ಅಧಿವೇಶನ ಸಂಪೂರ್ಣ ಸ್ವಾಹ?
ಲಲಿತ್ ಮೋದಿ, ವ್ಯಾಪಂ ಹಾಗೂ ಕಾಂಗ್ರೆಸ್ ಸಂಸದರ ಅಮಾನತು ಗದ್ದಲದಲ್ಲೇ ಕಳೆದು ಹೋಗಿರುವ ಸಂಸತ್ತಿನ ಮುಂಗಾರು ಅಧಿವೇಶನದ ಕೊನೆಯ ನಾಲ್ಕು ದಿನಗಳೂ ಆಡಳಿತ ಪ್ರತಿಪಕ್ಷಗಳ ತಿಕ್ಕಾಟದಲ್ಲೇ ಕೊಚ್ಚಿಹೋಗುವ ಸಾಧ್ಯತೆ ಇದೆ...

ನವದೆಹಲಿ: ಲಲಿತ್ ಮೋದಿ, ವ್ಯಾಪಂ ಹಾಗೂ ಕಾಂಗ್ರೆಸ್ ಸಂಸದರ ಅಮಾನತು ಗದ್ದಲದಲ್ಲೇ ಕಳೆದು ಹೋಗಿರುವ ಸಂಸತ್ತಿನ ಮುಂಗಾರು ಅಧಿವೇಶನದ ಕೊನೆಯ ನಾಲ್ಕು ದಿನಗಳೂ ಆಡಳಿತ ಪ್ರತಿಪಕ್ಷಗಳ ತಿಕ್ಕಾಟದಲ್ಲೇ ಕೊಚ್ಚಿಹೋಗುವ ಸಾಧ್ಯತೆ ಇದೆ. ಲಲಿತ್ ಮೋದಿ ಹಾಗೂ ವ್ಯಾಪಂ ವಿಚಾರದಲ್ಲಿ ಕಾಂಗ್ರೆಸ್ ತನ್ನ ಪಟ್ಟು ಸಡಿಲಿಸುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ಇದರ ಜತೆಗೆ, ಇತ್ತೀಚೆಗೆ ಬಿಜೆಪಿ ಮುಖಂಡರು ಸೋನಿಯಾ ಹಾಗೂ ರಾಹುಲ್ ಗಾಂಧಿ ವಿರುದ್ಧ ಮಾಡಿದ ವೈಯಕ್ತಿಕ ಟೀಕೆ ಕಾಂಗ್ರೆಸ್ ಮುಖಂಡರನ್ನು ಮತ್ತಷ್ಟು ಕೆರಳಿಸಿದೆ. ಬಿಜೆಪಿ ``ನಿಂದನೆಯ ರಾಜಕೀಯಕ್ಕೆ ನಾವು ಬಗ್ಗುವುದಿಲ್ಲ'' ಎನ್ನುವ ಎಚ್ಚರಿಕೆಯನ್ನು ಪಕ್ಷ ಈಗಾಗಲೇ ರವಾನಿಸಿದೆ. ಇದಕ್ಕೆ ಬಿಜೆಪಿ ಕೂಡ ಖಾರವಾಗಿ ಪ್ರತಿಕ್ರಿಯಿಸಿದೆ. ಅ„ವೇಶನದುದ್ದಕ್ಕೂ ಕಾಂಗ್ರೆಸ್‍ನ ರಾಜಕೀಯ ದಿವಾಳಿತನ ಪ್ರದರ್ಶನವಾಗಿದೆ.
ರಚನಾತ್ಮಕ ಪ್ರತಿಪಕ್ಷವಾಗಿ ಪಾತ್ರನಿರ್ವಹಿಸುವ ಬದಲು ಅ„ವೇಶನಕ್ಕೆ ಅಡ್ಡಿಯುಂಟು ಮಾಡುವ ರಾಜಕೀಯವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ತಿರುಗೇಟು ನೀಡಿದೆ. ಈ ನಡುವೆ, ಸ್ಪೀಕರ್ ಎಚ್ಚರಿಕೆಯ ನಡುವೆಯೂ ಗದ್ದಲ ನಡೆಸಿದ 25 ಕಾಂಗ್ರೆಸ್ ಸಂಸ ದರ ಐದು ದಿನಗಳ ಅಮಾನತು ಶಿಕ್ಷೆ ಮುಕ್ತಾಯಗೊಂಡಿದ್ದು, ಅವರು ಸೋಮವಾರ ಅಧಿವೇಶನಕ್ಕೆ ಹಾಜರಾಗಲಿದ್ದಾರೆ. ಈ ಸಂಸದರು ಸೋಮವಾರ ಹೇಗೆ ನಡೆದುಕೊಳ್ಳಲಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ.
