ದೇಶ

ಕುಖ್ಯಾತ ದಂಡುಪಾಳ್ಯ ಹಂತಕರಿಗೆ 'ಸುಪ್ರೀಂ' ರಿಲೀಫ್

ವಿಕೃತವಾಗಿ ಕೊಲೆ ಮಾಡುವ ಮೂಲಕ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಕುಖ್ಯಾತ ದಂಡುಪಾಳ್ಯದ ಹಂತಕರಿಗೆ ಸುಪ್ರೀಂಕೋರ್ಟ್ ರಿಲೀಫ್ ನೀಡಿದೆ...

ಕುಖ್ಯಾತ ದಂಡುಪಾಳ್ಯ ಹಂತಕರಿಗೆ 'ಸುಪ್ರೀಂ' ರಿಲೀಫ್
ದಂಡುಪಾಳ್ಯ ತಂಡ
Published On :
ನವದೆಹಲಿ: ವಿಕೃತವಾಗಿ ಕೊಲೆ ಮಾಡುವ ಮೂಲಕ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಕುಖ್ಯಾತ ದಂಡುಪಾಳ್ಯದ ಹಂತಕರಿಗೆ ಸುಪ್ರೀಂಕೋರ್ಟ್ ರಿಲೀಫ್ ನೀಡಿದೆ. 
2014ರಲ್ಲಿ ಹೈಕೋರ್ಟ್ ಸಾಕ್ಷ್ಯಾಧಾರ ಕೊರತೆ ಹಿನ್ನೆಲೆಯಲ್ಲಿ ದಂಡುಪಾಳ್ಯದ ಹಂತರ ವಿರುದ್ಧದ ಪ್ರಕರಣವನ್ನು ಖುಲಾಸೆ ಮಾಡಿತ್ತು. ಈ ಹೈಕೋರ್ಟ್​ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಿತ್ತು. ಈ ಸಂಬಂಧ ಸುಪ್ರೀಂಕೋರ್ಟ್ ಮತ್ತೆ ಸಾಕ್ಷ್ಯಾಧಾರ ಕೊರತೆ ಹಿನ್ನೆಲೆಯಲ್ಲಿ ಅರ್ಜಿ ವಜಾ ಮಾಡಿ ದಂಡುಪಾಳ್ಯ ತಂಡದ 6 ಆರೋಪಿಗಳಿಗೆ ರಿಲೀಫ್​ ನೀಡಿದೆ.
ತುಮಕೂರು ಮತ್ತು ಹಾಸನ ಜಿಲ್ಲೆಯಲ್ಲಿ ತಲ್ಲಣ ಮೂಡಿಸಿದ್ದ ವಿವಿಧ ಹತ್ಯಾ ಪ್ರಕರಣಗಳ ಕುಖ್ಯಾತ ದಂಡು ಪಾಳ್ಯ ಗ್ಯಾಂಗ್ ಗೆ 2010ರಲ್ಲಿ ಸೆಷನ್ಸ್​ ಕೋರ್ಟ್​ ಗಲ್ಲುಶಿಕ್ಷೆ ವಿಧಿಸಿತ್ತು. ಸಾಕ್ಷ್ಯಾಧಾರ ಕೊರತೆ ಹಿನ್ನೆಲೆಯಲ್ಲಿ 2014ರಲ್ಲಿ ಹೈಕೋರ್ಟ್ ದಂಡುಪಾಳ್ಯದ ಹಂತರ ವಿರುದ್ಧದ ಪ್ರಕರಣವನ್ನು ಖುಲಾಸೆ ಮಾಡಿತ್ತು.
ಆರೋಪಿಗಳಾದ ದಂಡುಪಾಳ್ಯದ ವೆಂಕಟರಾಮ, ದೊಡ್ಡಹನುಮ, ಹೊಟ್ಟೆ ಕೃಷ್ಣ,  ಚಿಕ್ಕ ಮುನಿಯಪ್ಪ, ಕೃಷ್ಣ, ತಿಮ್ಮ ಪ್ರಕರಣದಿಂದ ಖುಲಾಸೆಗೊಂಡಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.