ನೆರವು ನಿಲ್ಲಿಸುತ್ತೇವೆ: ಪಾಕ್‍ಗೆ ಅಮೆರಿಕ
``ಭಯೋತ್ಪಾದಕರನ್ನು ಮುಂದಿಟ್ಟುಕೊಂಡು ನಡೆಸುತ್ತಿರುವ ಛದ್ಮ ಸಮರ ನಿಲುವು ಬದಲಾಯಿಸಿಕೊಳ್ಳಿ. ಹೀಗೆ ಮಾಡಿದರೆ ಮಾತ್ರ ನಿಮಗೆ ಹಣಕಾಸು ನೆರವು...

ವಾಷಿಂಗ್ಟನ್: ``ಭಯೋತ್ಪಾದಕರನ್ನು ಮುಂದಿಟ್ಟುಕೊಂಡು ನಡೆಸುತ್ತಿರುವ ಛದ್ಮ ಸಮರ ನಿಲುವು ಬದಲಾಯಿಸಿಕೊಳ್ಳಿ. ಹೀಗೆ ಮಾಡಿದರೆ ಮಾತ್ರ ನಿಮಗೆ ಹಣಕಾಸು ನೆರವು ಕೊಡುತ್ತೇವೆ''
ಹೀಗೆಂದು ಪಾಕಿಸ್ತಾನ ಸರ್ಕಾರಕ್ಕೆ ಸ್ಪಷ್ಟ ಸಂದೇಶ ನೀಡಿದ್ದು ಒಬಾಮ ಆಡಳಿತ. ಇಷ್ಟು ಮಾತ್ರವಲ್ಲ, ಈ ಷರತ್ತು ಪೂರೈಸಿದರೆ ಮಾತ್ರ ವಾಷಿಂಗ್ಟನ್‍ಗೆ ಭೇಟಿ ನೀಡಿ ಎಂದು ಅಮೆರಿಕ ಸರ್ಕಾರ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಗೂ ಸೂಚನೆ ನೀಡಿದೆ. ಇದೇ ಕಾರಣಕ್ಕೆ ಅಮೆರಿಕವು ಷರೀಫ್ ಭೇಟಿ ಕುರಿತು ಈವರೆಗೆ ಅಧಿಕೃತ ಘೋಷಣೆ ಹೊರಡಿಸಿಲ್ಲ.
ಇಂಥ ಖಡಕ್ ಸೂಚನೆ ನೀಡುವ ಮೂಲಕ ಪಾಕಿಸ್ತಾನದ ಪಾಲಿಗೆ ಒಂದು ಕಾಲದ ಮಿತ್ರನಾಗಿದ್ದ ಅಮೆರಿಕ ಕೂಡ ಈಗ ಬಿಸಿ ಮುಟ್ಟಿಸಲು ಆರಂಭಿಸಿದೆ. ಭಯೋತ್ಪಾದಕರನ್ನು ಮುಂದಿಟ್ಟುಕೊಂಡು ಛದ್ಮ ಸಮರ ನಡೆಸುವ ನಿಲುವು ಬದಲಾಯಿಸಿಕೊಂಡರಷ್ಟೇ ಹಣಕಾಸು ನೆರವು ನೀಡುವುದಾಗಿ ಅಮೆರಿಕ ಸ್ಪಷ್ಟವಾಗಿ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


