ಚೆಕ್‍ಬೌನ್ಸ್ ಮಸೂದೆಗೆ ಲೋಕಸಭೆ ಅಂಗೀಕಾರ
ಚೆಕ್‍ಬೌನ್ಸ್ ಪ್ರಕರಣಗಳ ಕುರಿತ ವಿಚಾರಣೆಯನ್ನು ಎಲ್ಲಿ ನಡೆಸಬೇಕೆಂದು ಇದ್ದ ಗೊಂದಲ ನಿವಾರಣೆಯಾಗಲಿದೆ

ನವದೆಹಲಿ: ಚೆಕ್‍ಬೌನ್ಸ್ ಪ್ರಕರಣಗಳ ಕುರಿತ ವಿಚಾರಣೆಯನ್ನು ಎಲ್ಲಿ ನಡೆಸಬೇಕೆಂದು ಇದ್ದ ಗೊಂದಲ ನಿವಾರಣೆಯಾಗಲಿದೆ. ಕೇಂದ್ರ ಸರ್ಕಾರ ಈ ಕುರಿತ ಸಂಧಾನ ಸಂರಚನಾ(ತಿದ್ದುಪಡಿ) 2015 ಮಸೂದೆಯನ್ನು ಗುರುವಾರ ಲೋಕಸಭೆಯಲ್ಲಿ ಮಂಡಿಸಲಾಗಿ ಧ್ವನಿಮತದಮೂಲಕ ಅಂಗೀಕಾರ ಸಿಕ್ಕಿತು.ಚೆಕ್‍ಬೌನ್ಸ್ ಪ್ರಕರಣಗಳಲ್ಲಿ ಚೆಕ್‍ನ್ನು ನೀಡಿದ ಸ್ಥಳ ಅಥವಾ ಕ್ಲಿಯರೆನ್ಸ್ ಸ್ಥಳದಲ್ಲಿ ವಿಚಾರಣೆ ನಡೆಸಬೇಕೆ ಎಂಬುದರ ಕುರಿತು ಗೊಂದಲಗಳು ಸೃಷ್ಟಿಯಾಗಿ ವಿವಾದಕ್ಕೂ ಕಾರಣವಾಗಿತ್ತು. ದೇಶದಲ್ಲಿ ಚೆಕ್‍ಬೌನ್ಸ್‍ಗೆ ಸಂಬಂಧಿಸಿದ ಸುಮಾರು 18 ಲಕ್ಷಕ್ಕಿಂತಲೂ ಹೆಚ್ಚು ಪ್ರಕರಣಗಳು ಪೆಂಡಿಂಗ್ ಇವೆ. ಮಸೂದೆ ಲೋಕಸಭೆ ಅಂಗೀಕಾರ ಪಡೆದಿದ್ದು ಅಧಿಸೂಚನೆ ಹೊರಡಿಸಿದ ನಂತರ ಕಾನೂನು ಜಾರಿಗೆ ಬರಲಿದೆ. ಇದರಿಂದ ಬಹಳಷ್ಟು ವರ್ಷಗಳಿಂದ ಇರುವ ಪ್ರಕರಣಗಳು ಇತ್ಯರ್ಥ ಕಾಣಲಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


