾಗ್ಯೂ, ಭ್ರಷ್ಟಾಚಾರವನ್ನು ಕಡಿಮೆಗೊಳಿಸುವುದಕ್ಕಾಗಿ ಶಾಸಕರ ಸಂಬಳ ಹೆಚ್ಚಳ ಮಾಡಲಾಗುತ್ತಿದೆ. ಆದರೆ ಭ್ರಷ್ಟಾಚಾರದಲ್ಲಿ ಯಾರಾದರೂ ತೊಡಗಿಕೊಂಡಿದ್ದರೆ ಅವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ತಿಂಗಳಿಗೆ 1 ಲಕ್ಷ ರು. ಸಂಬಳ ಹೇಗಿದೆ?  ಪ್ರಧಾನಿ ಮೋದಿಯವರ ಸಂಬಳ ಇದಕ್ಕಿಂತ ಕಡಿಮೆಯಾಗಿದ್ದರೆ, ಅವರ ಸಂಬಳವನ್ನು ಹೆಚ್ಜಳ ಮಾಡಬೇಕು. ಪ್ರಧಾನಿಯವರ ಸಂಬಳ ಹೆಚ್ಚಿಸುವಂತೆ ನಾವೆಲ್ಲರೂ ಒತ್ತಾಯಿಸುವೆವು ಎಂದು ದೆಹಲಿ ವಿಧಾನಸಭೆಯಲ್ಲಿ ಮಾತನಾಡಿದ ಕೇಜ್ರಿವಾಲ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.