ದೇಶ

ಭಾರತದಲ್ಲಿ ಮುಸ್ಲಿಮರಿಗಿಂತ ಗೋವುಗಳೇ ಸುರಕ್ಷಿತ: ಶಶಿ ತರೂರ್

ಮುಸ್ಲಿಂ ವಿಚಾರವಾದಿಗಳ ಮೇಲೆ ಭಾರತದಲ್ಲಿ ಆಕ್ರಮಣ ನಡೆಯುತ್ತದೆ. ಹಾಗೆ ನೋಡಿದರೆ ಭಾರತದಲ್ಲಿ ಮುಸ್ಲಿಮರಿಗಿಂತ ಗೋವುಗಳೇ ಸುರಕ್ಷಿತ...

ಭಾರತದಲ್ಲಿ ಮುಸ್ಲಿಮರಿಗಿಂತ ಗೋವುಗಳೇ ಸುರಕ್ಷಿತ: ಶಶಿ ತರೂರ್
ಶಶಿ ತರೂರ್
Published On :
ನವದೆಹಲಿ: ಭಾರತದಲ್ಲಿ ಮುಸ್ಲಮರಿಗಿಂತ ಗೋವುಗಳೇ ಸುರಕ್ಷಿತ ಎಂದು ಹೇಳುವ ಮೂಲಕ  ಕಾಂಗ್ರೆಸ್ ನಾಯಕ ಶಶಿ ತರೂರ್ ಸುದ್ದಿಗೆ ಗ್ರಾಸವಾಗಿದ್ದಾರೆ.
ಲೋಕಸಭೆಯಲ್ಲಿ ಮಂಗಳವಾರ ಅಸಹಿಷ್ಣುತೆಯ ಬಗ್ಗೆ ಚರ್ಚೆಯಲ್ಲಿ ಭಾಗವಹಿಸಿದ ತರೂರ್, ಬಾಂಗ್ಲಾದೇಶದ ಸ್ನೇಹಿತನೊಬ್ಬ ತನ್ನೊಂದಿಗೆ ಮಾತಾಡುತ್ತಿದ್ದಾಗ, ಮುಸ್ಲಿಂ ವಿಚಾರವಾದಿಗಳ ಮೇಲೆ ಭಾರತದಲ್ಲಿ ಆಕ್ರಮಣ ನಡೆಯುತ್ತದೆ. ಹಾಗೆ ನೋಡಿದರೆ ಭಾರತದಲ್ಲಿ ಮುಸ್ಲಿಮರಿಗಿಂತ ಗೋವುಗಳೇ ಸುರಕ್ಷಿತ ಎಂದು ಹೇಳಿದ್ದನು ಎಂದಿದ್ದಾರೆ. 
ಅದೇ ವೇಳೆ ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ತರೂರ್, ಭಾರತದಲ್ಲೇ ದ್ವೇಷ ಹೊಗೆಯಾಡುತ್ತಿರುವಾಗ ಮೇಕ್ ಇನ್ ಇಂಡಿಯಾವನ್ನು ಪ್ರಚಾರ ಮಾಡುವುದಾದರೂ ಹೇಗೆ? ಎಂದು ಪ್ರಶ್ನಿಸಿದ್ದಾರೆ. ದೇಶದಲ್ಲಿ ಮೋದಿಯ ಪಕ್ಷದ ಜನರು ರಾಜಕೀಯ ಅಸಮಾನತೆ ಮಾಡುತ್ತಿದ್ದರೂ ಮೋದಿ ಮಾತ್ರ ಮೌನವಾಗಿ ಕುಳಿತಿದ್ದಾರೆ ಎಂದು ತರೂರ್ ಟೀಕಿಸಿದ್ದಾರೆ.
ಮಜ್‌ಹಬ್ ನಹೀ ಸಿಖಾತಾ, ಆಪಸ್ ಮೇ ಬೈರ್ ರಖನಾ ಎಂದು ಹೇಳಿದ ತರೂರ್, ಕೋಮುವಾದವು ಭಾರತದ ಸಿದ್ಧಾಂತಗಳನ್ನೇ ನಾಶ ಮಾಡುವ ಸ್ಫೋಟಕಗಳಾಗಿವೆ ಎಂದಿದ್ದಾರೆ.
ನರೇಂದ್ರ ಮೋದಿಯವರು ಪ್ರಧಾನಿಯಾಗುವ ಮುನ್ನ ಬೇರೆ ರೀತಿಯ ವ್ಯಕ್ತಿಯಾಗಿದ್ದರು. ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದ ಮೋದಿ, ಪ್ರಧಾನಿಯಾದ ಮೇಲೆ ಚತುರ ರಾಜಕಾರಣ ಮಾಡುತ್ತಿದ್ದಾರೆ. ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಬಿಹಾರದ ಗಾಂಧಿ ಮೈದಾನದಲ್ಲಿ  ಬಾಂಬ್ ಸ್ಫೋಟವಾಗಿತ್ತು. ಆದರೆ ಮೋದಿಯವರು ಬಾಂಬ್ ಸ್ಫೋಟದಲ್ಲಿ 6 ಮಂದಿ ಸಾವನ್ನಪ್ಪಿದ್ದರೂ, ಅಲ್ಲಿ ಏನೂ ಆಗಲೇ ಇಲ್ಲ ಎಂಬಂತೆ ಸಮಾಧಾನಕರವಾಗಿ ಭಾಷಣ ಮುಂದುವರಿಸಿದ್ದರು.
ಭಾರತ ವೈವಿಧ್ಯತೆಯ, ಸಹಿಷ್ಣುತೆಯ, ಗಾಂಧೀವಾದದ ದೇಶವಾಗಿದೆ. ಆದರೆ ಇದೀಗ ಇಲ್ಲಿ ಅಸಹಿಷ್ಣುತೆ, ಕೋಮು ಸಂಘರ್ಷ ಮತ್ತು ಹಿಂದುಳಿದ ವರ್ಗದವರಿಗೆ ಅಸುರಕ್ಷಿತರೆಂಬ ಭಯ ಕಾಡುತ್ತಿದೆ.
ಇದೀಗ ಮೋದಿಯವರು ಮೌನ ವಹಿಸುತ್ತಿದ್ದಾರೆ. ಪ್ರಧಾನಿ ಆದ ನಂತರ ಅವರು, ಎಲ್ಲರೊಂದಿಗೆ ಬೆರೆತು ಅವರನ್ನು ಮುನ್ನಡೆಸುವ ಧೋರಣೆಯನ್ನು ಮರೆತಿದ್ದಾರೆ. ಅವರ ಪಕ್ಷದ ಹಿರಿಯ ನಾಯಕರು ದೇಶದಲ್ಲಿ ರಾಜಕೀಯ ಭೇದ ತೋರಿಸುತ್ತಿದ್ದರೂ ಮೋದಿ ಸುಮ್ಮನಿದ್ದಾರೆ ಎಂದು ತರೂರ್ ಟೀಕಾ ಪ್ರಹಾರ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.