ದೇಶ

ಎನ್ಎಸ್ಎ ಸಭೆ ಭಯೋತ್ಪಾದನೆ ನಿರ್ಮೂಲನೆಗೆ ಸಹಕಾರಿಯಾಗಿತ್ತು: ಎನ್.ಸಿ.ಪಿ

ಪಾಕಿಸ್ತಾನದೊಂದಿಗಿನ ಎನ್ಎಸ್ಎ ಮಟ್ಟದ ದ್ವಿಪಕ್ಷೀಯ ಸಭೆ ರದ್ದುಗೊಂಡಿರುವುದಕ್ಕೆ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ(ಎನ್.ಸಿ.ಪಿ) ಅಸಮಾಧಾನ ವ್ಯಕ್ತಪಡಿಸಿದೆ.

ಎನ್ಎಸ್ಎ ಸಭೆ ಭಯೋತ್ಪಾದನೆ ನಿರ್ಮೂಲನೆಗೆ ಸಹಕಾರಿಯಾಗಿತ್ತು: ಎನ್.ಸಿ.ಪಿ
ಎನ್.ಸಿ.ಪಿ
Published On :

ಮುಂಬೈ: ಪಾಕಿಸ್ತಾನದೊಂದಿಗಿನ ಎನ್ಎಸ್ಎ ಮಟ್ಟದ ದ್ವಿಪಕ್ಷೀಯ ಸಭೆ ರದ್ದುಗೊಂಡಿರುವುದಕ್ಕೆ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ(ಎನ್.ಸಿ.ಪಿ) ಅಸಮಾಧಾನ ವ್ಯಕ್ತಪಡಿಸಿದೆ.

ರಾಷ್ತ್ರೀಯ ಭದ್ರತಾ ಸಲಹೆಗಾರರ ನಡುವಿನ ಮಾತುಕತೆ ನಡೆದಿದ್ದರೆ ಭಯೋತ್ಪಾದನೆ ನಿರ್ಮೂಲನೆ ವಿಷಯದಲ್ಲಿ ಎರಡೂ ದೇಶಗಳಿಗೆ ಸಹಯಾವಾಗುತ್ತಿತ್ತು ಎಂದು ಎನ್.ಸಿ.ಪಿ ನಾಯಕ ಮಜೀದ್ ಮೆಮನ್ ಅಭಿಪ್ರಾಯಪಟ್ಟಿದ್ದಾರೆ. ಎರಡೂ ದೇಶಗಳು ಎದುರಿಸುತ್ತಿರುವ ಭಯೋತ್ಪಾದನೆ ಸಮಸ್ಯೆ ಮಾತುಕತೆ ಮೂಲಕ ಮಾತ್ರ ಕೊನೆಯಾಗಲು ಸಾಧ್ಯ, ಆದರೆ ನಡೆಯಬೇಕಿದ್ದ ಮಾತುಕತೆಯನ್ನು ಹಲವು ಕಾರಣಗಳಿಂದಾಗಿ ರದ್ದುಗೊಳಿಸಲಾಗಿದೆ.

ಭಾರತ-ಪಾಕಿಸ್ತಾನ ತಮ್ಮ ನಿಲುವನ್ನು ಸಡಿಲಿಸದ ಕಾರಣ ಮಾತುಕತೆಗೂ ಮುನ್ನ ಒತ್ತಡದ ಪರಿಸ್ಥಿತಿ ನಿರ್ಮಾಣವಾಗಿತ್ತು ಎಂದು ಮಾಮನ್ ಹೇಳಿದ್ದಾರೆ. ಪಾಕಿಸ್ತಾನ ನಡೆಸುತ್ತಿರುವ ದುಷ್ಕೃತ್ಯಗಳನ್ನು ಜಗತ್ತಿನೆದುರು ಸಾಬೀತುಬಡಿಸಲು   ನಮ್ಮ ಬಳಿ ಸಾಕ್ಷ್ಯಾಧಾರಗಳಿವೆ ಎಂದು ಮೆಮನ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.