ಈ ಎಲ್ಲ ಬೆಳವಣಿಗೆಗಳ ನಡುವೆ ಸಚಿವ ವೆಂಕಯ್ಯ ನಾಯ್ಡು ಅವರು ಸಂಸತ್ತಿನ ಬಾಕಿ ಕಲಾಪವಾದರೂ ಸುಗಮವಾಗಲಿ ನಡೆ ಯಲು ಬಿಡಿ ಎಂದು ಪ್ರತಿಪಕ್ಷಗಳ ಮನವೊಲಿಕೆಗೆ
ಮುಂದಾಗಿದ್ದಾರೆ. ಇದಕ್ಕಾಗಿ ನಾವು ಪ್ರತಿಪಕ್ಷಗಳ ಅರ್ಥಪೂರ್ಣ ಸಲಹೆಗಳನ್ನು ಸ್ಪೀಕರಿಸಲು ಸಿದ್ಧ ಎನ್ನುವ ಸಂದೇಶವನ್ನು ಅವರು ರವಾನಿಸಿದ್ದಾರೆ. ಆದರೆ, ಪ್ರತಿಪಕ್ಷ
ಕಾಂಗ್ರೆಸ್‍ನಿಂದ ಈ ಸಂದೇಶಕ್ಕೆ ಈವರೆಗೆ ಯಾವುದೇ ಪ್ರತಿಕ್ರಿಯೆ ಹೊರಬಿದ್ದಿಲ್ಲ. ಇನ್ನೂ ಎಂಟು ಪ್ರಮುಖ ವಿಧೇಯಕಗಳು ಮಂಡನೆಯಾಗುವುದು ಬಾಕಿ ಇದೆ. ನಾಲ್ಕು
ವಿಧೇಯಕಗಳು ಲೋಕಸಭೆಯ ಅಂಗೀಕಾರ ಪಡೆದಿವೆ.
ಕಾಂಗ್ರೆಸ್ ಪ್ರತಿಪಕ್ಷವಾಗಿ ತನ್ನ ಜವಾಬ್ದಾರಿಯನ್ನು ಅರ್ಥ ಮಾಡಿಕೊಳ್ಳಲಿದೆ ಎಂಬುದು ನನ್ನ ಭಾವನೆ. ನಾಳೆ ಏನಾಗುತ್ತದೆ ಎನ್ನುವುದನ್ನು ಕಾದು ನೋಡೋಣ.ಸೋಮವಾರ ಸೋಮವಾರವೇ ಆಗಿರಬೇಕೇ ಹೊರತು ಭಾನುವಾರ ಆಗಬಾರದು ಎನ್ನು ವುದು ನನ್ನ ಬಯಕೆ ಎಂದು ನಾಯ್ಡು ಚೆನ್ನೈನಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.ಸಂಸತ್ತಿನ ಮುಂಗಾರು ಅ„ವೇಶನ ಆ.13 ರಂದು ಮುಕ್ತಾಯಗೊಳ್ಳಲಿದೆ. ಅಂದರೆ ಈ ಅಧಿವೇಶನ ಮುಕ್ತಾಯಗೊಳ್ಳಲು ಕೇವಲ ನಾಲ್ಕು ದಿನಗಳಷ್ಟೇ ಬಾಕಿ ಇದೆ. ಭೂಸ್ವಾಧೀನ ಕಾಯ್ದೆ, ಜಿಎಸ್‍ಟಿ ಸೇರಿದಂತೆ ಒಟ್ಟು ಎಂಟು ಮಹತ್ವದ ಕಾಯ್ದೆಗಳಿಗೆ ಈ ಅಧಿವೇಶನದಲ್ಲೇ ಒಪ್ಪಿಗೆ ಪಡೆಯಲು ಸರ್ಕಾರ ಪ್ರಯತ್ನ ನಡೆಸುತ್ತಿದೆ.ಜಿಎಸ್‍ಟಿಗೆ ವಿಶೇಷ ಅಧಿವೇಶನ: ಆರ್ಥಿಕ ಸುಧಾರಣೆಗೆ ಉತ್ತೇಜನ ನೀಡಲಿರುವ ಮಹತ್ವದ ಜಿಎಸ್‍ಟಿ ವಿಧೇಯಕಕ್ಕೆ ಈ ಅಧಿವೇಶನದಲ್ಲೇ ಒಪ್ಪಿಗೆ ಪಡೆಯಲು ಪ್ರಯತ್ನಿಸುತ್ತಿರುವ ಎನ್‍ಡಿಎ ಸರ್ಕಾರ ಒಂದು ವೇಳೆ ಅದು ಸಾಧ್ಯವಾಗದೇ ಹೋದರೆ ವಿಶೇಷ ಅಧಿವೇಶನ ಕರೆಯುವ ನಿರೀಕ್ಷೆ ಇದೆ.
