ವರ್ಷಾಂತ್ಯಕ್ಕೆ ಮ್ಯಾಗಿ ಮಾರುಕಟ್ಟೆಗೆ
ಬಾಂಬೈ ಹೈಕೋರ್ಟ್ ತೀರ್ಪಿನಿಂದ ಉತ್ತೇಜಿತ ಗೊಂಡಿರುವ ನೆಸ್ಲೆ ಕಂಪನಿ ವರ್ಷಾಂತ್ಯಕ್ಕೆ ಭಾರತದ ಮಾರುಕಟ್ಟೆಗೆ..

ನವದೆಹಲಿ: ಬಾಂಬೆ ಹೈಕೋರ್ಟ್ ತೀರ್ಪಿನಿಂದ ಉತ್ತೇಜಿತ ಗೊಂಡಿರುವ ನೆಸ್ಲೆ ಕಂಪನಿ ವರ್ಷಾಂತ್ಯಕ್ಕೆ ಭಾರತದ ಮಾರುಕಟ್ಟೆಗೆ ಮತ್ತೆ ಮ್ಯಾಗಿ ನೂಡಲ್ಸ್ ಬಿಡುಗಡೆ ಮಾಡುವ ಕುರಿತು ಚಿಂತನೆ ನಡೆಸಿದೆ.
ಮ್ಯಾಗಿಯಲ್ಲಿ ಸೀಸದ ಪ್ರಮಾಣ ಮಿತಿಗಿಂತಲೂ ಹೆಚ್ಚಾಗಿದೆ ಎಂದು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್ಎಸ್‍ಎಸ್‍ಎಐ) ವರದಿ ನೀಡಿದ ನಂತರ ದೇಶದಲ್ಲಿ ಮ್ಯಾಗಿಯನ್ನು ನಿಷೇಧಿಸಲಾಗಿತ್ತು. ಇದರಿಂದ ಕಂಪನಿ 30,000 ಟನ್ ಮ್ಯಾಗಿಯನ್ನು ನಾಶಗೊಳಿಸಿದ್ದು ಸೇರಿದಂತೆ ರು.450 ಕೋಟಿ ನಷ್ಟ ಅನುಭವಿಸಿತ್ತು.
ಮ್ಯಾಗಿಯಲ್ಲಿ ಈರುವ ಅಂಶಗಳಲ್ಲಿ ಯಾವುದೇ ಬದಲಾವಣೆ ಮಾಡದೆ ಇದಕ್ಕಿಂತಲೂ ಉತ್ತಮ ಉತ್ಪನ್ನ ನೀಡುವತ್ತ ಯೋಜಿಸುತ್ತಿರುವುದಾಗಿ ನೆಸ್ಲೆ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಸುರೇಶ್ ನಾರಾಯಣನ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


