ಸಂಸತ್ತಿನಲ್ಲಿ ಗದ್ದಲ: ಕಾಂಗ್ರೆಸ್ ಗೆ ಬೆಂಬಲ ನೀಡಲ್ಲ ಎಂದ ಮುಲಾಯಂ ಸಿಂಗ್
ಮುಂಗಾರು ಅಧಿವೇಶನ ಆರಂಭವಾದಾಗಿನಿಂದಲೂ ಲಲಿತ್ ಮೋದಿ, ವ್ಯಾಪಂ ಹಾಗೂ ಕಾಂಗ್ರೆಸ್ ಸಂಸದರ ಅಮಾನತು ಪ್ರಕರಣಗಳನ್ನಿಡಿದು ಸಂಸತ್ತಿನಲ್ಲಿ ಗದ್ದಲ ಉಂಟುಮಾಡುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ನಾವು ಬೆಂಬಲ ನೀಡುವುದಿಲ್ಲ ಎಂದು ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್...

ನವದೆಹಲಿ: ಮುಂಗಾರು ಅಧಿವೇಶನ ಆರಂಭವಾದಾಗಿನಿಂದಲೂ ಲಲಿತ್ ಮೋದಿ, ವ್ಯಾಪಂ ಹಾಗೂ ಕಾಂಗ್ರೆಸ್ ಸಂಸದರ ಅಮಾನತು ಪ್ರಕರಣಗಳನ್ನಿಡಿದು ಸಂಸತ್ತಿನಲ್ಲಿ ಗದ್ದಲ ಉಂಟುಮಾಡುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ನಾವು ಬೆಂಬಲ ನೀಡುವುದಿಲ್ಲ ಎಂದು ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ ಸೋಮವಾರ ಹೇಳಿದ್ದಾರೆ.
ಮುಂಗಾರು ಅಧಿವೇಶನದಲ್ಲಿ ಇಂದೂ ಸಹ ಕಾಂಗ್ರೆಸ್ ಪಕ್ಷ ಸಂಸತ್ತಿನಲ್ಲಿ ಗದ್ದಲ ಉಂಟುಮಾಡಿದ ಹಿನ್ನೆಲೆಯಲ್ಲಿ ಕಲಾಪವನ್ನು 12.30ರವರೆಗೆ ಮುಂದೂಡಲಾಗಿತ್ತು. ಹೀಗಾಗಿ ಕಾಂಗ್ರೆಸ್ ಕುರಿತಂತೆ ಅಸಮಾಧಾನ ವ್ಯಕ್ತಪಡಿಸಿದ ಮುಲಾಯಂ ಸಿಂಗ್ ಅವರು, ಹಗರಣಗಳ ಹೋರಾಟ ಮಾಡಿ ಈಗಾಗಲೇ ಸಾಕಷ್ಟು ದಿನ ಹಾಳಾಗಿದೆ. ಮತ್ತೆ ಇದನ್ನೇ ಮುಂದುವರೆಸಿಕೊಂಡು ಹೋಗಿ ಉಳಿದಿರುವ ಕೊನೆಯ ನಾಲ್ಕು ದಿನಗಳನ್ನು ಹಾಳು ಮಾಡಿಕೊಳ್ಳುವುದು ನಮಗೆ ಇಷ್ಟವಿಲ್ಲ. ಹೀಗಾಗಿ ಕಾಂಗ್ರೆಸ್ ನಡೆಸುತ್ತಿರುವ ಪ್ರತಿಭಟನೆಗೆ ನಾವು ಬೆಂಬಲ ಸೂಚಿಸುವುದಿಲ್ಲ ಎಂದು ಹೇಳಿದ್ದಾರೆ.
ಮುಂಗಾರು ಅಧಿವೇಶನ ಮುಕ್ತಾಯ ಗೊಳ್ಳಲು ಇನ್ನು ಕೇವಲ ನಾಲ್ಕು ದಿನವಷ್ಟೇ ಬಾಕಿ ಇದೆ. ಈ ಉಳಿದ ದಿನಗಳೂ ಗದ್ದಲದಲ್ಲೇ ಕೊನೆಗೊಂಡರೆ ಸರ್ಕಾರಕ್ಕೆ ವಿಶೇಷ ಅಧಿವೇಶನದ ತಂತ್ರಕ್ಕೆ ಮೊರೆ ಹೋಗುವುದು ಅನಿವಾ ರ್ಯವಾಗಲಿದೆ. ಮೂಲಗಳ ಪ್ರಕಾರ ಕೇಂದ್ರಸರ್ಕಾರ ಮೂರು ಅಥವಾ ನಾಲ್ಕು ದಿನಗಳ ವಿಶೇಷ ಅಧಿವೇಶನ ಕರೆಯುವ ಸಾಧ್ಯತೆ
ಕುರಿತು ಪರಿಶೀಲಿಸುತ್ತಿದೆ. ಇದಕ್ಕಾಗಿ ಮೇಲ್ಮನೆ ಯಲ್ಲಿ ಸಮಾಜವಾದಿ ಪಕ್ಷ, ಎಐಎಡಿಎಂಕೆ, ಬಿಜೆಡಿ, ತೃಣಮೂಲ ಕಾಂಗ್ರೆಸ್‍ನಂಥ ಇತರೆ ಪಕ್ಷಗಳ ಬೆಂಬಲ ಪಡೆಯಲೂ ಸರ್ಕಾರ ತಂತ್ರರೂಪಿಸುತ್ತಿದೆ. ಚೆನ್ನೈನಲ್ಲಿ ಪ್ರಧಾನಿ ಮೋದಿ ಹಾಗೂ ತಮಿಳುನಾಡು ಸಿಎಂ ಜಯಲಲಿತಾ ಭೇಟಿ ಈ ತಂತ್ರದ ಭಾಗ ಎನ್ನಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