ಮುಂಗಾರು ಅಧಿವೇಶನ ಮುಕ್ತಾಯ ಗೊಳ್ಳಲು ಇನ್ನು ಕೇವಲ ನಾಲ್ಕು ದಿನವಷ್ಟೇ ಬಾಕಿ ಇದೆ. ಈ ಉಳಿದ ದಿನಗಳೂ ಗದ್ದಲದಲ್ಲೇ ಕೊನೆಗೊಂಡರೆ ಸರ್ಕಾರಕ್ಕೆ ವಿಶೇಷ ಅಧಿವೇಶ ನದ ತಂತ್ರಕ್ಕೆ ಮೊರೆ ಹೋಗುವುದು ಅನಿವಾ ರ್ಯವಾಗಲಿದೆ. ಮೂಲಗಳ ಪ್ರಕಾರ ಕೇಂದ್ರಸರ್ಕಾರ ಮೂರು ಅಥವಾ ನಾಲ್ಕು ದಿನಗಳ ವಿಶೇಷ ಅಧಿವೇಶನ ಕರೆಯುವ ಸಾಧ್ಯತೆ
ಕುರಿತು ಪರಿಶೀಲಿಸುತ್ತಿದೆ. ಇದಕ್ಕಾಗಿ ಮೇಲ್ಮನೆ ಯಲ್ಲಿ ಸಮಾಜವಾದಿ ಪಕ್ಷ, ಎಐಎಡಿಎಂಕೆ, ಬಿಜೆಡಿ, ತೃಣಮೂಲ ಕಾಂಗ್ರೆಸ್‍ನಂಥ ಇತರೆ ಪಕ್ಷಗಳ ಬೆಂಬಲ ಪಡೆಯಲೂ ಸರ್ಕಾರ ತಂತ್ರರೂಪಿಸುತ್ತಿದೆ. ಚೆನ್ನೈನಲ್ಲಿ ಪ್ರಧಾನಿ ಮೋದಿ ಹಾಗೂ ತಮಿಳುನಾಡು ಸಿಎಂ ಜಯಲಲಿತಾ ಭೇಟಿ ಈ ತಂತ್ರದ ಭಾಗ ಎನ್ನಲಾಗುತ್ತಿದೆ.
ಭೂಸ್ವಾಧೀನ ವಿಧೇಯಕ ಇಂದು ಮತ್ತೆ ಸಭೆ
ವಿವಾದಾತ್ಮಕ ಭೂಸ್ವಾಧೀನ ವಿಧೇಯಕಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರ ಯೂಟರ್ನ್ ಹೊಡೆದಿದ್ದು, ಯುಪಿಎ ಅವಧಿಯಲ್ಲಿ ಮಾಡಲಾಗಿದ್ದ 6 ಪ್ರಮುಖ ತಿದ್ದುಪಡಿಗಳನ್ನು ಉಳಿಸಿಕೊಳ್ಳಲು ನಿರ್ಧರಿಸಿದೆ.
ವಿಧೇಯಕಕ್ಕೆ ಸಂಬಂಧಿಸಿ ಸೋಮವಾರ ಬಿಜೆಪಿ ಸಂಸದ ಎಸ್.ಎಸ್. ಅಹ್ಲುವಾಲಿ ಯಾ ಅವರ ಸಮಿತಿ ಸೋಮವಾರ ಮತ್ತೆ ಸಭೆ ಸೇರಲಿದ್ದು, ಉಳಿದ ಮೂರು ಪ್ರಮುಖ ನಿಬಂಧನೆಗಳ ಕುರಿತೂ ಪ್ರತಿ ಪಕ್ಷಗಳ ಒಮ್ಮತಾಭಿಪ್ರಾಯ ಪಡೆಯುವ ನಿರೀಕ್ಷೆ ಇದೆ. ಐದು ವರ್ಷದೊಳಗೆ ಸ್ವಾಧೀನಪಡಿಸಿಕೊಂಡ ಭೂಮಿಯನ್ನು ಬಳಸಿಕೊಳ್ಳದಿದ್ದರೆ ಅದನ್ನು ಮೂಲ ಮಾಲೀಕನಿಗೆ ಅದನ್ನು ಹಿಂತಿರುಗಿಸುವುದು ಇವುಗಳಲ್ಲಿ ಪ್ರಮುಖವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


