ದೇಶ

ಉಗ್ರ ನಾವೇದ್ ಪಾಕಿಸ್ತಾನದವನಲ್ಲ, ಭಾರತೀಯ: ಪಾಕ್ ನ್ಯೂಸ್ ಚಾನಲ್

ಜಮ್ಮು ಮತ್ತು ಕಾಶ್ಮೀರದ ಉಧಂಪುರ್ ನಲ್ಲಿ ದಾಳಿ ನಡೆಸಿ ಜೀವಂತ ಸೆರೆ ಸಿಕ್ಕ ದಾಳಿಕೋರ ಉಸ್ಮಾನ್ ಅಲಿಯಾಸ್ ಮೊಹಮ್ಮದ್ ನಾವೇದ್ ಪಾಕಿಸ್ತಾನದವನಲ್ಲ...

ಉಗ್ರ ನಾವೇದ್ ಪಾಕಿಸ್ತಾನದವನಲ್ಲ, ಭಾರತೀಯ: ಪಾಕ್ ನ್ಯೂಸ್ ಚಾನಲ್
ಮೊಹಮ್ಮದ್ ನಾವೇದ್
Published On :

ಇಸ್ಲಾಮಾಬಾದ್: ಜಮ್ಮು ಮತ್ತು ಕಾಶ್ಮೀರದ ಉಧಂಪುರ್ ನಲ್ಲಿ ದಾಳಿ ನಡೆಸಿ ಜೀವಂತ ಸೆರೆ ಸಿಕ್ಕ ದಾಳಿಕೋರ ಉಸ್ಮಾನ್ ಅಲಿಯಾಸ್ ಮೊಹಮ್ಮದ್ ನಾವೇದ್ ಪಾಕಿಸ್ತಾನದವನಲ್ಲ, ಭಾರತೀಯ ಎಂದು ಪಾಕಿಸ್ತಾನದ ಜಿಯೋ ನ್ಯೂಸ್ ಚಾನಲ್ ವೊಂದು ವರದಿ ಮಾಡಿದೆ.

ಜಮ್ಮು ಕಾಶ್ಮೀರದ ಕುಲ್ಗಾಂ ಜಿಲ್ಲೆಯ ನಿವಾಸಿಯಾಗಿದ್ದು, ಬಸ್ ಕಂಡೆಕ್ಟರ್ ಆಗಿ ಕೆಲಸ ಮಾಡುತ್ತಿದ್ದ. ಅಲ್ಲದೆ ಆ ಪ್ರಾಂತ್ಯದಲ್ಲಿ ಆತನನ್ನು ಹುಚ್ಚ ಅಂತಾ ಗುರುತಿಸಲಾಗಿತ್ತು. ಬಂಧಿತ ಮಹಮ್ಮದ್ ನಾವೇದ್ ಮಾನಸಿಕ ಅಸ್ವಸ್ಥನಾಗಿದ್ದಾನೆ ಎಂದು ಜಿಯೋ ನ್ಯೂಸ್ ಚಾನಲ್ ನಿರೂಪಕ ಹಮೀದ್ ಮೀರ್ ಹೇಳಿಕೆ ನೀಡಿದ್ದಾನೆ.

ಮೊಹಮ್ಮದ್ ನಾವೇದ್ ತಂದೆ ಮೊಹಮ್ಮದ್ ಯಾಕೂಬ್ ಮತ್ತು ಆತನ ಇಬ್ಬರು ಮಕ್ಕಳು ಪಾಕಿಸ್ತಾನದ ಫೈಸಲಾಬಾದ್ ನ ರಫೀಕ್ ಕಾಲೋನಿಯ ಕೊನೆಯಲ್ಲಿರುವ ಸ್ಟ್ರೀಟ್ ನಂಬರ್ 3ರಲ್ಲಿರುವ ಮನೆಯಲ್ಲಿ ವಾಸವಾಗಿದ್ದಾರೆ. ಇದನ್ನು ಸ್ಥಳೀಯರು ಕೂಡಾ ಸ್ಪಷ್ಟಪಡಿಸಿದ್ದಾರೆ. ಮೊಹಮ್ಮದ್ ಯಾಕೂಬ್ ಅವರ 3ನೇ ಮಗನೇ ಉಧಂಪುರಲ್ಲಿ ಸೆರೆಸಿಕ್ಕ ಮೊಹಮ್ಮದ್ ನಾವೇದ್ ಎಂಬುದಾಗಿಯೂ ತಿಳಿಸಿದ್ದಾರೆ ಎಂದು ಎನ್ ಡಿಟಿವಿ ನ್ಯೂಸ್ ಚಾನಲ್ ವರದಿ ಮಾಡಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.