ದೇಶ

ಪಕ್ಷದ ಚಿಹ್ನೆ 'ಚಕ್ರ'ಕ್ಕೆ ಬದಲಾಯಿಸಿಕೊಳ್ಳಲು ಜೆಡಿ-ಯು ಪಕ್ಷ ಉತ್ಸುಕ: ನಿತೀಶ್

ಬಿಹಾರದ ಆಡಳತಿ ಪಕ್ಷ ಜನತಾ ದಳ ಸಂಯುಕ್ತ ತನ್ನ ಪಕ್ಷದ ಚಿಹ್ನೆ 'ಬಾಣ'ದಿಂದ, ಮೊದಲಿನ ಜನತಾದಳ ಪಕ್ಷ 'ಚಕ್ರ'ಕ್ಕೆ ಬದಲಾಯಿಸಿಕೊಳ್ಳಲು ಉತ್ಸುಕವಾಗಿದ್ದು ಇದಕ್ಕಾಗಿ

ಪಕ್ಷದ ಚಿಹ್ನೆ 'ಚಕ್ರ'ಕ್ಕೆ ಬದಲಾಯಿಸಿಕೊಳ್ಳಲು ಜೆಡಿ-ಯು ಪಕ್ಷ ಉತ್ಸುಕ: ನಿತೀಶ್
ಒಡಕು ಮೂಡುವದಕ್ಕು ಮುಂಚಿನ ಜನತಾದಳದ ಚಿಹ್ನೆ
Published On :

ಪಾಟ್ನಾ: ಬಿಹಾರದ ಆಡಳತಿ ಪಕ್ಷ ಜನತಾ ದಳ ಸಂಯುಕ್ತ ತನ್ನ ಪಕ್ಷದ ಚಿಹ್ನೆ 'ಬಾಣ'ದಿಂದ, ಮೊದಲಿನ ಜನತಾದಳ ಪಕ್ಷ 'ಚಕ್ರ'ಕ್ಕೆ ಬದಲಾಯಿಸಿಕೊಳ್ಳಲು ಉತ್ಸುಕವಾಗಿದ್ದು ಇದಕ್ಕಾಗಿ ಚುನಾವಣಾ ಆಯೋಗಕ್ಕೆ ಮನವಿ ಮಾಡಲಿದೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಗುರುವಾರ ಹೇಳಿದ್ದಾರೆ.

"ಪಕ್ಷದ ಚಿಹ್ನೆ ಬದಲಾಯಿಸಲು ಜೆಡಿ-ಯು ಚುನಾವಣಾ ಆಯೋಗದ ಮೊರೆ ಹೋಗಲಿದೆ. ಈ ವಿಷಯದಲ್ಲಿ ಪಕ್ಷದ ಒಮ್ಮತದ ನಿರ್ಧಾರ ಇದು" ಎಂದು ಜೆಡಿಯು ಮುಖಂಡ ಹೇಳಿದ್ದಾರೆ.

ತಮ್ಮ ಚಿಹ್ನೆ 'ಬಾಣ', ಇತರ ಪಕ್ಷದ ಚಿಹ್ನೆಗೆ ಹೋಲುತ್ತಿದ್ದು ಇದರಿಂದ ಮತದಾರರಿಗೆ ಗೊಂದಲವಾಗಿದೆ ಎಂದು ಕೂಡ ಅವರು ಹೇಳಿದ್ದಾರೆ.

"ಇಂತಹ ಒಂದೇ ರೀತಿಯ ಚಿಹ್ನೆಗಳ ಗೊಂದಲದಿಂದಾಗಿ ಜೆಡಿಯು ವಿಧಾನಸಭಾ ಚುನಾವಣೆಗಳಲ್ಲಿ ಕೆಲವು ಕ್ಷೇತ್ರಗಳನ್ನು ಕಳೆದುಕೊಳ್ಳಬೇಕಾಯಿತು" ಎಂದು ಅವರು ಹೇಳಿದ್ದಾರೆ.

"ಜೆಡಿಯು ಈ ನಿಟ್ಟಿನಲ್ಲಿ ಮಾಜಿ ಪ್ರಧಾನಿ ಮತ್ತು ಜನತಾ ದಳ ಜಾತ್ಯಾತೀತ ಪಕ್ಷದ ಅಧ್ಯಕ್ಷ ಎಚ್ ಡಿ ದೇವೇಗೌಡ ಅವರೊಂದಿಗೆ ಮಾತುಕತೆ ನಡೆಸಲಿದೆ" ಎಂದು ಅವರು ತಿಳಿಸಿದ್ದಾರೆ.

ಜನತಾದಳ ಪಕ್ಷ, ಜನತಾದಳ ಸಂಯುಕ್ತ ಮತ್ತು ಜನತಾ ದಳ ಜಾತ್ಯಾತೀತ ಪಕ್ಷಗಳಾಗಿ ಹೋಳಾಗುವುದಕ್ಕೂ ಮೊದಲು 'ಚಕ್ರ'ದ ಚಿಹ್ನೆ ಹೊಂದಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.