ಐದು ಮಕ್ಕಳಿರುವ ಹಿಂದೂ ಕುಟುಂಬಕ್ಕೆ ರು.2 ಲಕ್ಷ ಬಹುಮಾನ
ಐದು ಮಕ್ಕಳನ್ನು ಹೊಂದಿರುವ ಪ್ರತಿ ಹಿಂದು ಕುಟುಂಬಕ್ಕೆ ತಲಾ 2 ಲಕ್ಷ ರುಪಾಯಿ ಬಹುಮಾನ ನೀಡುವುದಾಗಿ ಶಿವಸೇನಾ ಆಗ್ರಾ ಘಟಕ ಘೋಷಿಸಿದೆ.

ಅಗ್ರಾ: ಐದು ಮಕ್ಕಳನ್ನು ಹೊಂದಿರುವ ಪ್ರತಿ ಹಿಂದೂ ಕುಟುಂಬಕ್ಕೆ ತಲಾ 2 ಲಕ್ಷ ರುಪಾಯಿ ಬಹುಮಾನ ನೀಡುವುದಾಗಿ ಶಿವಸೇನಾ ಆಗ್ರಾ ಘಟಕ ಘೋಷಿಸಿದೆ.
ಇತ್ತೀಚಿನ ಸಮೀಕ್ಷೆಗಳಲ್ಲಿ ದೇಶದಲ್ಲಿ ಮುಸ್ಲಿಂ ಜನಸಂಖ್ಯೆ ಹೆಚ್ಚುತ್ತಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಶಿವಸೇನಾ ಜಿಲ್ಲಾ ಮುಖ್ಯಸ್ಥ ವೀನು ಲವಾನಿಯಾ ಅವರು, ಸೇನಾ ಘಟಕ ಐದು ಮಕ್ಕಳನ್ನು ಹೊಂದಿರುವ ಕುಟುಂಬಕ್ಕೆ ಬಹುಮಾನ ನೀಡಲಿದೆ ಎಂದಿದ್ದಾರೆ.
2010ರಿಂದ 2015ರ ನಡುವೆ ಐದು ಮಕ್ಕಳನ್ನು ಹೊಂದಿದ ಪ್ರತಿ ಹಿಂದೂ ಕುಟುಂಬ ಎರಡು ಲಕ್ಷ ರುಪಾಯಿ ಬಹುಮಾನ ಪಡೆಯಲಿದೆ. ಪೋಷಕರು ಪಾಲಿಕೆಯಿಂದ ಜನ್ಮದಿನದ ಪ್ರಮಾಣ ಪತ್ರ ನೀಡಿದರೆ ಬಹುಮಾನ ನೀಡಲಾಗುವುದು ಎಂದು ವೀನು ತಿಳಿಸಿದ್ದಾರೆ.
ಇದೇ ವೇಳೆ ಸಾಮಾನ್ಯ ನೀತಿ ಸಂಹಿತೆ ಜಾರಿಗೆ ಆಗ್ರಹಿಸಿರುವ ಶಿವಸೇನೆ, ಒಬ್ಬ ವ್ಯಕ್ತಿ ಹಲವು ಪತ್ನಿಯರನ್ನು ಹೊಂದುವ ಪದ್ದತಿ ಅಂತ್ಯವಾಗಬೇಕು ಎಂದು ಅಭಿಪ್ರಾಯಪಟ್ಟಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


