ದೇಶ

ಭೂಸ್ವಾಧೀನ ಮಸೂದೆ ವರದಿ ಸಲ್ಲಿಕೆ ಅವಧಿ ವಿಸ್ತರಣೆ

ಕೇಂದ್ರ ಎನ್ ಡಿಎ ಸರ್ಕಾರದ ಬಹುವಿವಾದಿತ ಭೂ ಸ್ವಾಧೀನ ಮಸೂದೆಗೆ ಸಂಬಂಧಿಸಿದಂತೆ ಸರ್ಕಾರ ರಚಿಸಿರುವ ಜಂಟಿ ಸದನ ಸಮಿತಿ ಸಮೀಕ್ಷೆಯ ವರದಿ ನೀಡಲು ...

ಭೂಸ್ವಾಧೀನ ಮಸೂದೆ ವರದಿ ಸಲ್ಲಿಕೆ ಅವಧಿ ವಿಸ್ತರಣೆ
ಸಂಸತ್
Published On :

ನವದೆಹಲಿ: ಕೇಂದ್ರ ಎನ್ ಡಿಎ ಸರ್ಕಾರದ ಬಹುವಿವಾದಿತ ಭೂ ಸ್ವಾಧೀನ ಮಸೂದೆಗೆ ಸಂಬಂಧಿಸಿದಂತೆ ಸರ್ಕಾರ ರಚಿಸಿರುವ ಜಂಟಿ ಸದನ ಸಮಿತಿ ಸಮೀಕ್ಷೆಯ ವರದಿ ನೀಡಲು ನಾಲ್ಕು ದಿನಗಳ ಅವಧಿ ವಿಸ್ತರಿಸಲಾಗಿದೆ.

ಸಂಸತ್ತಿನ ಜಂಟಿ ಸದನ ಸಮಿತಿ ಇತ್ತೀಚೆಗೆ ನಡೆದ ಸಭೆಯಲ್ಲಿ ವರದಿ ನೀಡಲು ಎರಡು ದಿನಗಳ ಹೆಚ್ಚಿನ ಕಾಲಾವಾಕಾಶ ನೀಡುವಂತೆ ಕೋರಿತ್ತು. ಅದರಂತೆ ಸರ್ಕಾರ ಭೂ ಸ್ವಾಧೀನ ಮಸೂದೆ ಅಧ್ಯಯನ ವರದಿ ವರದಿ ಸಲ್ಲಿಸಲು ಆಗಸ್ಚ್ 7ರ ವರೆಗೆ ಗಡುವು ನೀಡಿದೆ.

ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಲಲಿತ್ ಮೋದಿ ಹಾಗೂ ವ್ಯಾಪಂ ಹಗರಣ ಸಂಬಂಧ ಪ್ರತಿ ಪಕ್ಷಗಳು ಕೋಲಾಹಲ ಸೃಷ್ಠಸಿದ್ದು ಸದನ ನಡೆಯಲು ಅವಕಾಶ ನೀಡುತ್ತಿಲ್ಲ.ಹೀಗಾಗಿ ಜಂಟಿ ಸದನ ಸಮಿತಿ ಹೆಚ್ಚುವರಿ ಕಾಲಾವಾಕಾಶ ಕೋರಿದೆ. ಈ ಮೊದಲು ಆಗಸ್ಟ್ 3 ರೊಳಗೆ ಅಧ್ಯಯನ ವರದಿ ನೀಡುವಂತೆ ಸೂಚಿಸಲಾಗಿತ್ತು. ಭೂ ಸ್ವಾದೀನ ದಿಂದಾಗುವ ರೈತರಿಗೆ ಆಗುವ ಒಳಿತು ಕೆಡುಕು, ಪಾರದರ್ಶಕವಾಗಿ ನೀಡುವ ಪರಿಹಾರ, ಸೇರಿದಂತೆ ಹಲವು ವಿಷಯಗಳ ಬಗ್ಗೆ ಸಂಸದೀಯಸಮಿತಿ ಅಧ್ಯಯನ ನಡೆಸಿ ವರದಿ ಸಿದ್ದಪಡಿಸಿದೆ.






Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.