ಹಾರಾಡಿ, ಚೀರಾಡಿ ಸರ್ಕಾರ ಓಡಿ ಹೋಯಿತು: ಭೂಸ್ವಾಧೀನ ಮಸೂದೆ ಕುರಿತು ರಾಹುಲ್ ವ್ಯಂಗ್ಯ
ಭೂ ಸ್ವಾಧೀನ ಮಸೂದೆಗೆ ಹೊಸ ತಿದ್ದುಪಡಿ ತರುವುದಾಗಿ ಹೇಳಿ ಅರಚುತ್ತಾ, ಬೆದರಿಸಿದ್ದ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇದೀಗ ಓಡಿ ಹೋಗಿದೆ ಎಂದು ಕಾಂಗ್ರೆಸ್...

Published On :
ನವದೆಹಲಿ: ಭೂ ಸ್ವಾಧೀನ ಮಸೂದೆಗೆ ಹೊಸ ತಿದ್ದುಪಡಿ ತರುವುದಾಗಿ ಹಾರಾಡಿ, ಚೀರಾಡಿದ್ದ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇದೀಗ ಓಡಿ ಹೋಗಿದೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಲೇವಡಿ ಮಾಡಿದ್ದಾರೆ.
ಈ ಸಂಬಂಧ ಪ್ರತಿಕ್ರಿಯಿಸಿರುವ ರಾಹುಲ್ ಗಾಂಧಿ, ಮುಂಗಾರು ಅಧಿವೇಶನದಲ್ಲಿ ಭೂ ಸ್ವಾಧೀನ ಮಸೂದೆ ತಿದ್ದುಪಡಿಗೆ ಅಂಗೀಕಾರ ಪಡೆಯಲು ಹವಣಿಸಿತ್ತು. ಆದರೆ ಬಿಜೆಪಿಯ ಹಗರಣಗಳ ಸಂಬಂಧ ಸಚಿವರ ರಾಜಿನಾಮೆಗೆ ಪ್ರತಿಪಕ್ಷಗಳು ಒತ್ತಾಯಿಸಿದ್ದು, ಪ್ರಧಾನಿ ಮೋದಿ ಸರ್ಕಾರ ಇದೀಗ ಯುಪಿಎ ಆಡಳಿತವಾಧಿಯ ಭೂ ಸ್ವಾಧೀನ ಮಸೂದೆಯನ್ನು ಮುಂದುವರೆಸಲು ತೀರ್ಮಾನಿಸಿದೆ ಎಂದರು.
ಕಾಂಗ್ರೆಸ್ ಐಪಿಎಲ್ ಮಾಜಿ ಅಧ್ಯಕ್ಷ ಲಲಿತ್ ಮೋದಿ ಹಗರಣ ಹಾಗೂ ವ್ಯಾಪಂ ಹಗರಣಗಳ ಕುರಿತಂತೆ ಸಚಿವರು ರಾಜಿನಾಮೆ ನೀಡುವಂತೆ ಪ್ರತಿಪಕ್ಷಗಳು ಒತ್ತಾಡ ಹೇರಿದ್ದು, ಈ ಸಂಬಂಧ ಉಭಯ ಸದನಗಳಲ್ಲಿ ಪ್ರತಿಧ್ವನಿಸಿತ್ತು.
ಭೂ ಸ್ವಾಧೀನ ಮಸೂದೆಗೆ ರಾಜಕೀಯ ಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದರಿಂದ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ತಿದ್ದುಪಡಿ ಮಸೂದೆ ವಾಪಸ್ ಪಡೆಯುವ ಬಗ್ಗೆ ಚಿಂತನೆ ನಡೆಸಿತ್ತು.
2013ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಭೂ ಮಸೂದೆ ಕಾಯ್ದೆಗೆ ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಭೂ ಮಸೂದೆ ಕಾಯ್ದೆಯಲ್ಲಿ ಪ್ರಮುಖ ಬದಲಾವಣೆ ಮಾಡಿತ್ತು. ಆದರೆ ಪ್ರತಿಪಕ್ಷಗಳು ಈ ಹೊಸ ಪ್ರಸ್ತಾಪದ ಭೂ ಮಸೂದೆ ಕಾಯ್ದೆ ಜಾರಿಗೆ ವಿರೋಧ ವ್ಯಕ್ತಪಡಿಸಿ ಇದು ರೈತ ವಿರೋಧಿ ಮಸೂದೆ ಎಂದು ವಾಗ್ದಾಳಿ ನಡೆಸಿದ್ದವು.
ಆದರೆ ಭೂಸ್ವಾಧೀನ ತಿದ್ದುಪಡಿ ಮಸೂದೆ ಜಾರಿಗೆ ಸರ್ಕಾರಕ್ಕೆ ರಾಜ್ಯಸಭೆಯಲ್ಲಿ ಭಾರೀ ಹಿನ್ನಡೆ ಉಂಟಾಗಿತ್ತು. ಅಲ್ಲದೇ ಮಸೂದೆ ಜಾರಿಗೆ ಬೆಂಬಲ ನೀಡಬೇಕೆಂಬ ಪ್ರಧಾನಿ ಮೋದಿ ಮನವಿಗೂ ಪ್ರತಿಪಕ್ಷಗಳು ಸ್ಪಂದಿಸಿಲ್ಲವಾಗಿತ್ತು. ಆ ನಿಟ್ಟಿನಲ್ಲಿ ಇದೀಗ ಉಲ್ಟಾ ಹೊಡೆದಿರುವ ಕೇಂದ್ರ ಸರ್ಕಾರ 2013ರ ಮಸೂದೆಯನ್ನು ಹಾಗೆಯೇ ಉಳಿಸಿಕೊಳ್ಳಲು ಚಿಂತನೆ ನಡೆಸಿದೆ ಎಂದು ವರದಿ ವಿವರಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


