ಚೆನ್ನೈ ಪ್ರವಾಹದಿಂದ ಬಚಾವಾದ ಪ್ರಸಿದ್ಧ ದೇವಾಲಯಗಳು
ತಮಿಳುನಾಡಿನ ಅನೇಕ ಪ್ರಸಿದ್ಧ ದೇವಾಲಯಗಳು ಜಲಪ್ರವಾಹದಿಂದ ಉಂಟಾಗಬಹುದಾಗಿದ್ದ ಹಾನಿಯಿಂದ ಪಾರಾಗಿವೆ...

ಚೆನ್ನೈ: ನೈಸರ್ಗಿಕ ವಿಪತ್ತುಗಳು ಸಂಭವಿಸಿದಾಗ ಪವಾಡ ಸದೃಶ್ಯ ರೀತಿಯಲ್ಲಿ ಹಲವು ದೇವಾಲಯಗಳಿಗೆ ಹಾನಿಯಾಗದೇ ಇರುವ ಅನೇಕ ಉದಾಹರಣೆಗಳಿವೆ, ಇಂಥದ್ದೇ ಉದಾಹರಣೆ ಈಗ ಜಲಪ್ರವಾಹಕ್ಕೆ ತುತ್ತಾಗಿರುವ ತಮಿಳುನಾಡಿನಲ್ಲೂ ಕಂಡುಬಂದಿದೆ.
ತಮಿಳುನಾಡಿನ ಅನೇಕ ಪ್ರಸಿದ್ಧ ದೇವಾಲಯಗಳು ಜಲಪ್ರವಾಹದಿಂದ ಉಂಟಾಗಬಹುದಾಗಿದ್ದ ಹಾನಿಯಿಂದ ಪಾರಾಗಿವೆ. ದಕ್ಷಿಣ ಚೆನ್ನೈ ನಲ್ಲಿರುವ ಎಲ್ಲಾ ಕಟ್ಟಡಗಳನ್ನು ಜಲಪ್ರವಾಹ ಆವರಿಸಿಕೊಂಡಿದ್ದರೂ ಮೈಲಾಪುರದಲ್ಲಿರುವ ಕಪಾಲೇಶ್ವರ ದೇವಾಲಯಕ್ಕೆ ಪ್ರವಾಹದ ಯಾವುದೇ ಪರಿಣಾಮಗಳಾಗಿಲ್ಲ ಎಂದು ದೇವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಪಾಲೇಶ್ವರ ಮಂದಿರದ ಹತ್ತಿರವೇ ಇರುವ ಕೇಶವ ಪೆರುಮಾಳ್ ದೇವಾಲಯವೂ ಸಹ ಜಲಪ್ರವಾಹದಿಂದ ಪಾರಾಗಿದ್ದು ಅಚ್ಚರಿ ಮೂಡಿಸಿದೆ.
ಇನ್ನು ನಿರಂತರ ಮಳೆ ಸುರಿದ ಪರಿಣಾಮ ದಕ್ಷಿಣ ಚೆನ್ನೈ ನ ಟ್ರಿಪ್ಲಿಕೇನ್ ನಲ್ಲಿರುವ ಪಾರ್ಥಸಾರಥಿ ಸ್ವಾಮಿ ದೇವಾಲಯದ ಹೊರಭಾಗದಲ್ಲಿರುವ ಕಲ್ಯಾಣಿ ತುಂಬಿದೆ. ಆದರೆ ದೇವಾಲಯ ಮಾತ್ರ ಜಲಪ್ರವಾಹದಿಂದ ಪಾರಾಗಿದ್ದು, ಜಲಾವೃತಗೊಂಡಿಲ್ಲ ಎಂದು ಸ್ಥಳೀಯರು ಸುದ್ದಿ ಸಂಸ್ಥೆಗಳಿಗೆ ಮಾಹಿತಿ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


