ದೇಶ

ಆರೋಪ ಸುಳ್ಳೆಂದ ಹಿಲರಿ

ಹಿಲರಿ ಕ್ಲಿಂಟನ್ ಅವರ ಮತದಾನದ ದಾಖಲೆಗಳು ಹಾಗೂ ಹೇಳಿಕೆಗಳನ್ನು ಸರಿಯಾಗಿ ಗಮನಿಸಿದರೆ ಈ ರೀತಿಯ ಆರೋಪಗಳು ಕೇವಲ ಒಂದು ಷಡ್ಯಂತ್ರ...

ಆರೋಪ ಸುಳ್ಳೆಂದ ಹಿಲರಿ
ಹಿಲರಿ ಕ್ಲಿಂಟನ್
Published On :

ವಾಷಿಂಗ್ಟನ್: ಭಾರತದ ಮೂಲಕ ಹರಿದು ಬಂದ ನಿಧಿಯಿಂದಾಗಿ ಭಾರತ- ಅಮೆರಿಕ ಅಣು ಒಪ್ಪಂದಕ್ಕೆ ಸಂಬಂಧಿಸಿದ ತಮ್ಮ ನಿಲುವು ಬದಲಾಯಿತು ಎನ್ನುವ ಆರೋಪವನ್ನು ಅಧ್ಯಕ್ಷೀಯ ಚುನಾವಣೆಗಾಗಿ ಸ್ಪರ್ಧಿಸಲು ಇಚ್ಛೆ ವ್ಯಕ್ತಪಡಿಸಿರುವ ಹಿಲರಿ ಕ್ಲಿಂಟನ್ ತಳ್ಳಿಹಾಕಿದ್ದಾರೆ. ಹಿಲರಿ ಕ್ಲಿಂಟನ್ ಅವರ ಮತದಾನದ ದಾಖಲೆಗಳು ಹಾಗೂ ಹೇಳಿಕೆಗಳನ್ನು ಸರಿಯಾಗಿ ಗಮನಿಸಿದರೆ ಈ ರೀತಿಯ ಆರೋಪಗಳು ಕೇವಲ ಒಂದು ಷಡ್ಯಂತ್ರ
ಎನ್ನುವುದು ಬಯಲಾಗುತ್ತದೆ ಎಂದು ಹಿಲರಿ ಪ್ರಚಾರಾಂದೋಲನದ ವಕ್ತಾರ ಜೋಶ್ ಶ್ವೆರಿನ್ ಹೇಳಿದ್ದಾರೆ. ಪೀಟರ್ ಶ್ವೀಝರ್ ಅವರು ಬರೆದಿರುವ ಹೌ ಆ್ಯಂಡ್ ವೈ ಫಾರಿ ನ್ ಗವರ್ನ್‍ಮೆಂಟ್ಸ್ ಆ್ಯಂಡ್ ಬ್ಯುಸಿನೆಸ್ಸಸ್ ಹೆಲ್ಪ್  ಮೇಕ್ ಬಿಲ್ ಆ್ಯಂಡ್ ಹಿಲರಿ ರಿಚ್ ಎನ್ನುವ ಕೃತಿ ಇತ್ತೀಚೆಗೆ ಅಮೆರಿಕದಲ್ಲಿ ಸಾಕಷ್ಟು ಸುದ್ದಿ ಮಾಡುತ್ತಿದೆ. ಈ ಕೃತಿಯಲ್ಲಿ ಭಾರತದ ಜತೆಗಿನ ಅಣು ಒಪ್ಪಂದಕ್ಕೆ ಸಂಬಂಧಿಸಿ ಅನೇಕ ಪ್ರಶ್ನೆಗಳನ್ನು ಎತ್ತಲಾಗಿದೆ. ಅಣು ಒಪ್ಪಂದ ಕುದುರಿಸುವಲ್ಲಿ ಇಂಡಿಯನ್- ಅಮೆರಿಕನ್ ಹೋಟೆಲ್ ಉದ್ಯಮಿ ಸಂತ್ ಚಟ್ವಾಲ್ ಅವರು ಪ್ರಮುಖ ಪಾತ್ರವಹಿಸಿದ್ದರು. ಹೀಗಾಗಿ ಅವರಿಗೆ ಭಾರತವು ಪದ್ಮ ಪ್ರಶಸ್ತಿ ನೀಡಿ ಗೌರವಿಸಿತ್ತು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.