ಸೋದರ ಸಂಬಂಧಿ ಜತೆ ಪ್ರೇಮಬಂಧ: ತಂಗಿಯ ತಲೆ ಕಡಿದ ಸಹೋದರರು
ಸೋದರ ಸಂಬಂಧಿ ಹುಡುಗನ ಜತೆ ಪ್ರೇಮ ಸಂಬಂಧ ಹೊಂದಿದ ಕಾರಣಕ್ಕೆ ಸಹೋದರರಿಬ್ಬರು ತಮ್ಮ ತಂಗಿಯ ತಲೆಯನ್ನು ಕಡಿದು ಅದನ್ನು ತಮ್ಮ ಗ್ರಾಮದಲ್ಲಿ...

ಶಹಜಹಾನ್‌ಪುರ(ಉತ್ತರಪ್ರದೇಶ): ಸೋದರ ಸಂಬಂಧಿ ಹುಡುಗನ ಜತೆ ಪ್ರೇಮ ಸಂಬಂಧ ಹೊಂದಿದ ಕಾರಣಕ್ಕೆ ಸಹೋದರರಿಬ್ಬರು ತಮ್ಮ ತಂಗಿಯ ತಲೆಯನ್ನು ಕಡಿದು ಅದನ್ನು ತಮ್ಮ ಗ್ರಾಮದಲ್ಲಿ ಎಲ್ಲರ ಮುಂದೆ ಪ್ರದರ್ಶಿಸಿದ ಭೀಭತ್ಸಕರ ಘಟನೆ ವರದಿಯಾಗಿದೆ.
ಸಹೋದರರಾದ 25 ವರ್ಷದ ಗುಲ್ ಹಸನ್ ಮತ್ತು 20 ವರ್ಷದ ನನ್‌ಹೇ ತಮ್ಮ 17ವರ್ಷದ ಸಹೋದರಿ ಫೂಲ್ ಜಹಾನ್ ಳ ತಲೆ ಕಡಿದು ಗ್ರಾಮದಲ್ಲೇಲ್ಲ ಪ್ರದರ್ಶಿಸಿ ನಂತರ ನಾಪತ್ತೆಯಾಗಿದ್ದಾರೆ.
ಘಟನೆ ವಿವರ:
ಮದುವೆಯಾಗ ಬಯಸಿದ್ದ ಸೋದರ ಸಂಬಂಧಿ ಹುಡುಗನ ಮನೆಯ ಎದುರು ಫೂಲ್ ಜಹಾನ್ ನಿಂತಿರುವುದನ್ನು ಕಂಡು ವ್ಯಗ್ರರಾದ ಕೊಲೆಗಡುಕ ಸಹೋದರರು, ತಮ್ಮ ತಂಗಿಯನ್ನು ಗ್ರಾಮದ ನಡು ಭಾಗದಲ್ಲಿನ ಚೌಕಕ್ಕೆ ದರದರನೆ ಎಳೆದುಕೊಂಡು ಬಂದಿದ್ದಾರೆ. ಗ್ರಾಮದ ಚೌಕವನ್ನು ತಲುಪಿದಾಗ ಅಲ್ಲಿ ಅವರು ಆಕೆಯ ತಲೆಯನ್ನು ಕಡಿದರು ಬಳಿಕ ರಕ್ತ ಸುರಿಯುತ್ತಿದ್ದ ತಲೆಯ ಭಾಗವನ್ನು ಸುಮಾರು ಒಂದು ತಾಸು ಕಾಲ ಗ್ರಾಮದಲ್ಲೆಲ್ಲ ಸುತ್ತಾಡಿಸಿ ಜನರ ಮುಂದೆ ಪ್ರದರ್ಶಿಸಿದ್ದಾರೆ.
ಈ ವೇಳೆ, ಗ್ರಾಮದಲ್ಲಿನ ಇತರ ಹುಡುಗಿಯರಿಗೆ ಇದೊಂದು ಪಾಠ. ನಮ್ಮ ಪುತ್ರಿಯರು ಮತ್ತು ಸಹೋದರಿಯರು ಯಾವುದೇ ರೀತಿಯ ಅನೈತಿಕ ಸಂಬಂಧ ಹೊಂದಲು ನಾವು ಬಿಡುವುದಿಲ್ಲ ಎಂದು ಕೂಗಾಡಿದ್ದಾರೆ. ಈ ಘಟನೆಯಿಂದಾಗಿ ಗ್ರಾಮದಲ್ಲಿ ಉದ್ರಿಕ್ತ ವಾತಾವರಣ ನಿರ್ಮಾಣವಾಗಿದೆ. ಸದ್ಯ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


