ದೇಶ

ಸುಳ್ಳು ರೇಪ್ ಕೇಸ್ ಕೊಟ್ರೆ ಮಾನನಷ್ಟ ಕೋರಬಹುದು

ಸುಳ್ಳು ಅತ್ಯಾಚಾರ ಪ್ರಕರಣ ದಾಖಲಿಸಿದರೆ ಆರೋಪಿತ ವ್ಯಕ್ತಿಯು ಮಹಿಳೆಯಿಂದ ಮಾನನಷ್ಟ ಕೇಳಬಹುದು...

ಸುಳ್ಳು ರೇಪ್ ಕೇಸ್ ಕೊಟ್ರೆ ಮಾನನಷ್ಟ ಕೋರಬಹುದು
ಸುಳ್ಳು ಅತ್ಯಾಚಾರ ಪ್ರಕರಣ (ಸಾಂದರ್ಭಿಕ ಚಿತ್ರ)
Published On :

ನವದೆಹಲಿ: ಸುಳ್ಳು ಅತ್ಯಾಚಾರ ಪ್ರಕರಣ ದಾಖಲಿಸಿದರೆ ಆರೋಪಿತ ವ್ಯಕ್ತಿಯು ಮಹಿಳೆಯಿಂದ ಮಾನನಷ್ಟ ಕೇಳಬಹುದು.

ದೆಹಲಿ ಕೋರ್ಟ್ ಇಂಥದ್ದೊಂದು ತೀರ್ಪು ಪ್ರಕಟಿಸಿದೆ. `ಮದುವೆಯಾಗುವುದಾಗಿ ಹೇಳಿ ನನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ' ಎಂದು ಯುವತಿ ಸುಳ್ಳು ಆರೋಪ ಹೊರಿಸಿದರೆ, ಅಂಥ  ಸಂದರ್ಭದಲ್ಲಿ ಯುವಕ ತನಗಾದ ಅವಮಾನ, ಮಾನಸಿಕ ಕಿರುಕುಳವನ್ನು ಪ್ರಸ್ತಾಪಿಸಿ ಅದೇ ಯುವತಿಯಿಂದ ಮಾನನಷ್ಟವನ್ನು ಕೇಳಬಹುದು ಎಂದು ಕೋರ್ಟ್ ತನ್ನ ತೀರ್ಪಿನಲ್ಲಿ ತಿಳಿಸಿದೆ.

ದೆಹಲಿಯ ಮುಖರ್ಜಿ ನಗರದ ನಿವಾಸಿಯೊಬ್ಬರು ಯುವಕನೊಂದಿಗೆ ಸಮ್ಮತಿಯ ಸೆಕ್ಸ್ ನಡೆಸಿ, ಬಳಿಕ ಅತ್ಯಾಚಾರ ದೂರು ದಾಖಲಿಸಿದ್ದಳು. ಈ ಪ್ರಕರಣದಲ್ಲಿ ಆಕೆ ಸುಳ್ಳು ದೂರು  ದಾಖಲಿಸಿರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ, ಕೋರ್ಟ್ ಈ ತೀರ್ಪು ನೀಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.