ಅಪ್ರಾಪ್ತೆಯನ್ನು ಮದುವೆಯಾಗಿ ಮನೆಯಿಂದಾಚೆಗಟ್ಟಿದ ಅತ್ಯಾಚಾರಿ
14 ವರ್ಷದ ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರ ಮಾಡಿದ ಯುವಕನೊಬ್ಬ ಪ್ರಾಯಶ್ಚಿತಕ್ಕಾಗಿ ಆಕೆಯನ್ನು ಮದುವೆಯಾಗಿ ಪೋಷಕರು ಒಪ್ಪದ ಕಾರಣ ಆಕೆಯನ್ನು ಮನೆಯಿಂದಾಚೆಗೆ ಹಾಕಿರುವ ಘಟನೆಯೊಂದು ತಮಿಳುನಾಡಿನ ಇಡುತನೂರ್ ಗ್ರಾಮದಲ್ಲಿ ನಡೆದಿದೆ...

ವಿಲ್ಲುಪುರಂ: 14 ವರ್ಷದ ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರ ಮಾಡಿದ ಯುವಕನೊಬ್ಬ ಪ್ರಾಯಶ್ಚಿತಕ್ಕಾಗಿ ಆಕೆಯನ್ನು ಮದುವೆಯಾಗಿ ಪೋಷಕರು ಒಪ್ಪದ ಕಾರಣ ಆಕೆಯನ್ನು ಮನೆಯಿಂದಾಚೆಗೆ ಹಾಕಿರುವ ಘಟನೆಯೊಂದು ತಮಿಳುನಾಡಿನ ಇಡುತನೂರ್ ಗ್ರಾಮದಲ್ಲಿ ನಡೆದಿದೆ.
ಅಪ್ರಾಪ್ತ ಬಾಲಕಿ ರಿಯಾ (14) ಅತ್ಯಾಚಾರಕ್ಕೊಳಪಟ್ಟ ಸಂತ್ರಸ್ಥೆಯಾಗಿದ್ದು, ಇಡುತನೂರ್ ಗ್ರಾಮದ ಶಾಲೆಯೊಂದರಲ್ಲಿ 10 ತರಗತಿ ಓದಿದ್ದಳು, ಅನುತ್ತೀರ್ಣ ಹೊಂದಿದ ಕಾರಣ ಬಾಲಕಿ ಸಂಬಂಧಿಕರ ಮನೆಯೊಂದರಲ್ಲಿ ನೆಲೆಸಿದ್ದಳು. ಬಾಲಕಿ ಒಂಟಿಯಾಗಿರುವುದನ್ನೇ ಕಾದಿದ್ದ ಅದೇ ಹಳ್ಳಿಯ ಯುವಕನಾದ (23) ವೆಂಕಟೇಶ್ ಎಂಬಾತ ಮನೆಯಲ್ಲಿ ಯಾರೂ ಇಲ್ಲದಿರುವ ಸಂದರ್ಭ ನೋಡಿಕೊಂಡು ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ್ದಾನೆ. ನಂತರ ಈ ವಿಷಯವನ್ನು ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಅಲ್ಲದೆ, ಕೆಲವು ದಿನಗಳ ಬಳಿಯ ಬಾಲಕಿಯನ್ನು ಮದುವೆಯಾಗುವುದಾಗಿ ಪ್ರಮಾಣ ಮಾಡಿದ್ದಾನೆ. ಇದರಂತೆ ಏ.8ರಂದು ಬಾಲಕಿಯನ್ನು ಹತ್ತಿರದಲ್ಲಿದ್ದ ದೇವಸ್ಥಾನವೊಂದಕ್ಕೆ ಕರೆದೊಯ್ದು ಮದುವೆಯಾಗಿದ್ದಾನೆ. ಆದರೆ, ತಾಳಿಕಟ್ಟಿದ ಬಳಿಕ ಬಾಲಕಿಯನ್ನು ಆಕೆಯ ಮನೆಗೆ ಹೋಗುವಂತೆ ಹೇಳಿದ್ದಾನೆ.
