ಸೇನಾ ಸಿಬ್ಬಂದಿಯಿಂದ ಅತ್ಯಾಚಾರ: ಗರ್ಭಿಣಿ ಮಹಿಳೆಯಿಂದ ಆರೋಪ
ಬೋಡೋಲ್ಯಾಂಡ್ ರಾಷ್ಟ್ರೀಯ ಪ್ರಜಾಸತ್ತಾತ್ಮಕ ರಂಗ(ಎನ್‌ಡಿಎಫ್‌ಬಿ) ಕಾರ್ಯಕರ್ತನ ಗರ್ಭಿಣಿ ಪತ್ನಿ ತನ್ನ ಮೇಲೆ ಸೇನಾ ಸಿಬ್ಬಂದಿಗಳು ಅತ್ಯಾಚಾರವೆಸಗಿದ್ದಾರೆ ಎಂದು ಆರೋಪಿಸಿದ್ದಾರೆ.

ಗುವಾಹಟಿ: ಬೋಡೋಲ್ಯಾಂಡ್ ರಾಷ್ಟ್ರೀಯ ಪ್ರಜಾಸತ್ತಾತ್ಮಕ ರಂಗ(ಎನ್‌ಡಿಎಫ್‌ಬಿ) ಕಾರ್ಯಕರ್ತನ ಗರ್ಭಿಣಿ ಪತ್ನಿ ತನ್ನ ಮೇಲೆ ಸೇನಾ ಸಿಬ್ಬಂದಿಗಳು ಅತ್ಯಾಚಾರವೆಸಗಿದ್ದಾರೆ ಎಂದು ಆರೋಪಿಸಿದ್ದಾರೆ. ಆರೋಪವನ್ನು ಅಲ್ಲಗಳೆದಿರುವ ಸೇನೆ, ಎನ್‌ಡಿಎಫ್‌ಬಿ ಕಾರ್ಯಕರ್ತನ ಪತ್ನಿ ಆರೋಪಕ್ಕೆ ಪ್ರತಿಯಾಗಿ ಎಫ್ಐಆರ್ ದಾಖಲಿಸಿದೆ.
ಭಾರತೀಯ ಸೇನೆಯ ಗೌರವಕ್ಕೆ ಧಕ್ಕೆ ತರಲು ಎನ್‌ಡಿಎಫ್‌ಬಿ ಕಾರ್ಯಕರ್ತನ ಪತ್ನಿ ಈ ರೀತಿ ಆರೋಪ ಮಾಡಿದ್ದಾರೆಂದು ಸೇನೆ ಆರೋಪಿಸಿದೆ. ಗರ್ಭಿಣಿ ಮೇಲೆ ಅತ್ಯಾಚಾರ ನಡೆದಿರುವ ಪ್ರಕರಣದ ಬಗ್ಗೆ ಅಸ್ಸಾಂ ರಾಜ್ಯ ಸರ್ಕಾರ ನ್ಯಾಯಾಂಗ ತನಿಖೆಗೆ ಆದೇಶಿಸಿದೆ. ಇಬ್ಬರು ಸೇನಾ ಸಿಬ್ಬಂದಿಗಳು ತನ್ನನ್ನು ಶಾಲಾ ಕಟ್ಟಡದೊಳಗೆ ಎಳೆದೊಯ್ದು, ಅತ್ಯಾಚಾರವೆಸಗಿದ್ದಾರೆ ಎಂದು 8 ತಿಂಗಳ ಗರ್ಭಿಣಿ ಸೇನೆ ವಿರುದ್ಧ ಆರೋಪ ಮಾಡಿದ್ದಾರೆ.
ಮಹಿಳೆ ನೀಡಿರುವ ದೂರನ್ನು ದಾಖಲಿಸಿಕೊಂಡಿರುವ ಪೊಲೀಸರು ಸೇನಾ ಸಿಬ್ಬಂದಿಗಳ ವಿರುದ್ಧ ಸೆಕ್ಷನ್ 376 (2) ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ರಕ್ಷಣಾ ಇಲಾಖೆ ವಕ್ತಾರ, ಸೇನಾ ಸಿಬ್ಬಂದಿಗಳ ವಿರುದ್ಧ ಕೇಳಿಬಂದಿರುವ ಅತ್ಯಾಚಾರದ ಆರೋಪ ಸುಳ್ಳು, ಸೇನೆ ಗೌರವಕ್ಕೆ ಧಕ್ಕೆ ಉಂಟು ಮಾಡಲು ಈ ರೀತಿಯ ಆರೋಪ ಹೊರಿಸಲಾಗಿದೆ ಎಂದು ಹೇಳಿದ್ದಾರೆ.
ಸೇನೆ ಗೌರವವನ್ನು ಹಾಳು ಮಾಡುವುದಕ್ಕಾಗಿ ಮಹಿಳೆ ಆರೋಪ ಮಾಡಿದ್ದಾರೆಂದು ಪೊಲೀಸ್ ಠಾಣೆಯಲ್ಲಿ ಎನ್‌ಡಿಎಫ್‌ಬಿ ಪತ್ನಿ ವಿರುದ್ಧ ಸೇನೆ ಪ್ರತಿದೂರು ನೀಡಿದೆ. ವೈದ್ಯಕೀಯ ಪರೀಕ್ಷೆಯಲ್ಲಿ ಮಹಿಳೆ ಮೇಲೆ ಯಾವುದೇ ಗಾಯಗಳಾಗಿರುವುದು ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ. ವೈದ್ಯಕೀಯ ಪರೀಕ್ಷೆಯ ಬಗ್ಗೆ ಸಂಪೂರ್ಣ ವರದಿ ಇನ್ನಷ್ಟೇ ಬರಬೇಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


