ಶಿಸ್ತಿಗೆ ಧಕ್ಕೆಯುಂಟಾಗುವ ಟ್ಯಾಟು ಹಾಕಿಸಿಕೊಳ್ಳದಂತೆ ಸೇನಾಧಿಕಾರಿಗಳಿಗೆ ನಿರ್ಬಂಧ?
ಭಾರತೀಯ ಸೇನೆ ಅಧಿಕಾರಿಗಳ ನೇಮಕಕ್ಕೆ ಸಂಬಂಧಿಸಿದಂತೆ ಟ್ಯಾಟೂಗಳನ್ನು ನಿಷೇಧಿಸಲು ಸೇನೆ ಚಿಂತನೆ ನಡೆಸಿದೆ.

ನವದೆಹಲಿ: ಭಾರತೀಯ ಸೇನೆ ಅಧಿಕಾರಿಗಳ ನೇಮಕಕ್ಕೆ ಸಂಬಂಧಿಸಿದಂತೆ ಟ್ಯಾಟೂಗಳನ್ನು ನಿಷೇಧಿಸಲು ಸೇನೆ ಚಿಂತನೆ ನಡೆಸಿದೆ. ಈ ನಿರ್ಧಾರ ಕಾರ್ಯಗತವಾದರೆ ಸೇನೆಗೆ ಸೇರಲು ಇಚ್ಛಿಸುವ ಅಭ್ಯರ್ಥಿಗಳು ಟ್ಯಾಟುಗಳನ್ನು ಹಾಕಿಸಿಕೊಳ್ಳುವಂತಿಲ್ಲ.
ಖಾಸಗಿ ಮಾಧ್ಯಮದ ವರದಿ ಪ್ರಕಾರ, ಸೇನೆಗೆ ಸೇರಲಿರುವ ಅಭ್ಯರ್ಥಿಗೆ ತನ್ನ ದೇಹದ ಮೇಲಿರುವ ಟ್ಯಾಟು ಗಳ ಬಗ್ಗೆ ಪ್ರತ್ಯೇಕವಾಗಿ ಮಾಹಿತಿ ನೀಡಬೇಕಾಗುತ್ತದೆ. ಸೇನೆ ವಿಧಿಸಿರುವ ಮಾನದಂಡಗಳ ಪರಿಧಿಯಲ್ಲಿ ಆ ಟ್ಯಾಟುಗಳನ್ನು ಹಾಕಿಸಿಕೊಂಡಿದ್ದರೆ ಆತನನ್ನು ನೇಮಕ ಮಾಡಲಾಗುತ್ತದೆ. ಟ್ಯಾಟು ಹಾಕಿಸಿಕೊಳ್ಳುವುದಕ್ಕೂ ಸೇನೆ ಕೆಲವು ಮಾನದಂಡಗಳನ್ನು ವಿಧಿಸಿದ್ದು, ಸಂಪ್ರದಾಯ ಆಚರಣೆ ದೃಷ್ಠಿಯಿಂದ ಬುಡಕಟ್ಟು ಜನಾಂಗದವರಿಗೆ ಮಾತ್ರ ಟ್ಯಾಟು(ಹಚ್ಚೆ) ಹಾಕಿಸಿಕೊಳ್ಳುವುದಕ್ಕೆ ಅವಕಾಶ ನೀಡಲಾಗಿದೆ. ಆದರೆ ಸೇನೆಗೆ ಸೇರಲಿರುವ ವ್ಯಕ್ತಿ ತಾನು ಬುಡಕಟ್ಟು ಜನಾಂಗಕ್ಕೆ ಸೇರಿದವನು ಎಂದು ಸಾಬೀತು ಪಡಿಸಿದರೆ ಮಾತ್ರ ಇದಕ್ಕೆ ಅವಕಾಶವಿದೆ.
ಸೇನೆ ಸೇರಿದ ನಂತರ ಯಾವುದೇ ಟ್ಯಾಟುಗಳನ್ನು ಹಾಕಿಸಿಕೊಳ್ಳುವುದಿಲ್ಲ ಎಂದು ತರಬೇತಿಗೆ ತೆರಳುವ ಮುನ್ನ ಅಭ್ಯರ್ಥಿಗಳು ಪ್ರಮಾಣಪತ್ರಕ್ಕೆ ಸಹಿ ಮಾಡುವ ನಿಯಮವನ್ನು ರೂಪಿಸಲೂ ಸೇನೆ ಚಿಂತನೆ ನಡೆಸಿದೆ. ಸೇನೆ ತನ್ನ ಶಿಸ್ತಿಗೆ ಧಕ್ಕೆ ಉಂತಾಗದಂತಹ ಧಾರ್ಮಿಕ ಚಿಹ್ನೆ ಹಾಗೂ ಪ್ರೀತಿಪಾತ್ರರ ಹೆಸರುಗಳ ಟ್ಯಾಟುಗಳನ್ನು ಹಾಕಿಸಿಕೊಳ್ಳಲು ಅಭ್ಯರ್ಥಿಗಳಿಗೆ ಅವಕಾಶ ನೀಡಲಿದೆಯಂತೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