ಬಾಲಕಿ ತನ್ನ ಮನೆಗೆ ಹೋದ ಸ್ವಲ್ಪ ದಿನಗಳ ಬಳಿಕ ಬಾಲಕಿಯ ಕತ್ತಿನಲ್ಲಿ ತಾಳಿಯಿರುವುದು ಆಕೆಯ ತಾಯಿಯ ಗಮನಕ್ಕೆ ಬಂದಿದೆ. ಗಾಬರಿಗೊಂಡ ತಾಯಿ ಬಾಲಕಿಯನ್ನು ವಿಚಾರಿಸಿದ್ದಾಳೆ. ಈ ವೇಳೆ ಬಾಲಕಿ ನಡೆದ ವಿಷಯವನ್ನು ತಾಯಿಯ ಬಳಿ ವಿವರಿಸಿದ್ದಾಳೆ. ನಂತರ ಈ ವಿಷಯವನ್ನು ಮನೆಯವರೊಂದಿಗೆ ಚರ್ಚೆ ನಡೆಸಿದ ತಾಯಿ ಬಾಲಕಿಯನ್ನು ತಮ್ಮ ಮನೆಗೆ ಕರೆದೊಯ್ಯುವಂತೆ ಅತ್ಯಾಚಾರಿ ಯುವಕನೊಂದಿಗೆ ಮನವಿ ಮಾಡಿದ್ದಾರೆ.
ಇದರಂತೆ ಬಾಲಕಿಯನ್ನು ಯುವಕ ಆತನ ಮನೆಗೆ ಕರೆದೊಯ್ದಾಗ ಆತನ ಮನೆಯವರಾದ ಧನಬಾಯ್ (50), ಪಾಪತಿ (40) ಎಂಬುವವರು ನಿರಾಕರಿಸಿದ್ದಾರೆ. ಅಲ್ಲದೆ, ಬಾಲಕಿಯನ್ನು ಮನೆಗೆ ಕರೆತಂದರೆ ಆಕೆಯನ್ನು ಕೊಲ್ಲುವುದಾಗಿ ಹೇಳಿದ್ದಾರೆ. ಇದಕ್ಕೆ ಹೆದರಿದ ಯುವಕ ಪೋಷಕರ ಒಪ್ಪಿಗೆ ಇಲ್ಲದೆ ಸಂಸಾರ ನಡೆಸಲು ಸಾಧ್ಯವಿಲ್ಲ ಎಂದು ಹೇಳಿ ಆಕೆಯನ್ನು ಮನೆಗೆ ಕಳುಹಿಸಿದ್ದಾನೆ. ಬಾಲಕಿ ತನ್ನ ಮನೆಗೆ ಹೋಗಿ ನಡೆದ ಸಂಗತಿಯನ್ನು ತನ್ನ ತಾಯಿಯ ಬಳಿ ಹೇಳಿಕೊಂಡಿದ್ದಾಳೆ. ನಂತರ ಬಾಲಕಿಯನ್ನು ಪೊಲೀಸ್ ಠಾಣೆಗೆ ಕರೆದೊಯ್ದ ತಾಯಿ ಅತ್ಯಾಚಾರಿ ಯುವಕ ವೆಂಕಟೇಶ್ ಹಾಗೂ ಆತನ ಮನೆಯವರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣ ಸಂಬಂಧ ತನಿಖೆ ಕೈಗೊಂಡ ಪೊಲೀಸರು ಈಗಾಗಲೇ ಯುವಕನ ಮನೆಯವರಾದ ಧನಭಾಯ್ ಹಾಗೂ ಪಾಪತಿ ಎಂಬುವವರನ್ನು ಬಂಧನಕ್ಕೊಳಪಡಿಸಿದ್ದು, ಅತ್ಯಾಚಾರಿ ಯುವಕ ವೆಂಕಟೇಶ್ ಗಾಗಿ ಹುಡುಕಾಟ ನಡೆಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


