ದೇಶ

ಮೋದಿ ಭಾಷಣ ನಾಜಿ ಸಿದ್ಧಾಂತವನ್ನು ಹೋಲುತ್ತದೆ: ನಿತೀಶ್ ಕುಮಾರ್ ವ್ಯಂಗ್ಯ

ಬಿಹಾರದಲ್ಲಿ ಕಾಂಗ್ರೆಸ್, ಆರ್.ಜೆ.ಡಿ, ಜೆಡಿಯು ಶಕ್ತಿ ಪ್ರದರ್ಶನ ನಡೆದಿದೆ. ಮೂರು ಪಕ್ಷದ ನಾಯಕರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿರಿಸಿಕೊಂಡು ವಾಗ್ದಾಳಿ ನಡೆಸಿದ್ದಾರೆ.

ಮೋದಿ ಭಾಷಣ ನಾಜಿ ಸಿದ್ಧಾಂತವನ್ನು ಹೋಲುತ್ತದೆ: ನಿತೀಶ್ ಕುಮಾರ್ ವ್ಯಂಗ್ಯ
ನಿತೀಶ್ ಕುಮಾರ್
Published On :

ಪಾಟ್ನಾ: ಬಿಹಾರದಲ್ಲಿ ಕಾಂಗ್ರೆಸ್, ಆರ್.ಜೆ.ಡಿ, ಜೆಡಿಯು ಶಕ್ತಿ ಪ್ರದರ್ಶನ ನಡೆದಿದೆ. ಮೂರು ಪಕ್ಷದ ನಾಯಕರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿರಿಸಿಕೊಂಡು ವಾಗ್ದಾಳಿ ನಡೆಸಿದ್ದಾರೆ.

ಜೆಡಿಯು ಹಾಗೂ ಮಿತ್ರಪಕ್ಷಗಳ ಸಮಾವೇಶದಲ್ಲಿ ಪ್ರಧಾನಿ ಮೋದಿ ಅವರ ಭಾಷಣವನ್ನು ಟೀಕಿಸಿರುವ ಬಿಹಾರ ಸಿಎಂ ನಿತೀಶ್ ಕುಮಾರ್, ಒಂದು ಸುಳ್ಳನ್ನು 100 ಬಾರಿ ಹೇಳಿದರೆ ಅದೇ ಸತ್ಯವಾಗುತ್ತದೆ ಎಂದು ಹಿಟ್ಲರ್ ನೊಂದಿಗಿದ್ದ ನಾಜಿ ಹೇಳಿದ್ದರು, ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಅದೇ ಸಿದ್ಧಾಂತವನ್ನು ಅನುಸರಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ಒಂದು ಸುಳ್ಳನ್ನು 100  ಬಾರಿ ಹೇಳಿ ಸುಳ್ಳನ್ನೇ ಸತ್ಯವಾಗಿಸುವ ಸಿದ್ಧಾಂತದ ಮೂಲಕವೇ ಬಿಜೆಪಿ ಜನಪ್ರಿಯತೆ ಪಡೆದಿದೆ. ಮೋದಿ ಇದೇ ಮನಸ್ಥಿತಿ ಹೊಂದಿದ್ದಾರೆ. ಬಿಹಾರಕ್ಕೆ ಪ್ರಧಾನಿ ಮೋದಿ 1 .25 ಲಕ್ಷ ಕೋಟಿ ವಿಶೇಷ ಪ್ಯಾಕೇಜ್ ಘೋಷಿಸಿದ್ದಾರೆ.  ಆದರೆ ಈ ಪೈಕಿ 108 ಲಕ್ಷ ಕೋಟಿ ಈ ಹಿಂದೆಯೇ ಘೋಷಣೆಯಾಗಿತ್ತು, ಮೋದಿ ಸುಳ್ಳನ್ನೇ ಸತ್ಯಮಾಡುತ್ತಾರೆ ಎಂವುದಕ್ಕೆ ಇದೇ ಉತ್ತಮ ಉದಾಹರಣೆ ಎಂದು ನಿತೀಶ್ ಹೇಳಿದ್ದಾರೆ.  
ಆರ್.ಜೆ.ಡಿ ಮುಖಂಡ ಲಾಲೂ ಪ್ರಸಾದ್ ಯಾದವ್, ಜೆಡಿಯು ರಾಷ್ಟ್ರಾಧ್ಯಕ್ಷ ಶರದ್ ಯಾದವ್, ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಯಾದವ್ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಒಂದೇ ವೇದಿಕೆ ಹಂಚಿಕೊಂಡಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.