ದೇಶ

ಟ್ರಕ್‌ಗೆ ಡಿಕ್ಕಿ ನಂತ್ರ, ಮದುವೆ ದಿಬ್ಬಣ ವಾಹನ ಪಲ್ಟಿ: 10 ಸಾವು

ಮದುವೆ ದಿಬ್ಬಣಿಗರನ್ನು ಒಯುತ್ತಿದ್ದ ಮೆಟಾಡರ್‌ ವ್ಯಾನೊಂದು ಟ್ರಕ್‌ಗೆ ಢಿಕ್ಕಿ ಹೊಡೆದ ಪರಿಣಾಮ ಓರ್ವ ಬಾಲಕಿ ಸೇರಿದಂತೆ ಹತ್ತು ಮಹಿಳೆಯರು ಮೃತಪಟ್ಟಿರುವ...

ಟ್ರಕ್‌ಗೆ ಡಿಕ್ಕಿ ನಂತ್ರ, ಮದುವೆ ದಿಬ್ಬಣ ವಾಹನ ಪಲ್ಟಿ: 10 ಸಾವು
ವ್ಯಾನ್ ಟ್ರಕ್ ಡಿಕ್ಕಿ(ಸಾಂದರ್ಭಿಕ ಚಿತ್ರ)
Published On :

ರಾಯಪುರ: ಮದುವೆ ದಿಬ್ಬಣಿಗರನ್ನು ಒಯುತ್ತಿದ್ದ ಮೆಟಾಡರ್‌ ವ್ಯಾನೊಂದು ಟ್ರಕ್‌ಗೆ ಢಿಕ್ಕಿ ಹೊಡೆದ ಪರಿಣಾಮ ಓರ್ವ ಬಾಲಕಿ ಸೇರಿದಂತೆ ಹತ್ತು ಮಹಿಳೆಯರು ಮೃತಪಟ್ಟಿರುವ ದಾರುಣ ಘಟನೆ ಛತ್ತೀಸ್‌ಗಢದ ಬಾಲೋಡ್‌ ಜಿಲ್ಲೆಯಲ್ಲಿ ನಡೆದಿದೆ.

ಭಯ್ನಾಹರ ಗ್ರಾಮದಿಂದ ದಲ್ಲೀರ್‌ಝರಾಗೆ ಹೋಗುತ್ತಿದ್ದ ಮೆಟಾಡರ್‌ ವ್ಯಾನ್‌ ಬುಧವಾರ ನಸುಕಿನ ವೇಳೆ ಆರ್ಮೂರ್‌ ಕಾಸಾ ಗ್ರಾಮದಲ್ಲಿ ಎದುರಿನಿಂದ ಬರುತ್ತಿದ್ದ ಟ್ರಕ್‌ ಟ್ರೇಲರ್‌ಗೆ ಢಿಕ್ಕಿ ಹೊಡೆಯಿತು ಎಂದು ಬಾಲೋಡ್‌ ಪೊಲೀಸ್‌ ಸುಪರಿಂಟೆಂಡೆಂಟ್‌ ಶೇಖ್‌ ಆರಿಫ್ ಹುಸೇನ್‌ ತಿಳಿಸಿದ್ದು, ಮದುವೆ ಪಾರ್ಟಿ ಇದ್ದ ವ್ಯಾನ್‌ನ ಚಾಲಕನು ಮದ್ಯ ಸೇವನೆ ಮಾಡಿದ್ದಿರಬೇಕೆಂದು ಶಂಕಿಸಿದ್ದಾರೆ.

ಟ್ರಕ್‌ ಟೇಲರ್‌ಗೆ ಢಿಕ್ಕಿ ಹೊಡೆದ ರಭಸಕ್ಕೆ ವ್ಯಾನ್‌ ತಲೆ ಕೆಳಗಾಗಿ ಉರುಳಿ ಬಿತ್ತು. ಪರಿಣಾಮವಾಗಿ ಬಾಲಕಿ ಸೇರಿ 10 ಮಹಿಳೆಯರು ಸಾವಪ್ಪಿದ್ದಾರೆ. ಅಲ್ಲದೇ ವ್ಯಾನಿನೊಳಗಿದ್ದ ಇತರ 27 ಮಂದಿ ಪ್ರಯಾಣಿಕರು ಗಾಯಗೊಂಡಿದ್ದು, ಇವರಲ್ಲಿ ಐವರ ಸ್ಥಿತಿ ಗಂಭೀರವಿದೆ. ಅಲ್ಲದೆ 40 ಮಂದಿಯಿದ್ದ ವ್ಯಾನಲ್ಲಿ ಹೆಚ್ಚಿನವರು ಮಹಿಳೆಯರೇ ಆಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಾಥಮಿಕ ತನಿಖೆ ಪ್ರಕಾರ ವ್ಯಾನ್‌ ಚಾಲಕನ ಮದ್ಯ ಸೇವಿಸಿ ವಾಹನ ಚಲಾಯಿಸಿದ್ದಾಗಿ ತಿಳಿದುಬಂದಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.