ದೇಶ

ಆತ್ಮಹತ್ಯೆಗೆ ಒಪ್ಪಿಗೆ ಕೋರಿದ 25 ಸಾವಿರ ಅನ್ನದಾತರು!

ಭೂಮಿಗೆ ಪರಿಹಾರ ಕೋರಿ 17 ವರ್ಷಗಳಿಂದ ನಡೆಸುತ್ತಿರುವ ತಮ್ಮನಿರಂತರ ಹೋರಾಟಕ್ಕೆ ಸರ್ಕಾರ ಕಿವಿಗೊಡದ ಹಿನ್ನೆಲೆಯಲ್ಲಿ ಮಥುರಾದ...

ಆತ್ಮಹತ್ಯೆಗೆ ಒಪ್ಪಿಗೆ ಕೋರಿದ 25 ಸಾವಿರ ಅನ್ನದಾತರು!
ಸಾಂದರ್ಭಿಕ ಚಿತ್ರ
Published On :

ಲಖನೌ: ಭೂಮಿಗೆ ಪರಿಹಾರ ಕೋರಿ 17 ವರ್ಷಗಳಿಂದ ನಡೆಸುತ್ತಿರುವ ತಮ್ಮನಿರಂತರ ಹೋರಾಟಕ್ಕೆ ಸರ್ಕಾರ ಕಿವಿಗೊಡದ ಹಿನ್ನೆಲೆಯಲ್ಲಿ ಮಥುರಾದ 25 ಸಾವಿರ ರೈತರು, ಆ.15ರಂದು ಸಾಮೂಹಿಕ ಆತ್ಮಹತ್ಯೆಗೆ ಅನುಮತಿ ನೀಡಬೇಕೆಂದು ರಾಷ್ಟ್ರಪತಿ ಪ್ರಣವ್ ಮುಖರ್ಜಿಗೆ ಪತ್ರ ಬರೆದಿದ್ದಾರೆ. ತಮಗೆ ನ್ಯಾಯ ಸಿಕ್ಕಿಲ್ಲ ಎಂದು ಆರೋಪಿಸಿ ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ, ವ್ಯಾಪಂ ಹಗರಣದ 70 ಮಂದಿ ಸಂತ್ರಸ್ತರು ಆತ್ಮಹತ್ಯೆಗೆ ಅನು ಮತಿ ಕೋರಿ ಪತ್ರ ಬರೆದ ಮಾರನೇ ದಿನವೇ, ಅಲ್ಲಿಂದ 175 ಕಿ.ಮೀ. ದೂರದ ಮಥುರಾದಲ್ಲಿ ರೈತರ ಅದೇ ಮಾದರಿಯನ್ನು ಅನುಸರಿಸಿದ್ದಾರೆ.ಗೋಕುಲ್ ಬ್ಯಾರೇಜ್‍ನಲ್ಲಿ ಮುಳುಗಡೆಯಾಗಿರುವ ತಮ್ಮ 700 ಎಕರೆ ಜಮೀನಿಗೆ 800 ಕೋಟಿ ಪರಿಹಾರ ನೀಡಬೇಕೆಂದು 1998ರಿಂದ ಮಥುರಾ ದ 11 ಹಳ್ಳಿಗಳ 25 ಸಾವಿರ ರೈತರು ಧರಣಿ ನಡೆಸುತ್ತಿದ್ದಾರೆ ಎಂದು ಟೈಮ್ಸ್ ಆಫ್  ಇಂಡಿಯಾ ವರದಿ ಮಾಡಿದೆ. ಆರ್‍ಎಸ್‍ಎಸ್ ಅಂಗಸಂಸ್ಥೆ ಭಾರತೀಯ ಕಿಸಾನ್ ಸಂಘದ ನೇತೃತ್ವದಲ್ಲಿ 17 ವರ್ಷ ಕಾಲ ನಡೆದ ರೈತರ ಧರಣಿಗೆ ರಾಜ್ಯ, ಕೇಂದ್ರ ಸರ್ಕಾರಗಳು ಕಿವುಡಾ ಗಿದ್ದು, ಕಳೆದ ನವೆಂಬರ್‍ನಲ್ಲಿ ಧರಣಿ ನಿರತರ ಮೇಲೆ ಪೊಲೀಸರಿಂದ ಗೋಲಿ ಬಾರ್ ಕೂಡ ನಡೆದಿತ್ತು. ಜತೆಗೆ ಪ್ರತಿ ಭಟನೆ ಬಗ್ಗುಬಡಿಯುವ ಯತ್ನವಾಗಿ ರಾಜ್ಯ ಸರ್ಕಾರ ಧರಣಿನಿರತರ ವಿರುದ್ಧ ಸುಳ್ಳು ಕೇಸುಗಳನ್ನೂ ಹಾಕಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.