ದೇಶ

ಹಾಸ್ಯ ಮಾಡಿ ಅಮಿತ್ ಶಾಗೆ ಸಲಹೆ ನೀಡಿದ ಲಾಲು ಪ್ರಸಾದ್

ಇತ್ತೀಚೆಗಷ್ಟೇ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಭಾಷಣ ಶೈಲಿಯನ್ನು ಮಿಮಿಕ್ರಿ ಮಾಡಿದ್ದ ಆರ್ ಜೆಡಿ ಮುಖಂಡ ಲಾಲು ಪ್ರಸಾದ್ ಯಾದವ್ ಇದೀಗ...

ಹಾಸ್ಯ ಮಾಡಿ ಅಮಿತ್ ಶಾಗೆ ಸಲಹೆ ನೀಡಿದ ಲಾಲು ಪ್ರಸಾದ್
ಆರ್ ಜೆಡಿ ಮುಖಂಡ ಲಾಲು ಪ್ರಸಾದ್ ಯಾದವ್ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ (ಸಂಗ್ರಹ ಚಿತ್ರ)
Published On :

ಪಾಟ್ನ; ಇತ್ತೀಚೆಗಷ್ಟೇ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಭಾಷಣ ಶೈಲಿಯನ್ನು ಮಿಮಿಕ್ರಿ ಮಾಡಿದ್ದ ಆರ್ ಜೆಡಿ ಮುಖಂಡ ಲಾಲು ಪ್ರಸಾದ್ ಯಾದವ್ ಇದೀಗ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಲಿಫ್ಟ್ ಘಟನೆಯನ್ನೂ ಹಾಸ್ಯ ಮಾಡಿದ್ದು, ಇಷ್ಟೂ ತೂಕದ ವ್ಯಕ್ತಿ ಲಿಫ್ಟ್ ಹತ್ತಬಾರದಿತ್ತು ಶುಕ್ರವಾರ ಹೇಳಿದ್ದಾರೆ.

ನಿನ್ನೆಯಷ್ಟೇ ವಿಧಾನಸಭಾ ಚುನಾವಣೆ ಸಂಬಂಧ ಪಾಟ್ನಗೆ ಭೇಟಿ ನೀಡಿದ್ದ ಅಮಿತ್ ಶಾ ಅವರು ಮೊದಲ ಮಹಡಿಯಿಂದ ನೆಲಮಹಡಿಗೆ ಬರುವಾಗ ಲಿಫ್ಟ್ ನಲ್ಲಿ ಸಿಲುಕಿ 40 ನಿಮಿಷಕ್ಕೂ ಹೆಚ್ಚು ಕಾಲ ಸಿಲುಕಿ ಒದ್ದಾಡಿದ್ದರು. ಅಮಿತ್ ಶಾ ಅವರನ್ನು ಅವರ ಭದ್ರತಾ ಸಿಬ್ಬಂದಿಯಾದ ಸಿಆರ್ ಪಿಎಫ್ ಯೋಧರು ರಕ್ಷಣೆ ಮಾಡಿದ್ದರು.

ಇದೀಗ ಅಮಿತ್ ಶಾ ಅವರ ಲಿಫ್ಟ್ ಪ್ರಕರಣವನ್ನು ಹಾಸ್ಯ ಮಾಡಿರುವ ಲಾಲು ಪ್ರಸಾದ್  ಪಾಟ್ನ ಹಾಗೂ ಬಿಹಾರದ ಲಿಫ್ಟ್ ಗಳು ಚಿಕ್ಕದು. ಇಷ್ಟು ದಪ್ಪವಿರುವ ವ್ಯಕ್ತಿಗಳ ತೂಕವನ್ನು ಭರಿಸುವಷ್ಟು ಶಕ್ತಿ ಅದಕ್ಕಿರುವುದಿಲ್ಲ, ಇಷ್ಟಕ್ಕೂ ತೂಕ ಇರುವ ಅಮಿತ್ ಶಾ ಲಿಫ್ಟ್ ನಲ್ಲಿಯೇ ಹೋಗಬಾರದಿತ್ತು ಎಂದು ಲಿಫ್ಟ್ ಜಾಮ್ ಆಗಲು ಅಮಿತ್ ಶಾ ಅವರ ತೂಕವೇ ಒಂದು ರೀತಿಯ ಕಾರಣ ಎನ್ನುವ ಅರ್ಥದಲ್ಲಿ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.