ದೇಶ

ಮೋದಿಗೆ ಮನವಿಗೆ ಸಕರಾತ್ಮಕ ಪ್ರತಿಕ್ರಿಯೆ: ನಿತ್ಯ 30,000 ಗ್ರಾಹಕರಿಂದ ಗ್ಯಾಸ್‌ ಸಬ್ಸಿಡಿ ತ್ಯಾಗ

ಗ್ಯಾಸ್ ಸಬ್ಸಿಡಿ ತ್ಯಾಗ ಮಾಡಲು ಪ್ರಧಾನಿ ನರೇಂದ್ರ ಮೋದಿ ಮಾಡಿದ ಮನವಿಗೆ ಮನಸೋತಿರುವ ಭಾರತೀಯರು ಪ್ರತಿ ನಿತ್ಯ ಸರಾಸರಿ 30,000 ಗ್ರಾಹಕರು ಸಬ್ಸಿಡಿ ತ್ಯಾಗ ಮಾಡುತ್ತಿದ್ದಾರೆ...

ಮೋದಿಗೆ ಮನವಿಗೆ ಸಕರಾತ್ಮಕ ಪ್ರತಿಕ್ರಿಯೆ: ನಿತ್ಯ 30,000 ಗ್ರಾಹಕರಿಂದ ಗ್ಯಾಸ್‌ ಸಬ್ಸಿಡಿ ತ್ಯಾಗ
ಗ್ಯಾಸ್
Published On :
ನವದೆಹಲಿ: ಗ್ಯಾಸ್ ಸಬ್ಸಿಡಿ ತ್ಯಾಗ ಮಾಡಲು ಪ್ರಧಾನಿ ನರೇಂದ್ರ ಮೋದಿ ಮಾಡಿದ ಮನವಿಗೆ ಮನಸೋತಿರುವ ಭಾರತೀಯರು ಪ್ರತಿ ನಿತ್ಯ ಸರಾಸರಿ 30,000 ಗ್ರಾಹಕರು ಸಬ್ಸಿಡಿ ತ್ಯಾಗ ಮಾಡುತ್ತಿದ್ದಾರೆ. 
ಮೂರು ಸರಕಾರಿ ಸ್ವಾಮ್ಯದ ತೈಲ ಕಂಪೆನಿಗಳು ಸಬ್ಸಿಡಿ ತ್ಯಜಿಸುವಂತೆ ಜನರ ಮನವೊಲಿಸಲು ಮನೆಮನೆ ಅಭಿಯಾನ ಕೈಗೊಂಡಿದ್ದು. ಇದರಿಂದಾಗಿ ನಿತ್ಯ 30ರಿಂದ 40 ಸಾವಿರ ಮಂದಿ ಸಬ್ಸಿಡಿ ತ್ಯಜಿಸುವ ಅರ್ಜಿಗಳಿಗೆ ಸಹಿ ಹಾಕುತ್ತಿದ್ದಾರೆ.
ಸ್ವಾತಂತ್ರೋತ್ಸವ ಭಾಷಣದಲ್ಲಿ ಮೋದಿ 20 ಲಕ್ಷ ಗ್ರಾಹಕರು ಸಬ್ಸಿಡಿ ತ್ಯಾಗ ಮಾಡಿದ್ದಾರೆ ಎಂದು ಹೇಳಿದ್ದರು. ಈ ಹೇಳಿಕೆ ನೀಡಿದ ಅನಂತರ 1 ಲಕ್ಷಕ್ಕೂ ಹೆಚ್ಚು ಗ್ರಾಹಕರು ಸಬ್ಸಿಡಿ ತ್ಯಾಗ ಮಾಡಿದ್ದು, ಪ್ರಸ್ತುತ ಒಟ್ಟು 22.57 ಲಕ್ಷ ಗ್ರಾಹಕರು ಸಬ್ಸಿಡಿ ತ್ಯಾಗ ಮಾಡುವ ನಿರ್ಧಾರ ಕೈಗೊಂಡಿದ್ದಾರೆ.
ಶನಿವಾರ ಒಂದೇ ದಿನ 29000 ಗ್ರಾಹಕರು ಸಬ್ಸಿಡಿ ತ್ಯಜಿಸಲು ಒಪ್ಪಿದ್ದಾರೆ. ಸುಮಾರು 50,000 ಗ್ರಾಹಕರು ಸಬ್ಸಿಡಿ ತ್ಯಜಿಸಲು ಅರ್ಜಿ ಸಲ್ಲಿಸಿದ್ದು, ಅವರ ಅರ್ಜಿ ಪರಿಶೀಲನೆಯಲ್ಲಿದೆ ಎಂದು ಹೇಳಲಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.