ನಾಗಾಲ್ಯಾಂಡಲ್ಲಿ ತೆರಿಗೆ ಹೆಸರಲ್ಲಿ ಹಫ್ತಾ ವಸೂಲು
ಉದ್ಯಮಿಗಳಿಗೆ 7 ಪಟ್ಟು, ಸರ್ಕಾರಿ ಉದ್ಯೋಗಸ್ಥರಿಗೆ, ನೌಕರರಿಗೆ ಶೇ.24ರಷ್ಟು ``ತೆರಿಗೆ''! ಅರೆ ಇದು ಯಾವ ಸರ್ಕಾರದ ಕಾನೂನು ಎಂದು ತಿಳಿದುಕೊಳ್ಳಬೇಡಿ. ಈಶಾನ್ಯ ರಾಜ್ಯ ನಾಗಾಲ್ಯಾಂಡ್‍ನಲ್ಲಿ...

ದಿಮಾಪುರ: ಉದ್ಯಮಿಗಳಿಗೆ 7 ಪಟ್ಟು, ಸರ್ಕಾರಿ ಉದ್ಯೋಗಸ್ಥರಿಗೆ, ನೌಕರರಿಗೆ ಶೇ.24ರಷ್ಟು ``ತೆರಿಗೆ''! ಅರೆ ಇದು ಯಾವ ಸರ್ಕಾರದ ಕಾನೂನು ಎಂದು ತಿಳಿದುಕೊಳ್ಳಬೇಡಿ. ಈಶಾನ್ಯ ರಾಜ್ಯ ನಾಗಾಲ್ಯಾಂಡ್‍ನಲ್ಲಿ ಎನ್‍ಎಸ್‍ಸಿಎನ್ (ಐಎಂ), ಎನ್‍ಎಸ್‍ಸಿಎನ್(ಯುನಿಫಿಕೇಶನ್), ಎನ್‍ಎಸ್‍ಸಿಎನ್ (ಖಪ್ಲಾಂಗ್) ಇನ್ನಿತರ ಉಗ್ರ ಸಂಘಟನೆಗಳು ``ತೆರಿಗೆ'' ಹೆಸರಲ್ಲಿ ವಸೂಲು ಮಾಡುತ್ತಿರುವ ಹಫ್ತಾದ ಪ್ರಮಾಣವಿದು.
ನಿಗದಿತ ಗಡುವು ಕೊಟ್ಟು ಅವರು ಹೇಳಿದ ಮೊತ್ತ ಪಾವತಿಸಬೇಕೆಂದು ಹಿಂಸಿಸುತ್ತಿದ್ದಾರೆ ಎಂದು ವ್ಯಾಪಾರಿಗಳು ಮಾಧ್ಯಮಗಳೊಂದಿಗೆ ಅಳಲುತೋಡಿಕೊಂಡಿದ್ದಾರೆ. ಎಲ್ಲ ಗುಂಪುಗಳಿಂದ ರು.2.5ಲಕ್ಷದಷ್ಟು ಹಣ ಸುಲಿಗೆಯಾಗಲಿದೆ. ತೆರಿಗೆ ಹೆಸರಿನಡಿಯಲ್ಲಿ ಒತ್ತಡ ಹೇರಿ ಸುಲಿಯುತ್ತಿದ್ದಾರೆ ಇದು ದಿಮಾ-ಪುರದ ವ್ಯಾಪಾರಿಯೊಬ್ಬರು``ಎನ್‍ಡಿಟಿವಿ''ಗೆ ತಿಳಿಸಿದ್ದಾರೆ.
ಆದರೆ ಜೀವಭಯದಿಂದ ಪೊಲೀಸರ ಬಳಿ ದೂರು ನೀಡಲೂ ಹೆದರುತ್ತಿರುವು ದಾಗಿ ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ತಮ್ಮದು ಕ್ರಾಂತಿಕಾರಿ ಸರ್ಕಾರ ಎಂದು ಪ್ರತಿ ಗುಂಪೂ ಹೇಳಿಕೊಳ್ಳುತ್ತಿದ್ದು, ಅತಿ ಚಿಕ್ಕ ವ್ಯಾಪಾರಿಗಳಿಗೂ ವಸೂಲಿಯಿಂದ ರಿಯಾಯ್ತಿ ನೀಡುತ್ತಿಲ್ಲ ಎನ್ನುತ್ತಿದ್ದಾರೆ ವ್ಯಾಪಾರಸ್ಥರು. ಸರ್ಕಾರ ಪಡೆಯುತ್ತಿರುವ ತೆರಿಗೆಯ ಐದರಿಂದ ಹತ್ತು ಪಟ್ಟು ಹೆಚ್ಚು ಹಣವನ್ನು ಈ ಗುಂಪುಗಳು ``ತೆರಿಗೆ'' ಹೆಸರಲ್ಲೇ ವಸೂಲಿ ಮಾಡುತ್ತಿವೆ. ಎಂದು ಸಂತ್ರಸ್ತರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


