ದೇಶ

ಆಂಬುಲೆನ್ಸ್ ಹಗರಣ: ಗೆಹ್ಲೋಟ್, ಸಚಿನ್ ಪೈಲಟ್ ವಿರುದ್ಧ ಎಫ್ಐಆರ್ ದಾಖಲು

ರಾಜಸ್ಥಾನದಲ್ಲಿ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಯೋಜನೆಯಡಿ ನಡೆದಿರುವ 108 ಆಂಬುಲೆನ್ಸ್ ಹಗರಣಕ್ಕೆ ಸಂಬಂಧಿಸಿದಂತೆ ರಾಜಸ್ಥಾನ ಮಾಜಿ ಮುಖ್ಯಮಂತ್ರಿ...

ಆಂಬುಲೆನ್ಸ್ ಹಗರಣ: ಗೆಹ್ಲೋಟ್, ಸಚಿನ್ ಪೈಲಟ್ ವಿರುದ್ಧ ಎಫ್ಐಆರ್ ದಾಖಲು
ಅಶೋಕ್ ಹ್ಲೋಟ್ - ಸಚಿನ್ ಪೈಲಟ್
Published On :

ಜೈಪುರ: ರಾಜಸ್ಥಾನದಲ್ಲಿ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಯೋಜನೆಯಡಿ ನಡೆದಿರುವ 108 ಆಂಬುಲೆನ್ಸ್ ಹಗರಣಕ್ಕೆ ಸಂಬಂಧಿಸಿದಂತೆ ರಾಜಸ್ಥಾನ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಪೈಲಟ್, ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ, ಕೇರಳದ ವಯಲಾರ್ ರವಿ ಮಗ ರವಿ ಕೃಷ್ಣಾ ಮತ್ತು ಇನ್ನಿತರರ ವಿರುದ್ಧ ಸಿಬಿಐ ಶನಿವಾರ ಎಫ್ಐಆರ್ ದಾಖಲಿಸಿದೆ.

ಪ್ರಕರಣ ಸಂಬಂಧ ಎಂಟು ಮಂದಿ ವಿರುದ್ಧ ಎಫ್ಐಆರ್ ದಾಖಲಿಸಿರುವ ಸಿಬಿಐ, ಸಚಿನ್ ಪೈಲಟ್, ಕಾರ್ತಿ ಹಾಗೂ ರವಿಕೃಷ್ಣಾ ಅವರು ನಿರ್ದೇಶಕರಾಗಿದ್ದ ಝಿಕ್ವಿಝಾ ಹೆಲ್ತ್ ಕೇರ್ ಲಿ(ಝಡ್ ಎಚ್ ಸಿಎಲ್) ನ ಮುಂಬೈ ಹಾಗೂ ಜೈಪುರ ಕಚೇರಿಗಳ ಮೇಲೆ ಸಿಬಿಐ ದಾಳಿ ನಡೆಸಿ, ಪರಿಶೀಲನೆ ನಡೆಸಿದೆ.

ಎಫ್ಐಆರ್ ನಲ್ಲಿ ರಾಜಸ್ಥಾನದ ಮಾಜಿ ಆರೋಗ್ಯ ಸಚಿವ ದುರು ಮಿಯಾ, ಎನ್ ಆರ್ಎಚ್ ಎಂ ಮಾಜಿ ನಿರ್ದೇಶಕ ಶ್ವೇತಾ ಮಂಗಲ್, ಶಫಿ ಮಾಥರ್ ಹೆಸರು ಕೂಡಾ ದಾಖಲಾಗಿದೆ.

ರಾಜಸ್ಥಾನ್ ಸರ್ಕಾರ ಸಲಹೆ ಮತ್ತು ಕೇಂದ್ರ ಸರ್ಕಾರದ ನಿರ್ದೇಶನದಂತೆ ಈ ಪ್ರಕರಣವನ್ನು ಸಿಬಿಐ ತನಿಖೆ ನಡೆಸಲು ಮುಂದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಮೂರು ರಾಜ್ಯಗಳಲ್ಲಿ 108 ಆಂಬುಲೆನ್ಸ್ ಯೋಜನೆಗಾಗಿ ಕಾಂಗ್ರೆಸ್ ಸರ್ಕಾರ ಹಣ ಬಿಡುಗಡೆ ಮಾಡಿತ್ತು. ಟೆಂಡರ್ ಹಂಚಿಕೆ ಸಂಬಂಧ 2.56 ಕೋಟಿ ಹಗರಣ ನಡೆದಿದೆ ಎನ್ನಲಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.