ನಕ್ಸಲ್ ದಾಳಿ: ಎಸ್‌ಟಿಎಫ್ ಹಿರಿಯ ಅಧಿಕಾರಿ ಸಾವು
ನಕ್ಸಲ್ ದಾಳಿಯಲ್ಲಿ ವಿಶೇಷ ಕಾರ್ಯಪಡೆ(ಎಸ್‌ಟಿಎಫ್)ಯ ಹಿರಿಯ ಅಧಿಕಾರಿ ಮೃತಪಟ್ಟಿದ್ದು, ಓರ್ವ ಕಾನ್ಸ್ಟೇಬಲ್ ಗಂಭೀರವಾಗಿ ಗಾಯಗೊಂಡಿದ್ದಾರೆ...

ರಾಯ್‍ಪುರ್: ನಕ್ಸಲ್ ದಾಳಿಯಲ್ಲಿ ವಿಶೇಷ ಕಾರ್ಯಪಡೆ(ಎಸ್‌ಟಿಎಫ್)ಯ ಹಿರಿಯ ಅಧಿಕಾರಿ ಮೃತಪಟ್ಟಿದ್ದು, ಓರ್ವ ಕಾನ್ಸ್ಟೇಬಲ್ ಗಂಭೀರವಾಗಿ ಗಾಯಗೊಂಡಿದ್ದಾರೆ.
ನಕ್ಸಲ್ ಪೀಡಿತ ಪ್ರದೇಶವಾದ ಛತ್ತೀಸ್‌ಗಢ್ ದ ಬಸ್ತಾರ್ ಜಿಲ್ಲೆಯ ದರ್ಬಾ ಪ್ರದೇಶದ ರಾಷ್ಟ್ರೀಯ ಹೆದ್ದಾರಿ 30ರ ಬಳಿ ನಕ್ಸಲ್ ಕಾರ್ಯಾಚರಣೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ನಕ್ಸಲರು ದಾಳಿ ನಡೆಸಿದ್ದು, ಹಿರಿಯ ಅಧಿಕಾರಿ ಕೃಷ್ಣಪಾಲ್ ಸಿಂಗ್ ಮೃತಪಟ್ಟಿದ್ದು, ಕಾನ್ಸ್ಟೇಬಲ್ ಸಂತೋಷ್ ಯಾದವ್ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಜನರಲ್ ಆಫ್ ಪೊಲೀಸ್ ಇನ್ಸ್ಪೆಕ್ಟರ್ ದೀಪನ್ಶು ಕಬ್ರಾ ತಿಳಿಸಿದ್ದಾರೆ.
ನಕ್ಸಲರು 2013ರ ಮೇ ತಿಂಗಳಲ್ಲಿ ಕಾಂಗ್ರೆಸ್ ಮುಖಂಡ ಸೇರಿ 31 ಮಂದಿಯನ್ನು ಹತ್ಯೆ ಮಾಡಿದ್ದ ಬಸ್ತಾರ್ ನ ಜೀರಾಮ್ ಘಾಟಿ ಸಮೀಪದ ದರ್ಬಾ ಬಲಿ ನಕ್ಸಲರು ಗುಂಡಿನ ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ನಕ್ಸಲ್ ದಾಳಿ ಗಾಯಗೊಂಡಿರುವ ಸಂತೋಷ್ ಯಾದವ್ ನನ್ನು ಜಗ್ದಲ್ಪುರ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಕಬ್ರಾ ತಿಳಿಸಿದ್ದಾರೆ.
ನಕ್ಸಲ್ ದಾಳಿ ಕುರಿತಂತೆ ಮಾಹಿತಿ ಸಿಕ್ಕ ತಕ್ಷಣ ಘಟನಾ ಸ್ಥಳಕ್ಕೆ ಹೆಚ್ಚುವರಿಯಾಗಿ ತಂಡವನ್ನು ಕಳಿಸಲಾಗಿದ್ದು, ನಕ್ಸಲ್ ರ ಪತ್ತೆಗೆ ತೀವ್ರ ಶೋಧಕಾರ್ಯ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


