ಮೊದಲು ರಾಬರ್ಟ್ ವಾದ್ರಾ ಗೆ ಕುರ್ತಾ ಪೈಜಾಮಾ ಹಾಕಿಸುವಂತೆ ರಾಹುಲ್ ಗಾಂಧಿಗೆ ಸಲಹೆ
ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾಗೆ ಮೊದಲು ಕುರ್ತಾ ಪೈಜಾಮ ಹಾಕಿಸುವಂತೆ ರಾಹುಲ್ ಗಾಂಧಿಗೆ ...

ನವದೆಹಲಿ: ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾಗೆ ಮೊದಲು ಕುರ್ತಾ ಪೈಜಾಮ ಹಾಕಿಸುವಂತೆ ರಾಹುಲ್ ಗಾಂಧಿಗೆ ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಸಲಹೆ ನೀಡಿದ್ದಾರೆ. ಕುರ್ತಾ ಪೈಜಾಮ ಸರ್ಕಾರ ಅಧಿಕಾರಕ್ಕೆ ಬಂದರೆ ಸಾಮಾನ್ಯ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತದೆ ಎಂದು ರಾಹುಲ್ ಗಾಂಧಿ ನೀಡಿದ್ದ ಹೇಳಿಕೆಗೆ ಬಿಜೆಪಿ ಟಾಂಗ್ ನೀಡಿದೆ.
ರಾಯ್ ಬರೇಲಿಯ ರಾಜೀವ್ ಗಾಂಧಿ ಪೆಟ್ರೋಲಿಯಂ ಟೆಕ್ನಾಲಜಿ ಇನ್ ಸ್ಟಿಟ್ಯೂಟ್ ನ ಮೊದಲ ವಾರ್ಷಿಕೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಯುಪಿಎ ಸರ್ಕಾರದ ಅವಧಿಯಲ್ಲಿ ಆರ್ ಜಿ ಐ ಪಿಟಿ ಸ್ಥಾಪನೆಯಾಯಿತು. 7 ವರ್ಷ ಕಳೆದರೂ ಇದುವರೆಗೂ ಒಂದು ಕ್ಯಾಂಪಸ್ ಸ್ಥಾಪನೆಯಾಗಿಲ್ಲ. ಈ ದೇಶದ ಆಡಳಿತ ನಡೆಸಿದ ಕಾಂಗ್ರೆಸ್ ದೇಶವನ್ನು ಗುಡಿಸಿ ಗುಂಡಾಂತರ ಮಾಡಿದೆ.ಕೇವಲ ಘೋಷಣೆಗಳಿಂದ ದೇಶದ ಅಭಿವೃದ್ಧಿ ಆಗಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
2008 ರಲ್ಲಿ ಬಾಡಿಗೆ ಕಟ್ಟಡದಲ್ಲಿ ಆರ್ಜಿಐಪಿಟಿ ಆರಂಭವಾಯಿತು. ಈ ವೇಳೆ ಸ್ನಾತಕೋತ್ತರ ಪದವಿ, ಎಂಜಿನೀಯರಿಂಗ್ ಮತ್ತು ಎಂಬಿಎಸ, ಹಾಗೂ ಪಿಎಚ್ ಡಿ ಪದವಿ ಕೋರ್ಸ್ ಗಳು ಆರಂಭವಾದವು. ನಾವು ಬೇರೆಯವರ ವಿರುದ್ದ ಆರೋಪ ಮಾಡಿ ಓಡಿ ಹೋಗುವವರಲ್ಲ. ಪಕ್ಷಪಾತ ರಾಜಕಾರಣ ಮಾಡುವುದು ಬಿಜೆಪಿಯಲ್ಲ. ನುಡಿದಂತೆ ನಡೆಯುವವರು ನಾವು ಎಂದ ಧರ್ಮೇಂದ್ರ ಪ್ರಧಾನ್ ಮುಂದಿನ ವರ್ಷ ಕ್ಯಾಂಪಸ್ ನಿರ್ಮಿಸುವ ಭರವಸೆ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


