ಮಾಜಿ ಗೆಳತಿ ಮಾತು ಕೇಳಿ ಕೊಲೆ ಮಾಡಿ ಹೃದಯ ತಿಂದವನಿಗೆ 18 ವರ್ಷ ಜೈಲು!
ಮಾಜಿ ಪ್ರಿಯತಮೆ ಮಾತು ಕೇಳಿದ ಭೂಪನೊಬ್ಬ ಆಕೆಯ ಗೆಳೆಯನನ್ನು ಕೊಂದು ಹೃದಯ ತಿಂದ ಪಾಪಕ್ಕೆ ಇದೀಗ 18 ವರ್ಷ ಸೆರೆವಾಸದಲ್ಲಿರುವಂತಾಗಿದೆ...

ಜೋಹಾನ್ಸ್ಬರ್ಗ್: ಮಾಜಿ ಪ್ರಿಯತಮೆ ಮಾತು ಕೇಳಿದ ಭೂಪನೊಬ್ಬ ಆಕೆಯ ಗೆಳೆಯನನ್ನು ಕೊಂದು ಹೃದಯ ತಿಂದ ಪಾಪಕ್ಕೆ ಇದೀಗ 18 ವರ್ಷ ಸೆರೆವಾಸದಲ್ಲಿರುವಂತಾಗಿದೆ.
ಆಂಡ್ರ್ಯೂ ಚಿಮ್ಹೋಜಾ(34) ಎಂಬಾತ ಮೂಲತಃ ದಕ್ಷಿಣ ಆಫ್ರಿಕಾದವನಾಗಿದ್ದು, ಈತ ಪ್ರೀತಿ ಎಂಬ ಮಾಯಾ ಲೋಕದಲ್ಲಿ ಸಿಲುಕಿದ್ದ. ಕೆಲವು ವರ್ಷಗಳ ಹಿಂದೆ ಈತ ಪ್ರೀತಿಸಿದ್ದ ಪ್ರಿಯತಮೆ ಈತನನ್ನು ಬಿಟ್ಟು ಹೋಗಿದ್ದಳು. ಪ್ರಿಯತಮೆ ಪ್ರೀತಿಯ ಗುಂಗಿನಲ್ಲೇ ಇದ್ದವನಿಗೆ ಮಾನಸಿಕ ಅಸ್ವಸ್ಥನಾಗಿರುವಂತೆ ವರ್ತಿಸುತ್ತಿದ್ದ.
ಆಂಡ್ರ್ಯೂ ಚಿಮ್ಹೋಜಾ ಪ್ರೀತಿಸಿದ ಯುವತಿ ಮತ್ತೊಬ್ಬ ಯುವಕ ಬುಯಿಸೆಲೋ ಮನೋನಾ ಎಂಬಾತನನ್ನು ಪ್ರೀತಿಸಿದ್ದಳು. ಆದಾವ ಕಾರಣಕ್ಕೋ ಏನೋ ಇದ್ದಕ್ಕಿದ್ದಂತೆ ಆಂಡ್ರ್ಯೂ ಚಿಮ್ಹೋಜಾ ಬಳಿ ಬಂದ ಆಕೆ ತನ್ನ ಗೆಳೆಯನನ್ನು ಕೊಂದು ಆತನ ಹೃದಯವನ್ನು ತರುವಂತೆ ಹೇಳಿದ್ದಾಳೆ. ಪ್ರಿಯತಮೆ ಪ್ರೀತಿಯಲ್ಲಿ ಬಿದ್ದಿದ್ದ ಆಂಡ್ರ್ಯೂ ಚಿಮ್ಹೋಜಾ ಆಕೆಯ ಮಾತನ್ನು ಕೇಳಿ ಜೂನ್ 2014ರ ಕೆಪ್ಟೌನ್ ನಗರದ ಗುಗುಲೆಯಥು ಪ್ರದೇಶದಲ್ಲಿ ಬುಯಿಸೆಲೋ ಮನೋನಾನನ್ನು ಹತ್ಯೆ ಗೈದು ಚಾಕುವಿನಿಂದ ಇರಿದು, ಆತನ ಹೃದಯವನ್ನು ಕಚ್ಚಿ ಎಳೆದು ತಿನ್ನುವ ಮೂಲಕ ರಾಕ್ಷಸ ಸ್ವರೂಪವನ್ನು ಪ್ರದರ್ಶಿಸಿದ್ದ.
ಪ್ರಕರಣವನ್ನು ದಾಖಲಿಸಿಕೊಂಡಿದ್ದ ಪೊಲೀಸರು ಆತನನ್ನು ಬಂಧಿಸಿ ನ್ಯಾಯಾಂಗದ ವಶಕ್ಕೆ ಒಪ್ಪಿಸಿದ್ದರು. ವಿಚಾರಣೆ ಸಮಯದಲ್ಲಿ ತಾನು ಮಾಡಿದ ಪೈಶಾಚಿಕ ಕೃತ್ಯವನ್ನು ಈತ ಒಪ್ಪಿಕೊಂಡಿದ್ದಾನೆ. ಇದಕ್ಕೆ ಆತನ ಗೆಳತಿ ಸೃಷ್ಟಿಸಿದ ಅನಿವಾರ್ಯತೆಯೇ ಕಾರಣ ಎಂದು ಆತ ಹೇಳಿದ್ದನು.
ಈತನ ಮಾತು ಕೇಳಿದ ನ್ಯಾಯಾಂಗವು ಮನೋರೋಗ ಪರೀಕ್ಷೆಗೆ ಒಳಪಡಿಸಿದ್ದಾರು. ಮನೋರೋಗ ಪರೀಕ್ಷೆಯ ವೇಳೆ ಈತ ಯಾವುದೇ ಸಮಸ್ಯೆಯಿಂದ ಬಳುತ್ತಿಲ್ಲ ಎಂಬುದನ್ನು ಅರಿತ ನ್ಯಾಯಾಲಯವು, ಇಂದು ಈತನಿಗೆ 18 ವರ್ಷಗಳ ಕಾಲ ಕಠಿಣ ಸೆರೆವಾಸ ಶಿಕ್ಷೆ ವಿಧಿಸುವಂತೆ ಆದೇಶ ಹೊರಡಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


