ಸ್ವಾತಂತ್ರ್ಯ ದಿನದ ಮೋದಿ ಭಾಷಣ: ಒಆರ್ ಒಪಿ ಘೋಷಣೆ ಕೊನೆ ಹಂತದಲ್ಲಿ ರದ್ದಾಯ್ತು
ಪ್ರಧಾನಿ ನರೇಂದ್ರ ಮೋದಿ ಅವರು ಕೆಂಪುಕೋಟೆಯಲ್ಲಿ ದೇಶವನ್ನುದ್ದೇಶಿಸಿ ಮಾಡಿದ ಸ್ವಾತಂತ್ರ್ಯ ದಿನದ ಭಾಷಣದಲ್ಲೇ ``ಸಮಾನ ಹುದ್ದೆ; ಸಮಾನ ಪಿಂಚಣಿ'' ಘೋಷಿಸಬೇಕೆಂದಿದ್ದರು. ಇದಕ್ಕಾಗಿ ಕೊನೆ ಕ್ಷಣದಲ್ಲಿ ಪ್ರಧಾನಿ ಕಾರ್ಯಾಲಯ ನಡೆಸಿದರೂ ಅದು ವಿಫಲವಾಯಿತು...

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಕೆಂಪುಕೋಟೆಯಲ್ಲಿ ದೇಶವನ್ನುದ್ದೇಶಿಸಿ ಮಾಡಿದ ಸ್ವಾತಂತ್ರ್ಯ ದಿನದ ಭಾಷಣದಲ್ಲೇ ``ಸಮಾನ ಹುದ್ದೆ; ಸಮಾನ ಪಿಂಚಣಿ'' ಘೋಷಿಸಬೇಕೆಂದಿದ್ದರು. ಇದಕ್ಕಾಗಿ ಕೊನೆ ಕ್ಷಣದಲ್ಲಿ ಪ್ರಧಾನಿ ಕಾರ್ಯಾಲಯ ನಡೆಸಿದರೂ ಅದು ವಿಫಲವಾಯಿತು ನಿವೃತ್ತ ಸೇನಾ ಮುಖ್ಯಸ್ಥ ವಿ.ಪಿ. ಮಲಿಕ್ ಹೇಳಿದ್ದಾರೆ. ಈ ಬಗ್ಗೆ ``ಇಂಡಿಯನ್ ಎಕ್ಸ್‍ಪ್ರೆಸ್'' ಶುಕ್ರವಾರ ವರದಿ ಮಾಡಿದೆ.
ಈ ಕುರಿತು ನೌಕಾಪಡೆಯ ನಿವೃತ್ತ ಮುಖ್ಯಸ್ಥ ಅಡ್ಮಿರಲ್ ಸುರೇಶ್ ಮೆಹ್ತಾಗೆ ಇ-ಮೇಲ್ ಮಾಡಿರುವ ಅವರು, ಆ.10- ರಂದು ಪ್ರಧಾನಿ ಕಾರ್ಯಾಲಯವು ವಿವಾದವನ್ನು ಬಗೆಹರಿಸಲು ಮಧ್ಯವರ್ತಿಯಾಗಿ ಕೆಲಸ ಮಾಡುವಂತೆ ಮನವಿ ಮಾಡಿತ್ತು. ಈ ಮೂಲಕ ಅದು ಆ.15ರಂದೇ ``ಸಮಾನ ಹುದ್ದೆ; ಸಮಾನ ಪಿಂಚಣಿ'' ಘೋಷಿಸಲು ನಿರ್ಧರಿಸಿತ್ತು. ಆದರೆ, ಈ ಹಿಂದೆ ಉದ್ದೇಶಿಸಿ ದಕ್ಕಿಂತ ಕಡಿಮೆ ಹಣ ವಿನಿಯೋಗಿಸಲು ಸರ್ಕಾರ ಮುಂದಾದ ಹಿನ್ನೆಲೆಯಲ್ಲಿ ಹಿರಿಯ ಸೇನಾನಿಗಳು ಈ ಪ್ರಸ್ತಾಪವನ್ನು ತಿರಸ್ಕರಿಸಿ ದರು ಎಂದಿದ್ದಾರೆ.
ಯಾವಾಗ ಯೋಜನೆಯನ್ನು ಅನುಷ್ಠಾನಕ್ಕೆ ತರಬೇಕು ಮತ್ತು ಸಮಾನ ಶ್ರೇಣಿ ಮತ್ತು ಸಮಾನ ಪಿಂಚಣಿಯ ವ್ಯಾಖ್ಯಾನಕ್ಕೆ ಸಂಬಂಧಿಸಿದ ಗೊಂದಲಗಳು ಬಗೆಹರಿದಿಲ್ಲ. ಈ ಸಮಸ್ಯೆ ಪರಿಹಾರ ಕಾಣಬೇಕಾದರೆ ರಾಜಕೀಯ ನಾಯಕರು ಮತ್ತು ನಿವೃತ್ತ ಸೇನಾನಿಗಳು ನೇರ ಮಾತುಕತೆ ನಡೆಸುವ ಮೂಲಕ ಪರಿಹಾರ ಕಂಡುಕೊಳ್ಳಬಹುದು ಎಂದಿದ್ದಾರೆ
-
-ಜ.ಮಲಿಕ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


