ನವೀನ್ ಜಿಂದಾಲ್ ಪಾಸ್‌ಪೋರ್ಟ್ ಸೀಜ್ ಮಾಡದ ಸಿಬಿಐಗೆ ಕೋರ್ಟ್ ತರಾಟೆ
ಕಲ್ಲಿದ್ದಲು ಹಂಚಿಕೆ ಹಗರಣದ ಆರೋಪಿ, ಕಾಂಗ್ರೆಸ್ ನಾಯಕ ಹಾಗೂ ಉದ್ಯಮಿ ನವೀನ್ ಜಿಂದಾಲ್ ಅವರ ಪಾಸ್‌ಪೋರ್ಟ್ ಸೀಜ್...

ನವದೆಹಲಿ: ಕಲ್ಲಿದ್ದಲು ಹಂಚಿಕೆ ಹಗರಣದ ಆರೋಪಿ, ಕಾಂಗ್ರೆಸ್ ನಾಯಕ ಹಾಗೂ ಉದ್ಯಮಿ ನವೀನ್ ಜಿಂದಾಲ್ ಅವರ ಪಾಸ್‌ಪೋರ್ಟ್ ಸೀಜ್ ಮಾಡದ ಸಿಬಿಐಗೆ ವಿಶೇಷ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ಬಹುಕೋಟಿ ಕಲ್ಲಿದ್ದಲು ಹಗರಣ ಸಂಬಂಧ ನವೀನ್ ಜಿಂದಾಲ್, ಮಾಜಿ ಸಚಿವ ದಾಸರಿ ನಾರಾಯಣರಾವ್, ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಮಧುಕೋಡ ಸೇರಿದಂತೆ 14 ಆರೋಪಿಗಳ ವಿರುದ್ಧ ಸಿಬಿಐ ನಿನ್ನೆ ಚಾರ್ಜ್‌ಶೀಟ್ ಸಲ್ಲಿಸಿದ್ದು, ಇಂದಿನಿಂದ ಸಿಬಿಐ ವಿಶೇಷ ಕೋರ್ಟ್‌ನಲ್ಲಿ ವಿಚಾರಣೆ ಆರಭಂವಾಗಿದೆ.
ವಿಚಾರಣೆ ವೇಳೆ ನವೀನ್ ಜಿಂದಾಲ್ ಪಾಸ್‌ಪೋರ್ಟ್ ಸೀಜ್ ಮಾಡದ ಸಿಬಿಐ ಕ್ರಮವನ್ನು ಪ್ರಶ್ನಿಸಿದ ನ್ಯಾಯಮೂರ್ತಿ ಭರತ್ ಪರಾಶರ್ ಅವರು, ತನಿಖಾ ಸಂಸ್ಥೆ ಕೆಲವು ಆರೋಪಿಗಳಿಗೆ ಪ್ರತ್ಯೇಕ ನೀತಿ ಅನುಸರಿಸಬಾರದು ಎಂದರು. ಅಲ್ಲದೆ ತನಿಖೆಯ ಪಾಸ್‌ಪೋರ್ಟ್ ಸೀಜ್ ಮಾಡುವುದಕ್ಕೆ ಸಂಬಂಧಿಸಿದಂತೆ ಎಲ್ಲಾ ಆರೋಪಿಗಳಿಗೂ ಒಂದೇ ನೀತಿ ಅನುಸರಿಸುವ ಬಗ್ಗೆ ಖಚಿತಪಡಿಸುವಂತೆ ಸಿಬಿಐ ನಿರ್ದೇಶಕರಿಗೆ ಸೂಚಿಸಿದ್ದಾರೆ.
'ಸಾಮಾನ್ಯವಾಗಿ ಪ್ರಕರಣ ದಾಖಲಾದ ನಂತರ ಆರೋಪಿಗಳ ಪಾಸ್‌ಪೋರ್ಟ್ ಅನ್ನು ವಶಪಡಿಸಿಕೊಳ್ಳಲಾಗುತ್ತದೆ. ಆದರೆ ಪ್ರಕರಣದಲ್ಲಿ ಸಿಬಿಐ ವಿಭಿನ್ನ ನೀತಿ ಅನುಸರಿಸಿದೆ' ಎಂದು ನ್ಯಾಯಾಧೀಶರು ತರಾಟೆಗೆ ತೆಗೆದುಕೊಂಡರು.
ಹಿರಿಯ ಸರ್ಕಾರಿ ಅಭಿಯೋಜಕ ವಿ.ಕೆ.ಶರ್ಮಾ, ತನಿಖೆಯ ವೇಳೆ ನವೀನ್ ಜಿಂದಾಲ್ ಅವರ ಪಾಸ್‌ಪೋರ್ಟ್ ವಶಪಡಿಸಿಕೊಂಡಿರಲಿಲ್ಲ. ಆದರೆ ಪಾಸ್‌ಪೋರ್ಟ್ ಒಪ್ಪಿಸುವಂತೆ ಜಿಂದಾಲ್ ಅವರಿಗೆ ನೋಟಿಸ್ ಸಿಬಿಐ ನೋಟಿಸ್ ನೀಡಿತ್ತು. ಕೆಲವು ದಿನಗಳ ಬಳಿಕ ಅವರು ಪಾಸ್‌ಪೋರ್ಟ್‌ನ ಕಲರ್ ಪ್ರತಿಯೊಂದನ್ನು ನೀಡಿ, ಪಾಸ್‌ಪೋರ್ಟ್ ಸೀಜ್ ಮಾಡದಂತೆ ಮನವಿ ಮಾಡಿದ್ದರು ಎಂದು ಕೋರ್ಟ್‌ಗೆ ತಿಳಿಸಿದರು
ಸಿಬಿಐನ ಈ ಕ್ರಮದ ಬಗ್ಗೆ ತೀವ್ರ ಅಸಮಾಧನ ವ್ಯಕ್ತಪಡಿಸಿದ ನ್ಯಾಯಾಧೀಶರು, ಕೋರ್ಟ್‌ನ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಬೇಡಿ, ಮುಂದೆ ಎಲ್ಲಾ ಪ್ರಕರಣಗಳಲ್ಲೂ ಒಂದೇ ರೀತಿಯ ಮಾನದಂಡ ಅನುಸರಿಸುವಂತೆ ಸಿಬಿಐ ನಿರ್ದೇಶಕರಿಗೆ ಸೂಚಿಸಿ, ಪ್ರಕರಣದ ವಿಚಾರಣೆಯನ್ನು ಮೇ 6ಕ್ಕೆ ಮುಂದೂಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


